ನವರಾತ್ರಿಯ ದಿನ ನವವದುರ್ಗೆಯರಿಗೆ ಹೀಗೆ ಭಕ್ತಿಯಿಂದ ಪೂಜಿಸಿ ಹಾಗೂ ತಾಯಿಯ ಕೃಪೆಗೆ ಪಾತ್ರರಾಗಿ. ಈ ಎರೆಡು ತಪ್ಪುಗಳನ್ನು ಮಾಡಲೇಬೇಡಿ.

0
4757

ನವರಾತ್ರಿಯ ದಿನ ನವವದುರ್ಗೆಯರಿಗೆ ಒಂದೊಂದು ದಿನ ಒಂದೊಂದು ನೈವೇದ್ಯ ಮಾಡಿ ಅರ್ಪಿಸಬೇಕು ಮತ್ತು ಒಂದೊಂದು ದಿನ ಒಂದೊಂದು ಬಗೆಯ ಬಣ್ಣದ ಉಡುಪುಗಳನ್ನು ದರಿಸಿ ಮಾಡಿದರೆ ನವರಾತ್ರಿಯ ಪೂಜಾಫಲ ದೊರಕುತ್ತದೆ.

ಆದರೆ ನವರಾತ್ರಿಯ ದಿನ ಕೆಲವೊಂದು ಕೆಲಸಗಳನ್ನು ಅಪ್ಪಿ ತಪ್ಪಿಯೂ ಮಾಡಬಾರದು. ಕೂದಲು ಕಟ್ ಮಾಡಿಸುವುದು , ಉಗುರುಗಳನ್ನು ಕಟ್ ಮಾಡುವುದು, ಗುಂಡು ಹೊಡೆಸುವುದು ಮಾಡಲೇ ಬಾರದು ಅದರಲ್ಲೂ ಮಹಿಳೆಯರು ಕೂದಲುಗಳನ್ನು ಕತ್ತರಿಸಲೇ ಬಾರದು ಎಂದು ಇದೆ. ಒಂದು ವೇಳೆ ಕ್ಷೌರ ಮಾಡಿಸಿದರೆ ದೇವಿಯ ಅನುಗ್ರಹ ಸಿಗುವುದಿಲ್ಲ.

ನವರಾತ್ರಿಯ ದಿನಗಳಲ್ಲಿ ನಿಂಬೆ ಹಣ್ಣನ್ನು ಕತ್ತರಿಸಬಾರದು. ನಿಂಬೆ ಹಣ್ಣು ಪವರ್ ಫುಲ್ ಈ ದಿನಗಳಲ್ಲಿ, ದೇವಿಗೆ ಅತ್ಯಂತ ಪ್ರೀತಿಯ ನಿಂಬೆ ಹಣ್ಣನ್ನು ಕತ್ತರಿಸಬಾರದು.
ಒಂದು ವೇಳೆ ನಿಂಬೆ ರಸದ ಅಗತ್ಯ ವಿದ್ದರೆ ಲಿಂಬೆ ರಸ ದೊರೆಯುವುದು ತಂದು ಬಳಸಬಹುದು. ನವರಾತ್ರಿಯ ದಿನ ಹಗಲು ಮಲಗ ಬಾರದು. ಉಪವಾಸವಿದ್ದು ಪೂಜೆ ಮಾಡಿದರೆ ಫಲ ಹೆಚ್ಚು. ಹಾಲು ಹಣ್ಣು ಒಣ ಹಣ್ಣುಗಳನ್ನು ಸೇವಿಸಬಹುದು. ಆದರೆ ಉಪವಾಸ ಒಂಬತ್ತು ದಿನವು ಇರಲು ಆಗುವುದಿಲ್ಲ ಮಿತವಾಗಿ ಆಹಾರವನ್ನು ಸೆವಿಸಬಹುದು. ಭಕ್ತಿ ಮುಖ್ಯ. ನೀರನ್ನು ಹೆಚ್ಚಾಗಿ ಸೇವಿಸಬಹುದು.

