ಮಣ್ಣಿನಲ್ಲಿ ಸಿಗುವ ಕಲ್ಲು ಖನಿಜ ಬಳಸಿಕೊಂಡು ಎಂಥಹ ಮಾರಣಾಂತಿಕ ಖಾಯಿಲೆ ಗುಣಪಡಿಸಬಹುದು ಗೊತ್ತಾ…!!

0
1179

ನಮ್ಮ ದೇಹದ ರಚನೆ ಮತ್ತು ಕ್ರಿಯೆಗಳಲ್ಲಿ ಖನಿಜಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಆದರೆ ವೈದಿಕ ಸಾಹಿತ್ಯಗಳಲ್ಲಿ ಕೇವಲ ಚಿನ್ನ ಮತ್ತು ಕಬ್ಬಿಣವನ್ನು ಮಾತ್ರ ಚಿಕಿತ್ಸೆಗಾಗಿ ಉಪಯೋಗಿಸುತ್ತಿದ್ದ ಉಲ್ಲೇಖಗಳಿವೆ. ಶಿಶುವಿನ ವ್ಯಾಧಿಕ್ಷಮತ್ತ ಶಕ್ತಿ (immunity) ಯನ್ನು ಹೆಚ್ಚಿಸಲು ಸ್ವರ್ಣ ಪ್ರಾಶನ ಮಾಡಿಸುತ್ತಿದ್ದುದೂ, ರಕ್ತಹೀನತೆ ಯಾದಾಗ ಕಬ್ಬಿಣದ ಸೂಕ್ಷ್ಮವಾದ ಚೂರ್ಣವನ್ನು ಸೇವಿಸುತ್ತಿದ್ದುದೂ ಅಥರ್ವವೇದ’ದಲ್ಲಿ ಕಾಣಸಿಗುತ್ತದೆ. ಚರಕ ಸಂಹಿತೆ ಮೊದಲಾದ ಸಂಹಿತೆಗಳ ಕಾಲದಲ್ಲೂ ಪರಿಸ್ಥಿತಿ ಇದಕ್ಕಿಂತ ತುಂಬಾ ಸುಧಾರಿಸಲಿಲ್ಲ. ಶಿಲಾಜತು, ಗಂಧಕ. ಕಾಶೀಸ ಮತ್ತು ಗೈರಿಕಗಳು ಆಗ ಔಷಧೀಯ ಮಹತ್ವವನ್ನು ಗಳಿಸಿಕೊ೦ಡವು. ಆದರೂ ವನಸ್ಫತಿಗಳಷ್ಟು ವ್ಯಾಪಕವಾಗಿ ಅವುಗಳ ಬಳಕೆ ನಡೆಯಲಿಲ್ಲ.

ಆದರೆ ಆರನೇ ಶತಮಾನದ ಸುಮಾರಿಗೆ ಪಾದರಸ ಚಿಕಿತ್ಸಕರ ಗಮನ ಸೆಳೆಯುವುದರೊಂದಿಗೆ ಆಯುರ್ವೇದದಲ್ಲಿ ಹೊಸ ಮನ್ವಂತರವೊಂದು ಪ್ರಾರಂಭವಾದಂತಾಯಿತು. ಮೊದಮೊದಲು ಇದನ್ನು ಚಿನ್ನ, ಬೆಳ್ಳಿ ಮೊದಲಾದ ಲೋಹಗಳನ್ನಾಗಿ ಪರಿವರ್ತಿಸಲು ಬಳಸಿಕೊಂಡು ಧಾತುವಾದವನ್ನು ಪ್ರಾರಂಭಿಸಿದರಾದರೂ ಜೊನೆಗೆ ಪಾದರಸದ ತೀವ್ರ ದೈಹಿಕ ಪರಿಣಾಮಗಳನ್ನು ಮನಗಂಡು ಚಿಕಿತ್ಸೆಯಲ್ಲಿ ವಿಭಿನ್ನ ರೂಪಗಳಲ್ಲಿ ಪ್ರಯೋಗಿಸಲಾಯಿತು. ಪಾದರಸವನ್ನು ಆಯುರ್ವೇದದಲ್ಲಿ ಹಲವು ಪಾರಿಭಾಷಿಕ ಪದಗಳಿಂದ ಹೆಸರಿಸಲಾಗಿದೆ.

