ಹಂಸಲೇಖಾರ ಮೇಲೆ ಗುಡುಗಿದ ಪ್ರಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್. ಏನೆಂದಿದ್ದಾರೆ ನೀವೇ ನೋಡಿ.

0
5810

ಕನ್ನಡ ಚಲನಚಿತ್ರರಂಗದ ಪ್ರಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನಾದಬ್ರಹ್ಮ ಎಂದೇ ಬಿರುದಾಂಕಿತರಾಗಿರುವ ಹಂಸಲೇಖ ಅವರು ಸಾಕಷ್ಟು ಹಾಡುಗಳನ್ನು ಚಲನಚಿತ್ರಗಳಿಗೆ ಸಂಯೋಜಿಸಿದ್ದಾರೆ. ಮೇರು ನಟರೊಂದಿಗೆ ಕೆಲಸಮಾಡಿರುವ ಹಂಸಲೇಖ ಅವರು ಈಗ ತಮ್ಮ ಘನತೆಗೆ ಕುತ್ತು ತಂದುಕೊಳ್ಳುವ ಕಾರ್ಯ ಎಸಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಆ’ಕ್ರೋಶ ವ್ಯಕ್ತವಾಗುತ್ತಿದೆ.

ಒಂದು ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಬ್ರಾಹ್ಮಣರನ್ನು ಉದ್ದೇಶಿಸಿ ಅದರಲ್ಲಿಯೂ ಮುಖ್ಯವಾಗಿ ಪೇಜಾವರ ಶ್ರೀಗಳ ಬಗ್ಗೆ ಅತ್ಯಂತ ಕೆಳಮಟ್ಟದಲ್ಲಿ ಮಾತನಾಡಿದ್ದರು. ಪೇಜಾವರಶ್ರೀಗಳ ಆಹಾರದ ಪದ್ಧತಿಯ ಮೇಲೆ ಹೀ’ಯಾಳಿಕೆ ರೀತಿಯಲ್ಲಿ ಮಾತನಾಡಿದ್ದರು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಭಾರಿ ಸದ್ದು ಮಾಡುತ್ತಿದೆ.

ಪೇಜಾವರ ಶ್ರೀಗಳು ದಲಿತರ ಮನೆಯಲ್ಲಿ ಹೋಗಿ ಕುಳಿತುಕೊಳ್ಳಬಹುದು ಅಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನಲು ಸಾಧ್ಯವೇ. ಕೋಳಿಯ ರ’ಕ್ತ ಕೊಟ್ಟರೆ ತಿನ್ನಲು ಸಾಧ್ಯವೇ. ಕೋಳಿಯ ಲಿವರ್ ಕೊಟ್ಟರೆ ತಿನ್ನಲು ಸಾಧ್ಯವೇ ಎಂದು ಮಾತನಾಡಿದರು. ಈ ವಿಡಿಯೋ ವೈರಲ್ ಆಗಿ ಬ್ರಾಹ್ಮಣರ ಅಷ್ಟೇ ಅಲ್ಲದೆ ಎಲ್ಲರಲ್ಲೂ ಆ’ಕ್ರೋಶ ಭುಗಿಲೆದ್ದಿತು. ಪೇಜಾವರ ಶ್ರೀಗಳ ವಯಸ್ಸು ಎಂತದ್ದು ನಿಮ್ಮ ವಯಸ್ಸು ಎಂಥದ್ದು ಎಂದು ಹಲವರು ಪ್ರಶ್ನೆ ಎತ್ತಿದ್ದರು.

ಈಗಾಗಲೇ ಸಮಾಜಕ್ಕೆ ಹಲವಾರು ಕೊಡುಗೆಗಳನ್ನು ನೀಡಿರುವ ಪೇಜಾವರ ಶ್ರೀಗಳು ಐಕ್ಯರಾದರು ಸಹ ಅವರ ಬಗ್ಗೆ ಮಾತನಾಡಿದ್ದು ತಪ್ಪು ಎಂದು ಸಾವಿರಾರು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಹಂಸಲೇಖ ಅವರನ್ನು ಸರಿಗಮಪ ಕಾರ್ಯಕ್ರಮದಿಂದ ನಿ’ಷೇಧಿಸಬೇಕು ಎಂದು ಆಗ್ರ”ಹಿಸುತ್ತಿದ್ದಾರೆ.

