10ಕ್ಕೂ ಹೆಚ್ಚಿನ ಕಾಯಿಲೆಗಳಿಗೆ ಒಂದು ಲೋಟ ಇದರ ನೀರು ಪ್ರತಿದಿನ ಕುಡಿದರೆ ಸಾಕು!

0
1417

ಬಾರ್ಲಿ ಈಗಿನ ಬಹಳ ಜನರಿಗೆ ಗೊತ್ತಿರುವುದಿಲ್ಲ, ಬಾರ್ಲಿಯು ನೋಡುವುದಕ್ಕೆ ಗೋಧಿ ಕಾಳಿನ ಆಕಾರದಲ್ಲಿ ಇರುತ್ತದೆ ಆದರೆ ಅದು ಹಕ್ಕಿಯ ಬಣ್ಣವನ್ನು ಹೊಂದಿರುತ್ತದೆ, ಭಾರತ ಹೊರತು ಹೊರದೇಶಗಳಲ್ಲಿ ಬಾರ್ಲಿ ಒಂದು ಪ್ರಮುಖ ಆಹಾರ ಬೆಳೆ, ಬಾರ್ಲಿಯ ಸೇವನೆಯಿಂದ ಮನುಷ್ಯನ ದೇಹಕ್ಕೆ ಹತ್ತು ಹಲವು ಆರೋಗ್ಯಕರ ಲಾಭವಿದೆ, ಲಾಭಗಳ ಬಗ್ಗೆ ಸಂಕ್ಷಿಪ್ತವಾಗಿ ಇಂದು ತಿಳಿಸಿಕೊಡುತ್ತೇವೆ.

ಮೂತ್ರ ಪ್ರಮಾಣ : ಪ್ರತಿದಿನ ಒಂದು ಲೋಟ ಬಾರ್ಲಿ ನೀರನ್ನು ಕುಡಿಯುವುದರಿಂದ ಮನುಷ್ಯನ ದೇಹದಲ್ಲಿ ನೀರಿನ ಅಂಶ ಹೆಚ್ಚಾಗಿ ಮೂತ್ರದ ಪ್ರಮಾಣವೂ ಹೆಚ್ಚುತ್ತದೆ, ಇದರ ಜೊತೆಯಲ್ಲಿ ದೇಹವನ್ನು ತಂಪಾಗಿಡಲು ಸಹಕರಿಸುತ್ತದೆ, ಬೆವರು ಗುಳ್ಳೆಗಳು, ಹೊಟ್ಟೆಹುರಿ ಈ ರೀತಿಯ ಹಲವು ಸಮಸ್ಯೆಗಳಿಗೆ ಇದು ರಾಮಬಾಣ.

ಸಕ್ಕರೆ ಕಾಯಿಲೆ : ಮಧುಮೇಹಿಗಳು ಬಾರ್ಲಿ ನೀರನ್ನು ಪ್ರತಿದಿನ ಕುಡಿಯಲೇಬೇಕು ಕಾರಣ ಇದರಲ್ಲಿ ಬೀಟಾ ಗ್ಲುಕಾನ್ ಅಂಶವಿದ್ದು ಇದು ಆಹಾರದಲ್ಲಿರುವ ಗ್ಲುಕೋಸ್ ಅಥವಾ ಸಕ್ಕರೆ ಅಂಶವನ್ನು ರಕ್ತಕ್ಕೆ ಸೇರುವ ಗತಿಯನ್ನು ನಿಧಾನಗೊಳಿಸುತ್ತದೆ, ಇದೇ ಕಾರಣಕ್ಕಾಗಿಯೇ ಸಕ್ಕರೆ ಕಾಯಿಲೆ ಇರುವ ವ್ಯಕ್ತಿಗಳ ಬಾರ್ಲಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ದೇಹದ ತೂಕ ಇಳಿಸುತ್ತದೆ : ದೇಹದ ತೂಕ ಇಳಿಯಲು ದೇಹದಲ್ಲಿ ಪಚನಕ್ರಿಯೆ ಬಹಳ ಸರಳವಾಗಿ ನಡೆಯಬೇಕು ಹಾಗೂ ರಕ್ತಸಂಚಾರ ಸುಗಮವಾಗಿ ಬೇಕು, ಬಾರ್ಲಿ ನೀರಿನಲ್ಲಿ ನಾರಿನಂಶ ಹೆಚ್ಚಾಗಿ ಇರುವುದರಿಂದ ಈ ಕಾರ್ಯಗಳು ಸುಲಭವಾಗುತ್ತದೆ ಇದೇ ಕಾರಣದಿಂದಾಗಿ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಒತ್ತಡವು ಕಡಿಮೆಯಾಗುತ್ತದೆ, ದೇಹದ ತೂಕ ಇಳಿಯುತ್ತದೆ.