ಪಾದರಸವು ಇತರ ಎಲ್ಲಾ ಧಾತುಗಳನ್ನೂ ಕರಗಿಸಬಲ್ಲ ಹಾಗೂ ತನ್ನಲ್ಲಿ ಅಂತರ್ಭಾವ ಮಾಡಿಸಬಲ್ಲ ಸಾಮರ್ಥ್ಯವನ್ನು ಹೊಂದಿರುವುದರಿಂದ ಇದಕ್ಕೆ “ರಸ’ ಎಂದರು. ಉಳಿದೆಲ್ಲವುಗಳಿಗಿ೦ತಲೂ ಶ್ರೇಷ್ಠವೆಂದು ಕಂಡುಬಂದುದರಿಂದ ರಸೇ೦ದ್ರ ಎಂದರು. ದೇಹ ಹಾಗೂ ಲೋಹದ ಮೇಲೆ ಇದು ತನ್ನ ಸಿದ್ಧಿಯನ್ನು ತೋರಿಸಬಲ್ಲುದು ಎ೦ಬರ್ಥದಲ್ಲಿ “ಸೂತ’ ಎಂದರು.

ರೋಗವೆಂಬ ಕೆಸರಿನ ಹೊ೦ಡದಲ್ಲಿ ಮುಳುಗಿದವನನ್ನು ಪಾರು ಮಾಡುವುದರಿಂದ ಪಾರದ ಎಂದರು. ಎಲ್ಲಾ ಧಾತುಗಳ ತೇಜಸ್ಸಿನ ಮಿಶ್ರಣವೇ ಇದು ಎಂದು ಭಾವಿಸಿ ಮಿಶ್ರಕ ಎ೦ದರು. ಪರಮೇಶ್ವರನಿಂದ ಇದು ಸೃಷ್ಟಿಯಾಯಿತೆಂದು ನಂಬಿ ರಸೇಶ್ವರ ಎ೦ದರು. ಹೀಗೆ ಹತ್ತು ಹಲವು ಹೆಸರುಗಳೊಂದಿಗೆ ಆಯುರ್ವೇದ ಪ್ರಪಂಚವನ್ನು ಪ್ರವೇಶಿಸಿದ ಪಾದರಸವು ಕ್ರಾಂತಿಕಾರಿ ಬದಲಾವಣೆಗಳನ್ನೂ ತಂದಿತು.

ಆಗಿನ ಕಾಲದಲ್ಲಿ ಔಷಧಿ ಸೇವಿಸುವುದೆ೦ದರೆ ಹಿಂಸೆಯೆವಿಸುತ್ತಿತ್ತು. ಅರ್ಧ ಅಥವಾ ಒಂದು ಲೋಟ ಕಹಿಯಾದ ಕಷಾಯ ಸೇವಿಸಬೇಕಾಗುತ್ತಿತ್ತು. ಆದರೆ ಪಾದರಸದ ಭಸ್ಮವನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಸೇವಿಸದರೆ ಸಾಕು.ಅತ್ಮ೦ತ ಬೇಗನೆ ಆದು ತನ್ನ ಪ್ರಭಾವವನ್ನು ಪ್ರಕಟಿಸುತ್ತಿತ್ತು. ಈಗಿನ ಆಂಟಯೋಟಿಕ್‌ಗಳ ಮಾಯಾಲೋಕಕ್ಕೆ ಸಮಾನವಾಗಿ ಪಾದರಸದ ಭಸ್ಮ ಎಲ್ಲಾ ರೋಗಗಳನ್ನು ನಾರಪಡಿಸಬಲ್ಲುದು ಎ೦ಬ ಆರ್ಥದಲ್ಲಿ ಔಷಧಗಳೆಲ್ಲದರಲ್ಲೂ ಪಾದರಸವೇ ಶ್ರೇಷ್ಠ ಎಂದು “ರಸರತ್ನ ಸಮುಚ್ಚಯ’ ಗ್ರ೦ಥದಲ್ಲಿ ಅಭಿಪ್ರಾಯಪಡಲಾಗಿದೆ. ರಸತರ೦ಗಿಣಿ. ರಸಚ೦ಡಾಂಶು, ರಸಾಮೃತ, ಆಯುರ್ವೇದ ಪ್ರಕಾಶ, ರಸೇ೦ದ್ರ ಸಾರ ಸಂಗ್ರಹ, ರಸ ಕಾಮರ್ಧೆನು ಮೊದಲಾದ ಹಲವಾರು ಗ್ರಂಥಗಳು ಪಾದರಸವನ್ನು ಚಿಕಿತ್ಸಾತ್ಮಕವಾಗಿಬಳಸುವ ವಿಭಿನ್ನ ಸಾಧ್ಯತೆಗಳನ್ನು ವಿಸಾರವಾಗಿ ವಿವೇಚಿಸಿವೆ.