ನವರಾತ್ರಿ ಹಬ್ಬದಂದು ಬಣ್ಣಗಳಿಗೆ ವಿಶೇಷ ಮಹತ್ವ. ದೇವಿಯನ್ನು ಪ್ರಸನ್ನಗೊಳಿಸಲು 9 ದಿನ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ಯಾವ ದಿನ ಯಾವ ಬಣ್ಣದ ಉಡುಪು ಧರಿಸಬೇಕು ಮತ್ತು ದೇವರಿಗೆ ಯಾವ ನೈವೇದ್ಯವನ್ನು ಅರ್ಪಿಸಬೇಕು.

1. ಶೈಲಪುತ್ರಿ: ಮೊದಲ ದಿನ ಶೈಲಪುತ್ರಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಹಳದಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡುವುದರಿಂದ ಲಾಭವಾಗುತ್ತದೆ. ಮತ್ತು ನೈವೇದ್ಯಕ್ಕೆ ಖಾರದ ಪೊಂಗಲ್ ಮಾಡಬೇಕು. ಮತ್ತು ಭೋಗದ ವಸ್ತು ವಾಗಿ ಬೆಣ್ಣೆಯನ್ನು ಸಮರ್ಪಿಸಬೇಕು .

2. ಬ್ರಹ್ಮಚಾರಿಣಿ: (ಗಾಯತ್ರಿದೇವಿ) ಎರಡನೇ ದಿನ ಬ್ರಹ್ಮಚಾರಿಣಿ ದೇವಿಯ ಪೂಜೆ ನಡೆಯುತ್ತಿದೆ. ಈ ದಿನ ಹಸಿರು ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ನೈವೇದ್ಯಕ್ಕೆ ಪುಳಿಯೋಗರೆ ಭೋಗದ ವಸ್ತು ವಾಗಿ ಸಕ್ಕರೆಯನ್ನು ಅರ್ಪಿಸಬೇಕು.

3. ಚಂದ್ರಘಂಟಾ: (ಅನ್ನಪೂರ್ಣಾ ) ಮೂರನೇ ದಿನ ಚಂದ್ರಗಂಟಾ ದೇವಿಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಬೂದು ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ನಿಮ್ಮ ಕೆಟ್ಟು ಹೋದ ಕೆಲಸ ಸರಿ ಹೋಗುತ್ತದೆ. ನೈವೇದ್ಯಕ್ಕೆ ತೆಂಗಿನಕಾಯಿಯಿಂದ ಮಾಡಿದ ಅನ್ನ ಮತ್ತು ಹಾಲನ್ನು ಅರ್ಪಿಸಬೇಕು .

4. ಕೂಷ್ಮಾಂಡಾದೇವಿ: (ಕಾಮಾಕ್ಷಿ) ನಾಲ್ಕನೇ ದಿನ ಕೂಷ್ಮಾಂಡಾದೇವಿ ದೇವಿಯ ಆರಾಧನೆ ನಡೆಯುತ್ತದೆ. ಈ ದಿನ ಕೇಸರೀ ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ಕೂಷ್ಮಾಂಡಾದೇವಿ ಕೇಸರೀ ಬಣ್ಣ ಪ್ರಿಯೇ ಎನ್ನುವ ನಂಬಿಕೆಯಿದೆ. ನೈವೇದ್ಯಕ್ಕೆ ಬೆಳ್ಳುಳ್ಳಿ ಯಿಂದ ಮಾಡಿದ ತೂತು ಇಲ್ಲದ ವಡೆಗಳನ್ನು ಅರ್ಪಿಸಬೇಕು .

5. ಸ್ಕಂದ ಮಾತೆ: (ಲಲಿತಾ) ನವರಾತ್ರಿಯ ಐದನೇ ದಿನ ಸ್ಕಂದ ಮಾತೆಯ ಪೂಜೆ ಮಾಡಲಾಗುತ್ತದೆ. ಈ ದಿನದಂದು ಬಿಳಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಶುಭವಾಗುತ್ತದೆ. ನೈವೇದ್ಯಕ್ಕೆ ಮೊಸರನ್ನ ಮತ್ತು ಬಾಳೆಹಣ್ಣು ಅರ್ಪಿಸಬೇಕು.