ಸೆಲೆಬ್ರಿಟಿ ಆಗಿ ಹಂಸಲೇಖ ಅವರು ತಮ್ಮದೇ ಕಾರ್ಯಕ್ಷೇತ್ರದಲ್ಲಿ ಅತ್ಯುನ್ನತ ಹೆಸರನ್ನು ಸಾಧಿಸಿದ್ದಾರೆ. ಅದರ ಜೊತೆಜೊತೆಗೆ ಹಂಸಲೇಖ ನೂರಾರು ಪ್ರಶಸ್ತಿಗಳನ್ನು ಸಾವಿರಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ದಿಗ್ಗಜರೊಂದಿಗೆ ಕೆಲಸಮಾಡಿರುವ ಹಂಸಲೇಖ ಅವರು ಈವರೆಗೂ ಸಾಕಷ್ಟು ಹೆಸರು ಸಂಪಾದಿಸಿದ್ದಾರೆ. ಆದರೆ ಎಷ್ಟೇ ಹೆಸರು ಸಂಪಾದಿಸಿದರು ಸಹ ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು ಎಂಬಂತೆ ಜನ ಪರ ವಿರೋ’ಧ ಚರ್ಚೆಗಳನ್ನು ಮಾಡುತ್ತಲೇ ಇದ್ದಾರೆ.

ಈ ಎಲ್ಲಾ ಸಾಮಾಜಿಕ ಬೆಳವಣಿಗೆಗಳನ್ನು ಕಂಡ ಹಂಸಲೇಖ ಅವರು ನಂತರ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಪ್ ಲೋಡ್ ಮಾಡಿ ಕ್ಷಮೆ ಕೇಳಿದರು. ಆದರೆ ಅದು ಕಾಟಾಚಾರದ ಕ್ಷಮೆ ಅಂತಿತ್ತು ಎಂಬುದು ಹಲವರ ಅಭಿಪ್ರಾಯ. ಇದೇ ವಿಚಾರವಾಗಿ ಹಂಸಲೇಖ ಅವರ ಮೇಲೆ ಎಫ್’ಐಆರ್ ಕೂಡ ದಾಖಲಾಗಿದ್ದು ಈ ಕೂಡಲೇ ಅವರು ಶ್ರೀಗಳ ಬೃಂದಾವನದ ಮುಂದೆ ಬಂದು ಕ್ಷ’ಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಕರ್ನಾಟಕ ಚಲನಚಿತ್ರದ ಲೆಜೆಂಡರಿ ಗಾಯಕಿ ಎಂದೇ ಖ್ಯಾತರಾದ ರತ್ನಮಾಲಾ ಪ್ರಕಾಶ್ ಅವರು ಕೂಡ ಹಂಸಲೇಖ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಗುಡುಗಿ’ರುವುದು ಕಂಡುಬಂದಿದೆ. ಹಂಸಲೇಖ ಅವರೇ ಮೊದಲು ನೀವು ಘನತೆಯನ್ನು ಉಳಿಸಿಕೊಳ್ಳಿ. ಎಷ್ಟು ಸಂಗೀತ ನಿರ್ದೇಶನ ಮಾಡಿದರೆ ಏನು ಎಷ್ಟು ಅವಾರ್ಡ್ಸ್ ತೆಗೆದುಕೊಂಡರೆ ಏನು ಪ್ರಯೋಜನ. ನಾಲಿಗೆಗೆ ಹದ್ದುಬಸ್ತು ಇಲ್ಲ ಎಂದ ಮೇಲೆ. ಎಂದು ಫೇಸ್ಬುಕ್ ಖಾತೆಯಲ್ಲಿ ಒಬ್ಬರ ಪೋಸ್ಟ್ ಮೇಲೆ ಕಾಮೆಂಟ್ ಮಾಡಿದ್ದಾರೆ.

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಹಂಸಲೇಖ ಅವರಿಗೆ ಎದುರಾಗಿರುವ ಆ’ಪತ್ತಿನಿಂದ ಅವರು ಕ್ಷೇಮವಾಗಿ ಹೊರಬರಲಿ ಎನ್ನುವುದೇ ನಮ್ಮೆಲ್ಲರ ಹಾರೈಕೆ. ನ್ಯಾಯಯುತವಾದ ವಾದ ವಿವಾದಗಳ ಮೂಲಕ ಸಲ್ಲಬೇಕಾದ ಗೌರವಗಳು, ಘನತೆಗಳು ಪೇಜಾವರ ಶ್ರೀಗಳಿಗೆ ಹಾಗೂ ಹಂಸಲೇಖ ಅವರಿಗೆ ಸಮಾನವಾಗಿ ಸಲ್ಲಬೇಕು ಎನ್ನುವುದು ಹಲವರ ಅಭಿಪ್ರಾಯ.

LEAVE A REPLY

Please enter your comment!
Please enter your name here