ರಸಶಾಸ್ತ್ರದಲ್ಲಿ ಸಾಮಾನ್ಯವಾಗಿ ಖನಿಜಗಳನ್ನು ಔಷಧಿಯಾಗಿ ಉಪಯೋಗಿಸಲ್ಪಡುತ್ತವೆ.ಅವುಗಳ ಪ್ರಭೇದಗಳು, ಗುಣಧರ್ಮಗಳು, ಉಪಯೋಗಗಳ ವಿಶ್ಲೇಷಣೆ ನಡೆಸಿಕೊಳ್ಳಲಾಗುತ್ತದೆ. ಇವುಗಳನ್ನು ವಾನಸ್ಪತಿಕ ದ್ರವಗಳೊಂದಿಗೆ ಸಂಯೋಜಿಸಿ ಪ್ರಯೋಗಿಸುವ ಕ್ರಮವೂ ರೂಢಿಯಲ್ಲಿದೆ. ಆದರೆ ಈ ಖನಿಜಗಳನ್ನು ಭಸ್ಮ
ಸ್ನರೂಪದಲ್ಲಿ ಸೇವಿಸುವ ಕ್ರಮ ಅತ್ತಂತ ಜನಪ್ರಿಯವಾಗಿದೆ.

ಪಾದರಸಕ್ಕೆ ಇಲ್ಲಿ ಆಧಿಕ ಪ್ರಾಶಸ್ತ್ಯವಿದ್ದು ಉಳಿದ ಖನಿಜಗಳು ಪಾದರಸದ ಮೇಲೆ ಬೀರಬಲ್ಲ ಪರಿಣಾಮದ ಆಧಾರದ ಮೇಲೆ ಮಹಾ ರಸಗಳು, ಉಪರಸಗಳು ಮತ್ತು ಸಾಧಾರಣ ರಸಗಳೆಂಬ ವರ್ಗೀಕರಣ ಮಾಡಲಾಗಿದೆ. ಇವುಗಳಲ್ಲದೆ ರತ್ನ-ಉಪರತ್ನ ಗಳನ್ನೂ, ಕ್ಯಾಲ್ಸಿಯಂ ಅಥವಾ ಸುಣ್ಣದ ಅಂಶವಿರುವ ದ್ರವ್ಯಗಳನ್ನು ಪತ್ತೇಕವಾಗಿ ವಿವೇಜಿಸಲಾಗಿದೆ. ಚಿನ್ನ ಕಬ್ಬಿಣ, ಸತು ಮೊದಲಾದ ಲೋಹಗಳು ಲೋಹವರ್ಗದಲ್ಲೂ, ವಿಷ ಪ್ರಭಾವ ಬೀರಬಲ್ಲ ವನಸ್ಪತಿಗಳನ್ನು “ವಿಷ-ಉಪವಿಷ’ಗಳಲ್ಲೂ ಆಳವಡಿಸಿಕೊಳ್ಳಲಾಗಿದೆ. ಹೀಗೆ ರಸಶಾಸ್ತ್ರ ಆತ್ಯಂತ ಶೀಘ್ರವಾಗಿ ರೋಗ ನಿರ್ಮೂಲನ ಮಾಡುವ ಔಷಧಿಗಳ ಸಂಗ್ರಹವಾಗಿ, ಪ್ರತ್ಯೇಕ ಚಿಕಿತ್ಸಾ ಸಂಪ್ರದಾಯವಾಗಿ ಬೆಳೆದುಬಂದಿದೆ.

“ಪಾದರಸವು ದೇಹದ ಎಲ್ಲ ಭಾಗಗಳ ಮೇಲೂ ತನ್ನ ಪ್ರಭಾವವನ್ನು ಬೀರಬಲ್ಲದು. ಇದು ತ್ರಿದೋಷಗಳಿಂದ ಉಂಟಾದ ರೋಗಗಳೆಲ್ಲವನ್ನೂ ನಿವಾರಿಸಬಲ್ಲುದು” ಎಂದು ರಸಶಾಸ್ತ್ರವು ನಂಬುತ್ತದೆ. ಇದು ಗಾಯಗಳನ್ನು ಮಾಯಿಸುವುದು, ಕೀವನ್ನು ನಿವಾರಿಸುವುದು ; ಚರ್ಮರೋಗ ಮತ್ತು ಲೈಂಗಿಕ ರೋಗಗಳಾದ ಸಿಫಿಲಿಸ್‌, ಗೊನೊರಿಯಾಗಳಲ್ಲಿ ಪಾದರಸದಿ೦ದ ತಯಾರಿಸಿದ ಔಷಧಿಗಳು ಅತ್ಕಂತ ಪರಿಣಾಮಕಾರಿ.

ಮಿದುಳು ಮತ್ತು ನರಮಂಡಕಕ್ಕೆ ಬಲವನ್ನು ನೀಡುವುದರಿಂದ ವಾತವ್ಯಾಧಿಗಳು ಹಾಗೂ ನರಗಳಿಗೆ ಸ೦ಬ೦ಧಿಸಿದ ಕಾಯಿಲೆಗಳಲ್ಲಿ ಇದು ಉಪಯುಕ್ತವಾಗುತ್ತದೆ. ಪಾದರಸದಿಂದ ತಯಾರಿಸುವ “ಮುಗ್ಧ ರಸ’ವು ಮಕ್ಕಳ ವಾಂತಿ ಮತ್ತು ಭೇದಿಗಳನ್ನು ಗುಣ ಪಡಿಸುತ್ತದೆ. ರಕ್ತವಿಕಾರಗಳಲ್ಲಿ, ಕೆಮ್ಮು ದಮ್ಮುಗಳಲ್ಲಿ, ಕ್ಷಯರೋಗದಲ್ಲಿ, ಶುಕ್ರದೌರ್ಬಲ್ಯ, ಷಂಡತ್ವ, ಬ೦ಜೆತನದಲ್ಲಿ, ಕುಷ್ಠರೋಗದಲ್ಲಿ, ಜ್ವರದಲ್ಲಿ ಹಾಗೂ ಮೂತ್ರರೋಗಗಳಲ್ಲಿ ಔಷಧಿಗಳು ಇಂದು ಅತ್ಯಂತ ಯಶಸ್ವಿಯಾಗುತ್ತಿವೆ.

ರಸಸಿ೦ಧೂರ, ಮಕರದ್ದಜ,ಕಜ್ಜಲಿ, ರಸಪರ್ಪಟಿ ಮೊದಲಾದ ರಸೌಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಕ್ರಮ ಮೀರಿ ಉಪಯೋಗಿಸಿದಾಗ ಇದು ಬಾಯಿ ಮತ್ತು ಜಠರಗಳಲ್ಲಿ ದಾಹ, ಹೊಟ್ಟೆನೋವು, ವಾಂತಿ, ಅತಿಸಾರ, ಲಾಲಾಸ್ರಾವ, ರಕ್ತಪಿತ್ತ ಮೂತ್ರ ಆಘಾತ, ಪ್ರಲಾಪ, ಮೂರ್ಛೆ ಹಾಗೂ ಕೊನೆಯಲ್ಲಿ ಮೃತ್ಯುವಿಗೂ ಕಾರಣವಾಗ ಬಲ್ಲುದು. ಆದುದರಿಂದ ರಸೌಷಧಿಗಳ ಸೇವನೆಯಲ್ಲಿ ಅತ್ಯಂತ ಜಾಗರೂಕತೆ ಇರಬೇಕಾಗುತ್ತದೆ.

ಚಿಕಿತ್ಸೆಗಾಗಿ ಉಪಯೋಗಿಸುವ ಮುಂಚೆ ಪಾದರಸವನ್ನು ಎ೦ಟು ವಿಭಿನ್ನ ಕ್ರಿಯೆಗಳ ಮುಖಾಂತರ ಶುದ್ಧಿಗೊಳಿಸಲಾಗುತ್ತದೆ. ಕೆಲವು ಗ್ರಂಥಗಳಲ್ಲಿ ಹದಿನೆಂಟು ಕ್ರಿಯೆಗಳನ್ನು ಉಲ್ಲೇಖಿಸಲಾಗಿದೆ. ಇವುಗಳಿಗೆ ಸಂಸ್ಥಾರಗಳೆಂದು ಹೆಸರು.ಸ೦ಸ್ಕಾರಗಳ ಮೂಲಕ ಪಾದರಸವು ಔಷಧೀಯ ಮೌಲ್ಯಗಳನ್ನು ಗಳಿಸಿಕೊಳ್ಳುತ್ತದೆ.”ಹೆಚ್ಚಾಗಿ ‘ ಪಾದರಸವನ್ನು ಗಂಧಕದೊಡನೆ ಮಿಶ್ರಿಸಿ *ಕಜ್ಜಲಿ’ ಎಂಬ ಔಷಧ ತಯಾರಿಸಿ ಅದರೊಂದಿಗೆ ಬೇರೆ ಬೇರೆ ವನಸತಿಗಳ ಸ೦ಯೋಜನೆಯಿಂದ ರಸೌಷಧಿಗಳನ್ನು ತಯಾರಿಸುತ್ತಾರೆ.