6. ಕಾತ್ಯಾಯಿನಿ: (ಲಕ್ಷೀ ದೇವಿ) ನರಾತ್ರಿಯ ಆರನೇ ದಿನ ಕಾತ್ಯಾಯಿನಿ ಪೂಜೆ ನಡೆಯುತ್ತದೆ. ಈ ದಿನ ಕೆಂಪು ಬಣ್ಣದ ಉಡುಪು ಧರಿಸಿ ಪೂಜೆ ಮಾಡಬೇಕು. ನೈವೇದ್ಯಕ್ಕೆ ಕೇಸರೀ ಬಾತ್ ಮತ್ತು ಜೇನನ್ನು ಅರ್ಪಿಸಬೇಕು .

7. ಕಾಳರಾತ್ರಿ: (ಸರಸ್ವತಿ) ಏಳನೇ ದಿನ ಕಾಳರಾತ್ರಿ ದೇವಿಗೆ ವಿಶೇಷ ಪೂಜೆ ನಡೆಯುತ್ತದೆ. ಈ ದಿನ ನೀಲಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆದಾಗುತ್ತದೆ ಎನ್ನುವ ನಂಬಿಕೆಯಿದೆ. ನೈವೇದ್ಯಕ್ಕೆ ಬಿಸಿ ಬೇಳೆ ಬಾತ್, ಬೆಲ್ಲ ಅರ್ಪಿಸಬೇಕು.

8. ಮಹಾಗೌರಿ: (ದುರ್ಗಾ) ಎಂಟನೇ ದಿನ ಮಹಾಗೌರಿ ದೇವಿಯ ಆರಾಧನೆ ನಡೆಯುತ್ತದೆ. ಈ ದಿನದಂದು ಗುಲಾಬಿ ಬಣ್ಣದ ಉಡುಪು ಧರಿಸಿ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆಯಿದೆ. ನೈವೇದ್ಯಕ್ಕೆ ಪೊಂಗಲ್ ಮತ್ತು ಬಾಳೆ ಹಣ್ಣನ್ನು ಅರ್ಪಿಸಬೇಕು.

9. ಸಿದ್ಧಿದಾತ್ರಿ:(ಮಹಿಷಾಸುರ ಮರ್ದಿನಿ) ಒಂಬತ್ತನೇ ಹಾಗೂ ಕೊನೆಯ ದಿನ ಸಿದ್ಧಿದಾತ್ರಿ ದೇವಿಯ ಪೂಜೆ ನಡೆಯುತ್ತದೆ. ಈ ದಿನದಂದು ನೇರಳೆ ಬಣ್ಣದ ಉಡುಪು ಅಥವಾ ಅರಿಷಿಣ ಬಣ್ಣದ ಧರಿಸಿ ಪೂಜೆ ಮಾಡಬೇಕು. ನೈವೇದ್ಯಕ್ಕೆ ಪಾಯಸ ಮತ್ತು ಎಳ್ಳು ಸಮರ್ಪಿಸಬೇಕು. ಸಕ್ಕರೆ ಗಿಂತ ಬೆಲ್ಲದಿಂದ ಮಾಡಿದ ಸಿಹಿಯನ್ನೇ ಹೆಚ್ಚಾಗಿ ದೇವಿಗೆ ಅರ್ಪಿಸಿದರೆ ದೇವಿ ಹೆಚ್ಚು ಸಂತುಷ್ಟಿ ಗೊಳ್ಳುವಳು .

ಕಪ್ಪು ಬಣ್ಣ: ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸಬಾರದು ಎಂದು ಹೇಳುತ್ತಾರೆ. ಕಪ್ಪು ಬಣ್ಣ ದುಃಖದ ಸಂಕೇತ. ಹಾಗಾಗಿ ನವರಾತ್ರಿಯಂದು ಕಪ್ಪು ಬಣ್ಣದ ಉಡುಪು ಧರಿಸುವುದು ಅಶುಭ ಎನ್ನುವ ನಂಬಿಕೆಯಿದೆ. ಲೋಕೋ ಸಮಸ್ತೋ ಸುಖಿನೋಭವಂತು ಸನ್ಮಂಗಳಾಮಿ ಬವಂತು. ಜಗನ್ಮಾತೆಯು ಕೃಪೆ ಎಲ್ಲರ ಮೇಲೆ ಇರಲಿ .

LEAVE A REPLY

Please enter your comment!
Please enter your name here