ಪೂಜೆ ಮಾಡಲು ಸರಿಯಾದ ಸಮಯ ಯಾವುದು ಗೊತ್ತಾ ? ಇದೊಂದು ವಿಚಾರ ತಿಳಿದರೆ ದಾರಿದ್ರ್ಯ ನಿವಾರಣೆ ಖಂಡಿತ

0
2410

ಭಾವನಾತ್ಮಕತೆ : ನಮ್ಮ ಪರಂಪರೆಯಲ್ಲಿ ಪೂಜೆ ಎಂದರೆ ಬಹಳ ಪವಿತ್ರತೆ ಇಂದ ಕೂಡಿರುತ್ತದೆ ಎಂದು ಹೇಳುತ್ತಾರೆ, ಹಾಗೂ ಆ ಮಾತು ಸತ್ಯ ಸಹ ಹೌದು, ಪೂಜೆಗಳನ್ನು ಹಲವಾರು ಬಗೆ ಸುತ್ತಿ ಸಬಹುದು, ಆದರೆ ಮೂರು ಪ್ರಮುಖ ವಿಧಾನಗಳು ಪೂಜೆಯಲ್ಲಿ ಉಂಟು, ನಮ್ಮ ದೇಹ, ಮನಸ್ಸು, ಮಾತಿನಿಂದ ಭಗವಂತನ ಸ್ತುತಿ ಮಾಡುವುದು. ಪೂಜೆಯನ್ನು ನಮಗೆ ಇಷ್ಟ ಬಂದ ಸಮಯದಲ್ಲಿ ಮಾಡಬಾರದು, ಬ್ರಾಹ್ಮೀ ಮುಹೂರ್ತ, ಪ್ರಾತಃಕಾಲದ ಪೂಜೆ, ಮಧ್ಯಾಹ್ನದ ಪೂಜೆ, ಸಾಯಂಕಾಲ ಸಂಧ್ಯಾಸಮಯ, ರಾತ್ರಿಯಲ್ಲಿ ಪೂಜೆ ಮಾಡಬಹುದು.

ನಾವು ಪೂಜೆಗೆ ಸನ್ನದ್ಧರಾಗುವ ಮೊದಲು ನಮ್ಮ ದೇಹ ಸ್ವಚ್ಛವಾಗಿರಬೇಕು, ಅದೇ ರೀತಿ ಭಗವಂತನ ಸ್ತುತಿಸಲು ಮನಸ್ಸು ನಿರಾಳವಾಗಿ ಇರಬೇಕು, ನಾವು ಹೇಳುವ ಮಂತ್ರಗಳು ಉಚ್ಚಾರಣೆ ಸ್ಪಷ್ಟವಾಗಿರಬೇಕು, ಪೂಜೆ ಮಾಡುವ ಸಮಯದಲ್ಲಿ ವಾತಾವರಣ ಸೂಕ್ತವಾಗಿರಬೇಕು, ಬ್ರಾಹ್ಮಿ, ಪ್ರಾತಃಕಾಲದಲ್ಲಿ ಸೂರ್ಯನ ಎಳೆಯ ಕಿರಣಗಳು ನಮ್ಮ ಮನಸ್ಸು ಹಿತವಾಗಿ ಇರುವಂತೆ ಮಾಡಬಲ್ಲದು.

ಸಾಯಂಕಾಲ 5:45 ರಿಂದ 6:30 ನಿಮಿಷಗಳವರೆಗೆ ಪೂಜೆ ಮಾಡಿದರೆ ಗೋಧೂಳಿ ಸಮಯ ಎನ್ನುತ್ತಾರೆ, ರಾತ್ರಿ ಮಲಗುವ ಮೊದಲು ಸಹ ಪೂಜೆ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ, ಹೀಗೆ ಪೂಜೆ ಎನ್ನುವುದು ಸೂಕ್ತ ಸರಿಯಾದ ರೀತಿಯಲ್ಲಿ ಮಾಡುವುದರಿಂದ ಸಕಾರಾತ್ಮಕ ಪಲಿತಾಂಶ ಲಭಿಸುತ್ತದೆ, ಮನಸ್ಸು, ದೇಹ, ವಾಕ್ಕು ಎಂದರೆ ಮಾತು ಸ್ಪಷ್ಟತೆ ಇರಲಿ.

ದೇವರ ಪೂಜೆಗೆ ಕೇವಲ ಮನಸ್ಸು ಮುಖ್ಯ, ದೇವರು ಎಲ್ಲಾ ಕಡೆ ಇದ್ದಾನೆ ಎಂದು ಹೇಳುತ್ತಾರೆ, ತಾರ್ಕಿಕವಾಗಿ ಯೋಚನೆ ಮಾಡಿದರೆ ಈ ಮಾತುಗಳಲ್ಲಿ ಸತ್ಯವಿದೆ ಎಂದು ಗೋಚರವಾಗುತ್ತದೆ, ಆದರೆ ಯಾವುದೇ ಕೆಲಸ ಮಾಡಿದರೂ ಸಮಯ ಎನ್ನುವುದು ನಿಗದಿ ಆಗಿರುತ್ತದೆ, ಹೀಗಾಗಿ ಅಂತಹ ಸಮಯದಲ್ಲಿ ಮಾಡಿದ ಕೆಲಸದಿಂದ ಉತ್ತಮ ಫಲಿತಾಂಶ ದೊರಕುತ್ತದೆ.

LEAVE A REPLY

Please enter your comment!
Please enter your name here