ಅಯ್ಯೋ ರಾಮ ತಲೆಯಿಲ್ಲದ ಈ ಪೇಂಟಿಂಗ್ ಮಾರಾಟವಾದ ಬೆಲೆ ಕೇಳಿದರೆ ಶಾಕ್ ಆಗ್ತೀರಾ!

    0
    1113

    ಚಿತ್ರಕಲೆಗೆ ಅತಿಯಾದ ಬೆಲೆ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಸಿಗುತ್ತದೆ, ಕೆಲವರಂತೂ ತಮಗೆ ಇಷ್ಟವಾದ ಕಲೆಗಾಗಿ ಎಷ್ಟು ಹಣವನ್ನು ಖರ್ಚು ಮಾಡಲು ತಯಾರು ಇರುತ್ತಾರೆ, ಇತ್ತೀಚಿಗೆ ಮಾಡ್ರನ್ ಆರ್ಟ್ ಎಂಬ ಹೆಸರಿನಲ್ಲಿ ಕಲಾವಿದರು ತಮ್ಮ ಕಲ್ಪನೆಗೆ ಏನು ಬರುತ್ತೋ ಅದನ್ನೇ ಬಣ್ಣಗಳಲ್ಲಿ ಚಿತ್ರಸಿ ಇಟ್ಟಿರುತ್ತಾರೆ ನಿಜ ಹೇಳಬೇಕು ಎಂದರೆ ಇದರ ಅರ್ಥ ಎಷ್ಟೋ ಜನಕ್ಕೆ ಆಗುವುದೇ ಇಲ್ಲ, ಅದೇ ರೀತಿಯಲ್ಲಿ ಇಲ್ಲೊಂದು ಚಿತ್ರ ನೋಡಿದರೆ ಇದಕ್ಕೆ ತಲೆಬುಡ ಏನು ಇಲ್ಲ ಎಂದು ಅನಿಸುತ್ತದೆ ಆದರೆ ಒಳ ಅರ್ಥ ನೋಡಿದವರಿಗೆ ಮಾತ್ರ ತಿಳಿಯುತ್ತದೆ ಎಂದೆ ಹೇಳುತ್ತಾರೆ.

    ಈ ಚಿತ್ರವನ್ನು ಒಮ್ಮೆ ನೋಡಿದರೆ ಅದರಲ್ಲಿ ಒಬ್ಬ ವ್ಯಕ್ತಿ ತನ್ನ ಮುಂದೆ ಇರುವ ಟೇಬಲ್ ಮೇಲೆ ಕೈಯಿಟ್ಟು ಎದೆ ಎತ್ತಿಕೊಂಡು ಕೂತಿದ್ದಾನೆ ಆದರೆ ಆತ ಯೋಚನೆ ಮಾಡುತ್ತಿದ್ದಾನೋ ಅಥವಾ ದುಃಖದಲ್ಲಿ ಇದ್ದಾನೋ ಇಲ್ಲ ನಗುತ್ತಿದ್ದಾನೆ ಆತನ ಮನಸ್ಸಿನ ಭಾವನೆಯನ್ನು ಏನು ಎಂದು ತಿಳಿಯಲು ಚಿತ್ರದಲ್ಲಿ ವ್ಯಕ್ತಿಯ ಮುಖವೇ ಇಲ್ಲ, ಬದಲಿಗೆ ಅಲ್ಲಿ ಶ್ವೇತವರ್ಣದ ಬಣ್ಣ ತುಂಬಿದ್ದಾರೆ ಈ ಚಿತ್ರದ ಕಲಾವಿದ, ಅದೇನೇ ಇರಲಿ ಇದರ ಅರ್ಥ ಏನು ಎಂಬುದು ನಾವು ಊಹೆ ಮಾಡಿಕೊಂಡರೆ ಸಾವಿರ ಆಲೋಚನೆಗಳು ಬರಬಹುದು, ನಿಜವಾದ ಅರ್ಥ ಏನು ಎಂಬುದನ್ನು ಆ ಕಲಾವಿದನೇ ಬಿಡಿಸಿ ಹೇಳ ಬೇಕು ಅಷ್ಟೇ.

    ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ವಿಚಾರ ಅದರ ಅರ್ಥದ ಬಗ್ಗೆ ಅಲ್ಲ ಈ ಚಿತ್ರದ ಬೆಲೆಯ ಬಗ್ಗೆ, ಹೌದು ಈ ಚಿತ್ರ ನ್ಯೂಯಾರ್ಕ್ನಲ್ಲಿ 26.8 ಮಿಲಿಯನ್ ಡಾಲರ್ ಮೊತ್ತಕ್ಕೆ ವ್ಯಾಪಾರ ಆಗಿದೆ ಎಂದರೆ ನೀವು ಇದನ್ನು ನಂಬಲೇಬೇಕು, ಈ ಚಿತ್ರ ಬಿಡಿಸಿದ ಕಲಾವಿದನ ಹೆಸರು ರೈನೆ ಮ್ಯಾಗಿಟ್ರೆ ಈ ರೀತಿಯ ದೊಡ್ಡ ಮಟ್ಟಕ್ಕೆ ಈ ಕಲಾವಿದನ ಚಿತ್ರ ಮಾರಾಟವಾಗುತ್ತಿರುವುದು ಇದು ಮೊದಲೇನಲ್ಲ ಅನೇಕ ಚಿತ್ರಗಳನ್ನು ಮಿಲಿಯನ್ ಮಟ್ಟದಲ್ಲಿ ಮಾರಾಟ ಮಾಡಿದ್ದಾನೆ.

    LEAVE A REPLY

    Please enter your comment!
    Please enter your name here