ಬಿಪಿ ಸಮಸ್ಯೆ ಇದ್ಯಾ? ಹಾಗಾದ್ರೆ ದಿನಾ ಒಂದು ಗ್ಲಾಸ್ ಈ ಜ್ಯೂಸ್ ಕುಡಿಯಿರಿ. ನಂತರ ಆಗುವ ಜಾದೂ ನೀವೇ ನೋಡಿ.

0
11888

ಬಿಪಿ ಸಮಸ್ಯೆ ಇದ್ಯಾ? ಹಾಗಾದ್ರೆ ದಿನಾ ಒಂದು ಗ್ಲಾಸ್ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ರ’ಕ್ತದ ಒ’ತ್ತಡ ಜಾಸ್ತಿ ಇದ್ದರೆ, ನಿಮ್ಮ ಆಹಾರ ಪದ್ಧತಿಯಲ್ಲಿ ಬೀಟ್‌ರೂಟ್ ಸೇರಿಸಿಕೊಳ್ಳಿ. ನಂತರ ಆಗುವ ಜಾದೂ ನೀವೇ ನೋಡಿ

ತರಕಾರಿ ತಿನ್ನುವವರಿಗೆ ಆರೋಗ್ಯ ಸಮಸ್ಯೆಗಳು ಕಡಿಮೆ ಎನ್ನುವ ಮಾತು ಕೇಳಿದ್ದೇವೆ. ಕೆಲವೊಂದು ಪ್ರಕಾರದಲ್ಲಿ ನೋಡುವುದಾದರೆ ಇದು ನಿಜ ಎನಿಸುತ್ತದೆ. ಏಕೆಂದರೆ ತರಕಾರಿಗಳು ನೈಸರ್ಗಿಕ ಉತ್ಪನ್ನಗಳ ಗುಂಪಿಗೆ ಸೇರಿರುವುದರಿಂದ ಇವುಗಳಲ್ಲಿ ಅಡ್ಡಪರಿಣಾಮಗಳು ಕಡಿಮೆ ಇರುತ್ತವೆ.

ಜೊತೆಗೆ ಆರೋಗ್ಯದ ಲಾಭಗಳನ್ನು ಕೊಡುವಂತಹ ಗುಣಗಳು ಇವುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಈಗ ಎಲ್ಲಾ ಕಡೆ ಸಾಮಾನ್ಯವಾಗಿ ಕಾಡುತ್ತಿರುವ ಕಾಯಿಲೆ ಎಂದರೆ ಅದು ರಕ್ತದ ಒತ್ತಡ. ಇದಕ್ಕೆ ಪರಿಹಾರವಾಗಿ ಬಿಟ್ರೋಟ್ ಕೆಲಸ ಮಾಡಬಲ್ಲದು ಎನ್ನುವ ಮಾತಿದೆ.

ರ’ಕ್ತದ ಒ’ತ್ತಡದ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಿ ವಿಶೇಷವಾಗಿ ವಯಸ್ಸಾದವರಿಗೆ ಹಾಗೂ ಗರ್ಭಿಣಿ ಮಹಿಳೆಯರಿಗೆ ಇದೊಂದು ಪ್ರಯೋಜನಕಾರಿಯಾದ ತರಕಾರಿಯಾಗಿದೆ ಎಂದು ತಿಳಿದುಬಂದಿದೆ. ಮೂಳೆಗಳ ಸಮಸ್ಯೆ ಎದುರಿಸುತ್ತಿರುವವರಿಗೆ, ರಕ್ತದಲ್ಲಿ ಸಕ್ಕರೆ ಪ್ರಮಾಣ ಏರುಪೇರಾದ ಜನರಿಗೆ ಬೀಟ್ರೋಟ್ ಒಂದು ಅತ್ಯುತ್ತಮ ನೈಸರ್ಗಿಕ ತರಕಾರಿ ಎಂದು ಹೇಳಬಹುದು.

ಬೀಟ್ರೋಟ್ ಹೇಗೆ ಸಹಾಯ ಮಾಡುತ್ತದೆ? ಹೃದ್ರೋಗ ತಜ್ಞರು ನೀಡಿರುವ ಮಾಹಿತಿಯ ಪ್ರಕಾರ ಯಾವ ತರಕಾರಿಗಳಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿರುತ್ತದೆ, ಅಂತಹ ತರಕಾರಿಗಳಿಂದ ರಕ್ತದ ಒತ್ತಡ ಕ್ರಮೇಣವಾಗಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಬೀಟ್ರೂಟ್ ನಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿದ್ದು, ಇದು ನೈಟ್ರಿಕ್ ಆಕ್ಸೈಡ್ ಎಂಬ ಆಮ್ಲವನ್ನು ಉತ್ಪತ್ತಿ ಮಾಡುತ್ತದೆ. ಇದರಿಂದ ರಕ್ತನಾಳಗಳು ಅಗಲವಾಗುತ್ತವೆ ಮತ್ತು ಅವುಗಳಲ್ಲಿ ಸರಾಗವಾಗಿ ರಕ್ತಸಂಚಾರ ಉಂಟಾಗುತ್ತದೆ.

ಇದರಿಂದ ಕ್ರಮೇಣವಾಗಿ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ. ಸಂಶೋಧಕರು ಹೇಳುವಂತೆ ಪ್ರತಿ ದಿನ ಅರ್ಧ ಕೆಜಿ ಬೀಟ್ರೋಟ್ ತಿನ್ನುವ ವ್ಯಕ್ತಿಯಲ್ಲಿ ಕೇವಲ 6 ಗಂಟೆಯಲ್ಲಿ ರಕ್ತದ ಒತ್ತಡ ಕಡಿಮೆಯಾದ ಬಗ್ಗೆ ಮಾಹಿತಿ ಸಿಕ್ಕಿದೆ.

​ರ’ಕ್ತದ ಒ’ತ್ತಡದ ನಿಯಂತ್ರಣಕ್ಕೆ ಬೀಟ್ರೋಟ್ ಬಳಕೆ ಹೇಗೆ? ಬೀಟ್ರೂಟ್, ನೀವು ತಯಾರು ಮಾಡುವ ಯಾವುದೇ ಸಲಾಡ್ ನಲ್ಲಿ ಉಪಯೋಗಿಸಬಹುದಾದ ತರಕಾರಿಯಾಗಿದೆ. ಇದನ್ನು ಮೆತ್ತಗಾಗುವವರೆಗೆ ಬೇಯಿಸಿ ತಿಂದರೆ ಸಾಕು. ಬೇಯಿಸುವುದರಿಂದ ಇದರಲ್ಲಿ ಯಾವುದೇ ಪೌಷ್ಟಿಕ ಸತ್ವಗಳ ಕೊರತೆ ಉಂಟಾಗುವುದಿಲ್ಲ.

​ಸಂಶೋಧನೆಯ ಪ್ರಕಾರ : ಸಂಶೋಧನೆಯ ಪ್ರಕಾರ, ಒಂದು ಗ್ಲಾಸ್ ಬೀಟ್‌ರೂಟ್ ