ಸಂತಾನ ಭಾಗ್ಯ ನೀಡುವ ಅಶ್ವಥಮರದ ಈ ವಿಚಾರದ ಬಗ್ಗೆ ತಿಳಿದರೆ ಅಚ್ಚರಿ ಪಡುತ್ತೀರಾ..!!

0
2052

ಹಿಂದೂಧರ್ಮದ ಹಲವು ರೀತಿರಿವಾಜುಗಳೊಂದಿಗೆ ಅಶ್ವಥಮರವು ಸಂಬಂಧವನ್ನು ಹೊಂದಿದೆ ಬೌದ್ಧ ಧರ್ಮೀಯರಿಗೂ ಇದು ಪವಿತ್ರವೆನಿಸಿದೆ ಬುದ್ಧ ಜ್ಞಾನೋದಯ ಪಡೆದ ಬೋಧಿವೃಕ್ಷವೂ ಇದೇ ಆಗಿದೆ ಎಂಬ ವಾದವು ಪ್ರಚಲಿತವಿದೆ ಪ್ರಪಂಚದ ಅತ್ಯಂತ ಹಿರಿಯಮರವೂ, ಧೀರ್ಘಾಯುಷ್ಯವುಳ್ಳ ಮರವೂ ಆಗಿರುವ ಅಶ್ವತ್ಥ ಮರವು ಹಲವು ಶತಮಾನಗಳವರೆಗೆ ಬದುಕುವುದು ಕ್ರಿಪೂ. 3ನೇ ಶತಮಾನಕ್ಕೆ ಸೇರಿದ್ದನ್ನಲಾದ ಅಶ್ವತ್ಯಮರವೊಂದು ಕ್ರಿಶ. ೧೯ನೆಯ ಶತಮಾನದವರೆಗೂ ಸಿ೦ಹಳದಲ್ಲಿ ಬದುಕಿತ್ತು.

ಅಶ್ವತ್ಥವನ್ನು ದೈವಪ್ರತಿನಿಧಿ ಎಂದು ಭಾವಿಸಿ ಕಟ್ಟೆಯನ್ನು ಕಟ್ಟಿ ಬೆಳೆಸುತ್ತಿದ್ದರು ಪೂಜೆಯನ್ನೂ ಮಾಡುತ್ತಿದ್ದರು ಅಶ್ವತ್ಥ ತೊಗಟೆ ಮತ್ತು ಹಣ್ಣು ಹಲವು ಚಿಕಿತ್ಸಾತ್ಮಕ ಗುಣಧರ್ಮಗಳನ್ನೂ ಹೊಂದಿದೆ.

ಪರಿಣಾಮ : ದಾರುಣವಾದ ರೋಗಗಳಿಂದ ಪೀಡಿಸಲ್ಪಟ್ಟು ವಾತ, ಪಿತ್ತ ಮತ್ತು ಕಫಗಳೆಲ್ಲವೂ ಪ್ರಕೋಪಗೊಂಡಾಗ ಅಶ್ವತ್ಥದ ತೊಗಟೆಯ ಕಷಾಯವನ್ನು ಜೇನಿನ ಸಂಗಡ ಕುಡಿದರೆ ಅದು ಈ ಎಲ್ಲಾ ರೋಗಗಳನ್ನು ಗೆಲ್ಲುತ್ತದೆಂಬ ಚರಕ ಮಹರ್ಹಿಂಯ ಮಾತು ಇದರ ಮೌಲಿಕತೆಗೆ ಬಹುದೊಡ್ಡ ಸಾಕ್ಷಿ ಪ್ರಾಚೀನ ಶಸ್ತ್ರಚಿಕಿತ್ಸಾ ಕೌಶಲ್ಯದ ಪ್ರತಿನಿಧಿಯಾದ ಸುಶ್ರುತರೂ ಕೂಡ ಅಶ್ವತ್ಛದ ಫಲ ಬೇರು ಮತ್ತು ತಯಾರಿಸುವ ಔಷಧಿಯನ್ನು ಸಕ್ಕರೆ ಮತ್ತು ಜೇನುತುಪ್ಪಗಳೊಂದಿಗೆ ಬೆರಸಿ ಸೇವಿಸಿದಲ್ಲಿ ಪರಿಣಾಮಗಳು ಲಭ್ಯವಾಗುವುವು ಎಂದಿದ್ದಾರೆ.

