ಸಿದ್ದರಾಮಯ್ಯ ಅವರ ಸೊಸೆ ಜೊತೆ ತೆಗೆದುಕೊಂಡ ಸೆಲ್ಫಿ ಬಗ್ಗೆ ಪ್ರಥಮ ಹೇಳೋದಿಷ್ಟು!

0
476

ಚಿರು ಸರ್ಜಾ ರನ್ನು ಕಳೆದುಕೊಂಡ ಮೇಘನರಾಜ್ ಅವರಿಗೆ ಧೈರ್ಯ ತುಂಬಲು ಅನೇಕ ನಟ ನಟಿಯರು ನೇರವಾಗಿ ಮೇಘನಾ ಅವರನ್ನು ಭೇಟಿಯಾಗಿ ಸ್ವಲ್ಪ ಸಮಯ ಅವರ ಜೊತೆ ಕಳೆದು ನಾವಿದ್ದೇವೆ ಚಿಂತೆ ಮಾಡಬೇಡಿ ಎಂಬುವ ಆತ್ಮವಿಶ್ವಾಸ ತುಂಬಿ ಬರುತ್ತಿದ್ದಾರೆ, ಅದೇ ಸಾಲಿನಲ್ಲಿ ಇತ್ತೀಚಿಗೆ ಬಿಗ್ ಬಾಸ್ ಪ್ರಥಮ್ ಹಾಗೂ ಸಿದ್ದರಾಮಯ್ಯ ಅವರ ಸೊಸೆಯಾದ ಸ್ಮಿತಾ ರಾಕೇಶ್ ಅವರು ಕೂಡ ಮೇಘನಾ ರಾಜ್ ಅವರನ್ನು ಭೇಟಿಯಾಗಿ ಧೈರ್ಯ ತುಂಬಿ ಬಂದಿದ್ದಾರೆ.

ಸಾಮಾನ್ಯವಾಗಿ ಸ್ಮಿತಾ ರಾಕೇಶ್ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ, ಇದೇ ಮೊದಲ ಬಾರಿಗೆ ಎಂದು ಹೇಳಿದರು ತಪ್ಪಾಗುವುದಿಲ್ಲ ಮೇಘನ ರಾಜ್ ಅವರ ಮನೆಯಲ್ಲಿ ಅವರ ಜೊತೆ ಕಾಣಿಸಿಕೊಂಡಿದ್ದಾರೆ, ಮೇಘನಾ ರಾಜ್ ಅವರ ಕುಟುಂಬದ ಜೊತೆ ಸಿದ್ಧರಾಮಯ್ಯ ಅವರ ಕುಟುಂಬದ ಒಡನಾಟವಿದೆ, ಇದೇ ಸಲುಗೆ ಹಾಗೂ ಸ್ನೇಹದ ಮೇರೆಗೆ ಸ್ಮಿತಾ ಅವರು ಮೇಘನಾ ಅವರನ್ನು ಭೇಟಿ ಮಾಡಿದ್ದಾರೆ ಹಾಗೂ ಅವರ ಆರೋಗ್ಯ ವಿಚಾರಿಸಿ ಕೆಲವೊತ್ತು ಅಲ್ಲಿ ಸಮಯ ಕಳೆದಿದ್ದಾರೆ.

ಇವರ ಜೊತೆ ಪ್ರಥಮ ಅವರು ಕೂಡ ಮೇಘನ ಅವರ ಮನೆಗೆ ತೆರಳಿದ್ದರು, ಇದೇ ವಿಚಾರವಾಗಿ ಫೋಟೋ ಒಂದನ್ನು ಕ್ಲಿಕ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು, ಇದೆ ಫೋಟೋದ ಬಗ್ಗೆ ಪ್ರಥಮ ಮತ್ತೆ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಇಲ್ಲಸಲ್ಲದ ಮಾತುಗಳು ಕೇಳಿ ಬರುತ್ತಿದ್ದು ಇದರ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆ ಎಂದು ಉದ್ದನೆಯ ಸಾಲು ಗಳನ್ನು ಬರೆದಿದ್ದಾರೆ.

ಪ್ರಥಮ ಪೋಸ್ಟ್ ನಲ್ಲಿ ಏನಿದೆ : ಭೇಟಿಯ ಬಗ್ಗೆ ಅನಾವಶ್ಯಕ ಕಲ್ಪನೆ ಬೇಡ. ಒಂದು ವಿಶೇಷ ಮನವಿ. ಸಂಬಂಧವೇ ಇರದ ಗಾಸಿಪ್ ಗಳು, ಇಲ್ಲಸಲ್ಲದ ವಿಚಾರ ಯೂಟ್ಯೂಬ್ ನಲ್ಲಿ ಹಾಕೋ ಮುಂಚೆ ಒಂದು ಸಲ ಮೇಘನಾ ರಾಜ್ ಬಗ್ಗೆ ಯೋಚಿಸಿ. ಮೇಘನಾ ಅವರ ಭಾವನೆಗಳನ್ನು ಗೌರವಿಸಿ. ಎಲ್ಲಿಯೂ ಮಾತನಾಡದ ಸ್ಮಿತಾ ಮೇಡಮ್ ಬಹಳಷ್ಟು ವಿಚಾರಗಳನ್ನು ಅಕ್ಕನ ಜಾಗದಲ್ಲಿ ನಿಂತು ಮೇಘನಾರ ಜೊತೆ ಮಾತನಾಡಿದ್ದಾರೆ. ಮಗುವಿನ ಬಗ್ಗೆ ಬಹಳಷ್ಟು ಕನಸು ಕಂಡಿದ್ದಾರೆ. ಅವರ ಎಲ್ಲಾ ಆಸೆಗಳು ಈಡೇರಲೆಂದು ಸ್ವಚ್ಚ ಮನಸ್ಸಿನಿಂದ ಹಾರೈಸೋಣ.

LEAVE A REPLY

Please enter your comment!
Please enter your name here