ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣನ್ನು ತಿನ್ನುತ್ತೀರ ಹಾಗಾದರೆ ಒಮ್ಮೆ ಇಲ್ಲಿ ಓದಿ!

0
1545

ಬಾಳೆಹಣ್ಣು ಭಾರತದ ಬೆಳೆ ಇಲ್ಲಿ ಒಂದು ವರ್ಷಕ್ಕೆ ಸುಮಾರು 29.7 ಮಿಲಿಯನ್ ಮೆಟ್ರಿಕ್ ಟನ್ ಬಾಳೆಹಣ್ಣು ಉತ್ಪಾದನೆಯಾಗುತ್ತದೆ, ಇಟ್ತಚಿನ ಸಂಶೋಧನೆಗಳ ಪ್ರಕಾರ, 90 ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು, ಎರಡು ಬಾಳೇಹಣ್ಣುಗಳು ಸಾಕು. ಈ ಹಣ್ಣಿನಲ್ಲಿ ಶಕ್ತಿಯ ಜೊತೆಗೆ, ನಾರಿನಂಶ, ಹಾಗೂ 3 ವಿಧದ ಪ್ರಾಕೃತಿಕ ಸಕ್ಕರೆಗಳಿವೆ, ಅವುಗಳೆಂದರೆ ಸುಕ್ರೋಸ್, ಫುಕ್ಟೊಸ್, ಗ್ಲುಕೋಸ್.

ಬಾಳೆಹಣ್ಣಿನಲ್ಲಿ ಕಬ್ಬಿಣದ ಅಂಶ ಸಮೃದ್ಧವಾಗಿರುವುದರಿಂದ ದೇಹದಲ್ಲಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಪ್ರಚೋದಿಸಿ, ರಕ್ತಹೀನತೆಯನ್ನು ನೀಗಿಸುತ್ತದೆ.

ಪೊಟಾಷಿಯಮ್, ಲವಣ ಸಮೃದ್ಧಿಯಾಗಿದ್ದು, ಉಪ್ಪಿನ ಅಂಶ ತೀರಾ ಕಡಿಮೆ. ಇದರಿಂದ ಬಾಳೆಹಣ್ಣು ರಕ್ತದೊತ್ತಡವನ್ನು ತಡೆಗಟ್ಟಲು ಸೂಕ್ತ ಅಸ್ತ್ರ. ಅಮೆರಿಕದ ಆಹಾರ ಮತ್ತು ಔಷಧಿಗಳ ಆಡಳಿತ ಮಂಡಲಿ ಕೂಡ ಇತ್ತೀಚೆಗೆ ಅಧಿಕೃತವಾಗಿ ಜಾಹೀರುಗೊಳಿಸಲು, ಅನುಮತಿ ನೀಡಿದೆ.

ಅಧ್ಯಯನದ ಪ್ರಕಾರ, ಪೊಟಾಷಿಯಮ್ ಜಾಗೃತಗೊಳಿಸುವ ಕೆಲಸದಲ್ಲಿ ನೆರವಾಗಿದೆ, ನಾರಿನ ಅಂಶ ಯತೇಚ್ಛ. ಕೃತಕ ವಿರೇಚಕಗಳಿಲ್ಲದೆ, ಮಲಬದ್ಧತೆಯ ಸಮಸ್ಯೆಯನ್ನು, ಹೋಗಲಾಡಿಸಲು ಅತ್ಯಂತ ಸಹಾಯಕಾರಿ.

ಜಠರದಲ್ಲಿ, ಸಹಜ ಪ್ರತ್ಯಾಮ್ಲೀಯಪರಿಣಾಮವನ್ನುಂಟುಮಾಡಿ, ಎದೆಯುರಿಯಿಂದ ಪರಿತಪಿಸುತ್ತಿರುವವರಿಗೂ ಬಾಳೆಹಣ್ಣು ದಿವ್ಯೌಷಧ, ಎರಡು ಊಟಗಳ ಮಧ್ಯೆ ಒಂದು ಬಾಳೆಹಣ್ಣನ್ನು ಗರ್ಭಿಣಿಸ್ತ್ರೀಯರಿಗೆ ಕೊಡುವುದರಿಂದ ವಾಕರಿಕೆ, ವಾಂತಿ ತಡೆಗಟ್ಟಬಹುದು. ಈ ಹಣ್ಣು, ಬೆಳಗಿನ ಆರೋಗ್ಯದ ಏರುಪೇರುಗಳನ್ನು ನಿಯಂತ್ರಣದಲ್ಲಿಡುತ್ತದೆ.

LEAVE A REPLY

Please enter your comment!
Please enter your name here