ಮೇಘನರಾಜ್ ಜೊತೆಯಲ್ಲಿ ಚಿರಂಜೀವಿ ಸರ್ಜಾ ಅವರ ಕೊನೆಯ ಸೆಲ್ಫಿ ವಿಡಿಯೋ ನೋಡಿ

0
1784

ಮೇಘನಾ ಹಾಗು ಚಿರು ಅವರದು 8ವರ್ಷದ ಪ್ರೀತಿ ಮತ್ತು ಎರಡು ವರ್ಷದ ದಾಂಪತ್ಯ ಜೀವನ ಒಟ್ಟು 10 ವರ್ಷ ಜೊತೆಯಾಗಿ ಮೇಘನಾ ಜೊತೆ ಇದ್ದರೂ ಚಿರು, ಈ ಸಮಯದಲ್ಲಿ ಮೇಘನ ಅವರಿಗೆ ತಮ್ಮ ಮುಂದಿನ ಜೀವನ ಹಾಗೂ ಮಕ್ಕಳ ಬಗ್ಗೆ ಏನೆಲ್ಲಾ ಭರವಸೆಗಳನ್ನು ಕೊಟ್ಟಿದ್ದರೊ ಗೊತ್ತಿಲ್ಲ ಶುರುವಿನಲ್ಲಿ ಇವುಗಳೆಲ್ಲ ಮುಗಿದುಹೋಗಿದೆ, ಇತ್ತೀಚಿಗೆ ಚಿರು ತಾವು ತಂದೆ ಯಾಗುತ್ತಿರುವ ಸುದ್ದಿಯನ್ನು ಕೇಳಿ ಅತಿ ಹೆಚ್ಚು ಸಂತೋಷವನ್ನು ಪಟ್ಟಿದ್ದರು, ತಮ್ಮ ಮಗುವನ್ನು ಕೈಯಲ್ಲಿ ಹಿಡಿಯುವ ಕ್ಷಣಕ್ಕಾಗಿ ಕಾಯುತ್ತಿದ್ದರು.

ಅದೇ ಗುಂಗಿನಲ್ಲಿದ್ದ ಚಿರು ತಮ್ಮ ಹೆಂಡತಿ ಮೇಘನ ಅವರಿಗೆ ಇತ್ತೀಚಿಗೆ ಮಗುವಿನ ರೀತಿ ಇರುವ ಗೊಂಬೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು, ಉಡುಗೊರೆ ಈಗಲೂ ಮೇಘನಾ ಅವರ ರೂಮಿನಲ್ಲಿ ಮಲಗಿದೆ, ತಮ್ಮ ಕಂದಮ್ಮನ ಕೈಹಿಡಿದು ಅದಕ್ಕೆ ಮುತ್ತುಕೊಟ್ಟು ಕೆನ್ನೆಗೆ ಹೊತ್ತಿಕೊಳ್ಳುವ ಮುಂಚೆ ಎಲ್ಲರನ್ನು ಮತ್ತು ಎಲ್ಲವನ್ನು ಬಿಟ್ಟು ಹೊರಟಿದ್ದು ಯಾವ ನ್ಯಾಯ? ಆ ಕುಟುಂಬದವರು ಮತ್ತೆ ಮೇಘನಾ ಮತ್ತು ಆಕೆಯ ಹೊಟ್ಟೆಯಲ್ಲಿರುವ ಅ ಮಗು ಮಾಡಿದ ಅನ್ಯಾಯವಾದರೂ ಏನು, ಅದಕ್ಕೆ ನ್ಯಾಯ ಹೇಳೋರು ಯಾರು.

ನವರಸನಾಯಕ ಜಗ್ಗೇಶ್ ತಮ್ಮ ಮನದಾಳದ ನೋವನ್ನು ಮತ್ತು ಕೆಲವು ಹಳೆಯ ನೆನಪುಗಳನ್ನು ನೆನೆದು ದುಃಖ ಪಡುತ್ತಿದ್ದಾರೆ, ಇನ್ನು ಜಗ್ಗೇಶ್ ಅವರು ಹೇಳುವ ಪ್ರಕಾರ ಮೇಘನ ಮತ್ತು ಚಿರು ಮದುವೆಗೆ ಮೇಘನ ಅವರ ತಂದೆ ಸುಂದರ್ ಅವರನ್ನು ಒಪ್ಪಿಸಿದ್ದು ಇವರೇ ಅಂತೆ ಚಿರು ಒಂದು ದಿನ ಸಂಜೆ ಜಗ್ಗೇಶ್ ಅವರಿಗೆ ಕರೆ ಮಾಡಿ ಮಾಮಾ ನಾನು ಚಿರು ಮೇಘಳನ್ನು ತುಂಬಾ ಪ್ರೀತಿ ಮಾಡುತ್ತಿದ್ದೇನೆ, ನೀವೇ ಮುಂದೆ ನಿಂತು ಅವರ ಮನೆಯವರನ್ನು ಬೀಸಬೇಕು ಎಂದು ಕೇಳಿಕೊಂಡಿದ್ದನಂತೆ.