ಕಿಡ್ನಿ ಸ್ಟೋನ್ : ದೇಹದ ಮೂತ್ರಪಿಂಡದಲ್ಲಿ ಭಾರತದಲ್ಲಿ ಇರುವ ಲವಣಗಳು ಸಣ್ಣ ಕಣಗಳ ರೂಪದಲ್ಲಿ ಸೇರಿಕೊಳ್ಳುತ್ತದೆ, ನಂತರ ನೀವು ದೊಡ್ಡದಾಗಿ ಬೆಳೆಯಲು ಶುರು ಮಾಡುತ್ತವೆ, ಹಾಗೂ ಒಂದು ನಿರ್ದಿಷ್ಟ ಗಾತ್ರ ತಲುಪುವವರೆಗೂ ನೋವು ಕಾಣಿಸುವುದಿಲ್ಲ, ಆದ್ದರಿಂದ ಕಿಡ್ನಿಯಲ್ಲಿ ಕಲ್ಲು ಇರುವುದು ತಿಳಿಯುವುದೇ ಇಲ್ಲ, ಇದೇ ಕಾರಣಕ್ಕಾಗಿಯೇ ಪ್ರತಿದಿನ ಬಾರ್ಲಿ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಕಿಡ್ನಿಯಲ್ಲಿನ ಕಲ್ಲುಗಳು ನಿಧಾನವಾಗಿ ಕರಗುತ್ತವೆ.

ಅತಿಸಾರ : ಅತಿಸಾರ ಅಂದರೆ ಲೂಸ್ ಮೋಶನ್ ಸಮಸ್ಯೆ ನಿಮಗೆ ಕಾಡುತ್ತಿದ್ದರೆ ಅಥವಾ ನಿಮ್ಮ ಮುಂದೆ ಯಾರಾದರೂ ಅತಿಸಾರ ಸಮಸ್ಯೆಯಿಂದ ಬಳಲುತ್ತಿದ್ದರೆ ತಕ್ಷಣ ಅವರಿಗೆ ಒಂದು ಲೋಟ ಬಾರ್ಲಿ ನೀರು ಸೇವಿಸಲು ಕೊಡಿ ಇದರಿಂದ ದೇಹ ಕಳೆದುಕೊಂಡ ನೀರಿನ ಅಂಶವನ್ನು ದೇಹಕ್ಕೆ ನೀಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಅತಿಸಾರ ನಿಲ್ಲಿಸಿ ದೇಹವನ್ನು ತಂಪಾಗಿಸುತ್ತದೆ.

ಹೊಟ್ಟೆ ಉಬ್ಬರ, ಗಂಟಲು ಬೇನೆ, ತೂಕ ಇಳಿಸುವ ಕಾರ್ಯದಲ್ಲಿ ಬಾರ್ಲಿ ನೀರು ಬಹಳ ಉಪಯೋಗಕಾರಿ, ಬಾರ್ಲಿ ಶೋಧಿಸಿದ ನೀರಿನಲ್ಲಿ ಮುಖವನ್ನು ಸ್ವಚ್ಛ ಮಾಡುವುದರಿಂದ ತ್ವಚೆ ಕಾಂತಿಯನ್ನು ಪಡೆದು ವೃದ್ಧಾಪ್ಯ ಚಿನ್ನೆಗಳು ಮಾಯವಾಗುತ್ತದೆ.

ಹಾಗಾದರೆ ಬಾರ್ಲಿ ನೀನು ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳೋಣ : ಅಂಗಡಿಯಿಂದ ತಂದ ಬಾರ್ಲಿಯನ್ನು ರಾತ್ರಿ ಮಲಗುವ ಮೊದಲು ನೀರಿನಲ್ಲಿ ನೆನೆಸಿರಿ, ಬೆಳಗ್ಗೆ ಅದೇ ನೀರಿನಲ್ಲಿ ಬಾರ್ಲಿಯನ್ನು 10 ನಿಮಿಷ ಕುದಿಸಿರಿ, ಅರ್ಧಗಂಟೆ ಬಿಟ್ಟು ಬಾರ್ಲಿಯನ್ನು ಶೋಧಿಸಿ ನೀರನ್ನು ಕುಡಿಯಿರಿ.

LEAVE A REPLY

Please enter your comment!
Please enter your name here