ಮುಖದ ಮೇಲೆ ಬೀಳುವ ಸಣ್ಣ ರಂಧ್ರಗಳ ನಿವಾರಣೆಗೆ ಸುಲಭ ಉಪಾಯ.

0
2464

ಮುಖದ ಅಂದವನ್ನು ಕಡಿಮೆ ಮಾಡುವ ಸಣ್ಣ ರಂದ್ರಗಳು ನಿಮ್ಮನ್ನು ಬಹಳಷ್ಟು ಕಾಡುವುದು ಸತ್ಯ, ಹಲವು ಜನರಿಗೆ ಚರ್ಮದ ನರಗಳ ಸಮಸ್ಯೆ ಇರುತ್ತದೆ, ಮಾರುಕಟ್ಟೆಯಲ್ಲಿ ಸಿಗುವ ಹಲವು ದುಬಾರಿ ಕ್ರೀಮ್ ಬಳಕೆ ಮಾಡಿದ್ದರು ಪ್ರಯೋಜನ ಬಾರದಿದ್ದರೆ ಚಿಂತೆ ಬೇಡ ಎಂದು ನಾವು ನಿಮಗೆ ಹಲವು ಉಪಯುಕ್ತ ಮಾಹಿತಿಯನ್ನು ನೀಡುತ್ತವೆ.

ಮೊದಲು ಸಕ್ಕರೆಯನ್ನು ರುಬ್ಬಿ ಪುಡಿಮಾಡಿಕೊಳ್ಳಿ ನಂತರ ಪುಡಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಪೇಸ್ಟ್ ರೀತಿಯಲ್ಲಿ ತಯಾರಿಸಿಕೊಳ್ಳಿ, ಈ ಪೇಸ್ಟನ್ನು ಮುಖದ ಯಾವ ಜಾಗದಲ್ಲಿ ಹೆಚ್ಚು ಸಣ್ಣ ರಂದ್ರಗಳು ಇರುತ್ತದೆಯೋ ಅಲ್ಲಿ ಹಚ್ಚಿ ಮಸಾಜ್ ಮಾಡಿ, ಈ ರೀತಿ ಮಾಡಿದ ಬಳಿಕ ಹತ್ತು ನಿಮಿಷದ ಬಿಟ್ಟು ಮುಖವನ್ನು ತೊಳೆದು ಯಾವುದಾದರೂ ಮೋಶ್ಚರೈಸರ್ ಹಚ್ಚಿಕೊಳ್ಳಿ ನೆನಪಿಡಿ ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಬೇಕು.

ಇದೇ ರೀತಿಯಲ್ಲಿ ವಾರದಲ್ಲಿ ಎರಡು ಬಾರಿ ನಿಮ್ಮ ಮುಖಕ್ಕೆ ಬಿಸಿ ಹವೆಯ ಶಾಖ ನೀಡುವುದರಿಂದ, ಮುಖದ ರಂದ್ರ ಗಳಲ್ಲಿರುವ ಕೊಳೆ ಕಿತ್ತುಕೊಂಡು ಆಚೆ ಬರುತ್ತದೆ ಹಾಗೂ ಮುಖದ ರಂಧ್ರಗಳು ಮುಚ್ಚಿಕೊಳ್ಳುತ್ತವೆ.

ಚಿಕ್ಕೆ ಪುಡಿಮಾಡಿಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ ಪೇಸ್ಟ್ ರೀತಿ ತಯಾರು ಮಾಡಿಕೊಳ್ಳಿ, ಈ ರೀತಿ ತಯಾರಿ ಮಾಡಿಕೊಂಡು ಪೇಸ್ಟನ್ನು ಮುಖದ ರಂಧ್ರಗಳ ಮೇಲೆ ಹಚ್ಚಿ ಮಸಾಜ್ ಮಾಡಿ, 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದು ಬಿಡಿ, ಚೆಕ್ಕೆಯಲ್ಲಿನ ಅಂಶವು ನಿಮ್ಮ ಮುಖದಲ್ಲಿರುವ ಜಿಡ್ಡಿನ ಅಂಶವನ್ನು ತೆಗೆಯುತ್ತದೆ.

ಒಂದು ಚಮಚ ಬೇಯಿಸಿದ ಮೊಟ್ಟೆಯ ಬಿಳಿ ಭಾಗಕ್ಕೆ ಅರ್ಧ ಚಮಚದಷ್ಟು ನಿಂಬೆ ರಸ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಈ ಮಿಶ್ರಣ ಹೊಂದಿಕೊಳ್ಳಬೇಕು, ನಂತರ ರಂಧ್ರ ಹೆಚ್ಚಿರುವ ಜಾಗದಲ್ಲಿ ಈ ಮಿಶ್ರಣವನ್ನು ಹಚ್ಚಿ ಮಸಾಜ್ ಮಾಡಿ 20 ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆದುಬಿಡಿ ವಾರದಲ್ಲಿ ಮೂರು ಬಾರಿ ಈ ರೀತಿ ಮಾಡುವುದರಿಂದಲೂ ಮುಖದಲ್ಲಿ ರಂಧ್ರಗಳು ಕಡಿಮೆಯಾಗುತ್ತವೆ.

LEAVE A REPLY

Please enter your comment!
Please enter your name here