ಆದರೆ ಕೇವಲ ಪಾದರಸವನ್ನು ಉಪಯೋಗಿಸಿದ ಔಷಧಿಗಳು ಕೂಡಾ ಸಮರ್ಪಕವಾದ ನಿರ್ದೇಶನಗಳನ್ನು ಅನುಸರಿಸಿದರೆ ಸಂಜೀವಿನಿಯಂತೆ ಪ್ರಾಣರಕ್ಷಕವಾಗಿ ಕಲಸಮಾಡುತ್ತವೆ. ಹೀಗೆ ಪಾದರಸವು ಆಯುರ್ವೇದದಲ್ಲಿ ಹೂಸ ಚೈತನ್ಯವನ್ನು ಮೂಡಿಸಿತು.ದೇಹದಲ್ಲಿ ಎಕೃತ ಪರಿಣಾಮಗಳನ್ನು ಮೂಡಿಸಬಲ್ಲ ಔಷಧಿಗಳು “ಅಭೇಷಜ’ ಎಂದು ಹೇಳಿದ ಆಚಾರ್ಯ ಚರಕರ ಮಾತನ್ನು ಮೀರಿ ಸಮರ್ಪಕವಾಗಿ ಬಳಸುವುದೇ ಚಿಕಿತ್ತಕನ ಕೌಶಲ್ಯ ; ವಿಷವನ್ನು ಕೂಡಾ ಸಂಸ್ಕಾರದಿಂದ ಔಷಧಿಯನ್ನಾಗಿ ಮಾಡಬಹುದು.

ಆಗ ಅದು ಕ್ಷಿಪ್ರ ಪರಿಣಾಮವನ್ನು ನೀಡುವುದು ಎಂಬ ಹೊಸ ವಿಚಾರಧಾರೆ ಬೆಳೆದು ಎಸ್ತಾರವಾದ ರಸಶಾಸ್ತವು ಉಂಟಾಯಿತು. ಹೀಗೆ ರಸಶಾಸ್ತ್ರವು ಸನಾತನ ಸಂಪ್ರದಾಯವನ್ನು ವಿರೋಧಿಸಿದುದರಿಂದ ರಸಶಾಸ್ತ್ರವು ಆಯುರ್ವೇದವೇ ಅಲ್ಲ ಎಂದು ಕೆಲವರು ಅಭಿಪ್ರಾಯ ಪಡುತಾರೆ. ಆದರೆ ರಸಶಾಸ್ತದ ಮೂಲ ಸಿದ್ಧಾಂತಗಳು ಆಯುರ್ವೇದದ್ದೇ ಆಗಿದ್ದು ಔಷಧಿಗಳಲ್ಲಿ ಮಾತ್ರ ವಿಭಿನ್ನತೆಯು ಗೋಚರಿಸುವುದರಿಂದ ಇದನು, ಬೇರೆಯೇ ಎನ್ನುವಂತಿಲ್ಲ. ಚರಕ ಹಾಗೂ ಸುಶ್ರುತಗಳಲ್ಲಿ ಕಾಲಕಾಲಕ್ಷೆ ಅಗತ್ಯವಾದ ಬದಲಾವಣೆಗಳನ್ನು ಮಾಡಿಕೊಳ್ಳುವ ಸ್ವಾತ೦ತ್ರ್ಯ ನೀಡಲಾಗಿರುವುದರಿಂದಲೂ ರಸಶಾಸ್ತ್ರವು ಆಯುರ್ವೇದದ್ದೇ ಒಂದು ಭಾಗ ಎನ್ನುವುದು ಸ್ಪಷ್ಟವಾಗುತ್ತದೆ.

LEAVE A REPLY

Please enter your comment!
Please enter your name here