ಬಾಹ್ಯಪ್ರಯೋಗ : ಅಶ್ವತ್ಥದ ತೊಗಟೆಯನ್ನು ಬಾಹ್ಯವಾಗಿಯೂ ಬಳಸಬಹುದು ಇದರ ಚೂರ್ಣವನ್ನು ಉದುರಿಸಿದರೆ ಹುಣ್ಣುಗಳು ಬೇಗನೆ ಮಾಯುತ್ತವೆ ನೋವು ಬಾವು ಮತ್ತು ರಕ್ತಸಾವಗಳಲ್ಲಿ ಇದರ ಹಾಲನ್ನು ಹಚ್ಚುತ್ತಾರೆ ಭಗಂದರ ಎಂಬ ಮಹಾವ್ಯಾಧಿ ಮತ್ತು ಬಾಯಿಹುಣ್ಣುಗಳಲ್ಲೂ ಇದು ಉಪಯುಕ್ತ.

ರಕ್ತದುಷ್ಟಿಯಿಂದ ಉಂಟಾಗುವ ಕಾಯಿಲೆಗಳಲ್ಲಿ ಇದರ ಕಷಾಯವನ್ನು ಜೇನಿನೊಂದಿಗೆ ಸೇವಿಸುವುದು ಪರಿಣಾಮಕಾರಿ ರಕ್ತಪಿತ್ತದಲ್ಲೂ ಅಶ್ವತ್ಥದ ತೊಗಟೆ ಮತ್ತು ಹಣ್ಣುಗಳು ಯೋಗ್ಯ ಪ್ರಭಾವ ಬೀರುತ್ತವೆ ಜೀಣಾರ೯ಗ ವ್ಯೂಹದ ಕಾಯಿಲೆಗಳಾದ ವಾಂತಿ, ಅತಿಸಾರ, ದ್ರವರೂಪದ ಮಲಸ್ರಾವಗಳಲ್ಲಿ ಅಶ್ವತ್ಥದ ಹಣ್ಣು ಆಥವಾ ತೊಗಟೆಯ ಕಷಾಯಗಳ ಸೇವನೆ ಮಾಡುತ್ತಾರೆ ನೋವು ಮತ್ತು ಹೂಟ್ವೆಯುಬ್ಬರಗಳಲ್ಲೂ ಅಶ್ಚತ್ಯದ ಹಣ್ಣಿನ ಸೇವನೆ ಹಿತಕರ ಇದರ ಕಷಾಯ ನಾಯಿಕೆಮ್ಮನ್ನು ಪರಿಹರಿಸುತ್ತದೆ.

ಸಂತಾನ : ಮಕ್ಕಳಾಗದವರು ಆಶ್ವತ್ಥ ಪ್ರದಕ್ಷಿಣೆ ಮಾಡುವುದು ಯೋಗ್ಯ ಎಂಬ ನಂಬಿಕೆಗೆ ಆಯುರ್ವೇದದ ಅನುಮೋದನೆ ಇದೆ ರಾಜನಿಘಂಟು ಎಂಬ ಗ್ರಂಥದ ಪ್ರಕಾರ ಅಶ್ವತ್ಥದ ಹಣ್ಣು ಅಥವಾ ಹಣ್ಣಿನ ಚೂರ್ಣವು ಗರ್ಭಾಶಯಕ್ತೆ ಸಂಬಂಧಿಸಿದ ರೋಗಗಳನ್ನು ಕೂಡಲೇ ನಿವಾರಿಸಿ ಆರೋಗ್ಯವ೦ತರಾದ ಮಕ್ಕಳನ್ನು ಪಡೆಯಲು ಕಾರಣವಾಗುತ್ತದೆ.

ಮೂತ್ರಸಂಗ್ರಹಣೇಯವಾಗಿ ಕಾರ್ಯವೆಸಗಿ ಪ್ರಮೇಹ ರೋಗಗಳನ್ನೂ ಇದು ಪರಿಹರಿಸುತ್ತದೆ ಹೀಗೆ ಸನಾತನ ಸಂಸ್ಕೃತಿಯ ಅತ್ಯಂತ ಗೌರವಿಸಿದ ಅಶ್ವತ್ಯವು ಔಷಾದೀಯವಾಗಿಂಯೂ ಸತ್ವಪೂರ್ಣವಾಗಿರುವುದರಿ೦ದ ಔಷಧೀಯ ಸಂಶೋಧಕರಿಗೂ ಪಾವನ ವೃಕ್ತವೆನಿಸಿದೆ.

LEAVE A REPLY

Please enter your comment!
Please enter your name here