ತಕ್ಷಣಕ್ಕೆ ಕೆಮ್ಮು ಕಡಿಮೆಯಾಗಲು 10ಕ್ಕೂ ಹೆಚ್ಚು ಮನೆಮದ್ದು ಒಮ್ಮೆ ನೋಡಿ

0
1626

ಕೆಮ್ಮು ಒಮ್ಮೆ ಶುರುವಾದರೆ ಬಿಡುವುದು ತುಂಬಾ ಕಷ್ಟ, ಕಾಲಕ್ರಮೇಣ ಕೆಮ್ಮು ನೆಗಡಿಗೆ ಆಗಿ ಎದೆಯಲ್ಲಿ ಕಫ ತುಂಬುವಂತೆ ಮಾಡುತ್ತದೆ, ನಂತರ ನೀವು ವೈದ್ಯರ ಮೊರೆ ಹೋಗಿ ಗುಳಿಗೆಗಳನ್ನು ನುಂಗುತ್ತಾ ಸಿರಪ್ ಕುಡಿಯಲೇಬೇಕು, ನೀವೇನಾದರೂ ಹೆಚ್ಚಾಗಿ ನಿರ್ಲಕ್ಷ ಮಾಡಿದ್ದಲ್ಲಿ ಇಂಜೆಕ್ಷನ್ ಕೊಡುವುದು ಖಂಡಿತ, ಇದಕ್ಕೆಲ್ಲ ಬಹಳಷ್ಟು ಹಣವನ್ನು ವ್ಯಯ ಮಾಡಬೇಕಾಗುತ್ತದೆ, ಅದಕ್ಕಾಗಿಯೇ ಕೆಮ್ಮಿನ ಲಕ್ಷಣಗಳು ಶುರುವಾಗುತ್ತಿದ್ದಂತೆ ಇಂದು ನಾವು ತಿಳಿಸುವ ಹಲವು ಮನೆಮದ್ದು ಗಳಲ್ಲಿ ಒಂದನ್ನು ಬಳಸಿದರೆ ಕೆಮ್ಮು ಶುರುವಿನಲ್ಲಿ ಕಡಿಮೆಯಾಗುತ್ತದೆ.

ಅನಾನಸ್ ಹಣ್ಣನ್ನು ಅವಕಾಶ ಸಿಕ್ಕಾಗ ಸೇವನೆ ಮಾಡದೆ ಇರಬೇಡಿ, ಕಾರಣ ಅನಾನಸ್ ಹಣ್ಣನ್ನು ತಿನ್ನುವುದರಿಂದ ಗಂಟಲು ನೋವು ದೂರವಾಗುತ್ತದೆ.

ಅಮೃತಬಳ್ಳಿಯ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ನಾಲಿಗೆಯಲ್ಲಿ ದಕ್ಕುವುದರಿಂದ ಕೆಮ್ಮು ಹಾಗೂ ನಗಡಿ ದೂರವಾಗುತ್ತದೆ. ತುಳಸಿ ರಸ, ಕರಿಮೆಣಸಿನ ಪುಡಿಯನ್ನು ಬೆರೆಸಿ ಆಗಾಗ ಸೇವನೆ ಮಾಡುವುದರಿಂದ ಕೆಮ್ಮು ದೂರವಾಗುವುದು.

ನಿಮಗೆ ಬೇಕೆನಿಸಿದಾಗ ತಾಜಾ ಬೆಣ್ಣೆಯನ್ನು ಸೇವನೆ ಮಾಡುವುದರಿಂದಲೂ ಕೆಮ್ಮು ದೂರವಾಗುತ್ತದೆ. ಸಣ್ಣ ಮಕ್ಕಳಿಗೆ ಕೆಮ್ಮು ಬಂದಾಗ ಕತ್ತೆಯ ಹಾಲನ್ನು ತಂದು ಕುಡಿಸುವುದರಿಂದ ಕೆಮ್ಮು ಶಮನವಾಗುತ್ತದೆ.

ಓಮಿನಿ ಕಾಳು ಮತ್ತು ಮೆಂತ್ಯ ಬೆರೆಸಿ ಕಷಾಯವನ್ನು ತಯಾರಿಸಿ, ನೀವು ಸಿದ್ಧಪಡಿಸಿದ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಕೆಮ್ಮು ದೂರವಾಗುವುದು, ಹಾಗೆಯೇ ವಿಲೆದೆಲೆ, ಕಾಳುಮೆಣಸು, ಉಪ್ಪು ಸೇರಿಸಿ ಅಗೆಯುವುದರಿಂದ ಕೆಮ್ಮು ದೂರವಾಗುವುದು, ಅಥವಾ ಕೆಮ್ಮು ಶಮನವಾಗದ ಕಾದರೆ ದೊಡ್ಡಪತ್ರೆ, ಉಪ್ಪು ಬೆರೆಸಿ ಸೇವಿಸಬಹುದು.

ಲವಂಗ ಮತ್ತು ಹರಳು ಉಪ್ಪು ಸೇರಿಸಿ ಬಾಯಲ್ಲಿ ಇಟ್ಟುಕೊಂಡು ಚಪ್ಪರಿಸು ವುದರಿಂದ ನೆಗಡಿ ಮತ್ತು ಕೆಮ್ಮು ದೂರವಾಗುತ್ತದೆ. ದೀರ್ಘಕಾಲದಿಂದ ನೆಗಡಿ, ಕೆಮ್ಮು ರೋಗದಿಂದ ನರಳುವವರು ಬೆಳ್ಳುಳ್ಳಿ ರಸವನ್ನು ಪ್ರತಿನಿತ್ಯ ಸೇವಿಸುವುದರಿಂದ ಗುಣಮುಖರಾಗಬಹುದು.

ಅರಿಶಿನ ಪುಡಿ, ರಾಗಿ ಹಿಟ್ಟು ಬೆರೆಸಿ ಕೆಂಡದ ಮೇಲೆ ಹಾಕಿಕೊಂಡು ಹೊಗೆಯನ್ನು ತೆಗೆದುಕೊಳ್ಳುವುದರಿಂದ ನೆಗಡಿ ಅಥವಾ ಕೆಮ್ಮು ಮಾಯವಾಗುವುದು. ಕಿತ್ತಳೆ ರಸಕ್ಕೆ ಒಂದು ಚಿಟಿಕೆ ಉಪ್ಪು, ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಕೆಮ್ಮು ಶಮನವಾಗುವುದು.

LEAVE A REPLY

Please enter your comment!
Please enter your name here