ಅದರಂತೆ ಜಗ್ಗೇಶ್ ಅವರು ಕೂಡ ಸುದರ್ ಮನೆಗೆ ಹೋಗಿ ಈ ಬಗ್ಗೆ ಪ್ರಸ್ತಾಪನೆ ಮಾಡಿ ನಂತರ ಜ್ಯೋತಿಷಿಗಳಾದ ಪ್ರಕಾಶ ಅಮ್ಮಣ್ಯರ ಬಳಿ ಇವರಿಬ್ಬರ ಜಾತಕ ಕೊಟ್ಟು ಚರ್ಚೆ ಮಾಡಿದ್ದರಂತೆ, ಆಗಲೇ ಜ್ಯೋತಿಷಿಗಳು ಚಿರು ಜಾತಕದಲ್ಲಿ ಅಷ್ಟಮ ಕುಜ ದೋಷ ಇದೆ ಅದಕ್ಕೆ ಕೆಲವು ಮುಖ್ಯ ಪೂಜೆಗಳನ್ನು ಮಾಡಬೇಕು ಇದಾದ ನಂತರ ಮದುವೆ ಮುಂದುವರಿಸಿ ಎಂದು ಹೇಳಿದ್ದರಂತೆ, ಇದಾದ ನಂತರ ಆ ಪೂಜೆಯ ಬಗ್ಗೆ ಜಗ್ಗೇಶ್ ಅವರಿಗೂ ಯಾವುದೇ ಮಾಹಿತಿ ಇಲ್ಲ ಮದುವೆಯ ನಿಶ್ಚಯವಾಯಿತು.

ಕೊನೆಗೂ ಇವರಿಬ್ಬರ ಮದುವೆ ಫಿಕ್ಸ್ ಆಯ್ತು ಸಂತೋಷದಿಂದ ಮನೆಗೆ ಬಂದೆ, ಪರಿಮಳ ಜೊತೆ ಈ ವಿಚಾರದ ಬಗ್ಗೆ ಚರ್ಚೆ ಮಾಡಿದೆ ದೇವರ ದೆಸೆಯಿಂದ ಒಂದು ದಿನ ಇವರ ಮದುವೆ ಕೂಡ ನಡೆಯಿತು, ಅದಾದ ಮೇಲೆ ಚಿರು ಹಲವು ಬಾರಿ ಮನೆಗೆ ಊಟಕ್ಕೆ ಕರೆದಿದ್ದಾನೆ ಆದರೆ ಅದೇಕೋ ಹೋಗಲು ಸಾಧ್ಯವಾಗಲಿಲ್ಲ ಆದರೆ ನೆನ್ನೆ ಮಧ್ಯಾಹ್ನ ಊಟ ಮಾಡಿ ಮಲಗಿದ್ದೆ ನನ್ನ ಕಾರು ಚಾಲಕ ಕರೆ ಮಾಡಿ ಚಿರು ನಮ್ಮನ್ನು ಅಗಲಿದ ವಿಷಯ ತಿಳಿಸಿದ ನಾನು ಹುಚ್ಚನಂತೆ ಆಗಿಬಿಟ್ಟೆ, ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳು ಇಷ್ಟೇನಾ ಬದುಕು ? ಇದಕ್ಕೆ ನಮ್ಮ ಹೋರಾಟ ? ನಮ್ಮಂತ ಹಿರಿಯರು ನಮ್ಮ ಕಣ್ಣಮುಂದಿನ ಕಿರಿಯರ ಸಾವು ನೋಡಬೇಕು ? ಇದು ಎಂಥ ದೌರ್ಭಾಗ್ಯ ಶಂಕರ್ ನಾಗ್ ಸಾಲಿನಲ್ಲಿ ಈತನು ಸೇರಿಕೊಂಡುಬಿಟ್ಟರು ಆತನ ಸಾವು 36ನೇ ವರ್ಷಕ್ಕೆ ಈತನದು 39ನೇ ವರ್ಷಕ್ಕೆ ದೇವರೇ ಇದು ನ್ಯಾಯವೇ ಓಂ ಶಾಂತಿ ( ಇದು ಜಗ್ಗೇಶ್ ಅವರ ಮನದ ಮಾತುಗಳು ).

LEAVE A REPLY

Please enter your comment!
Please enter your name here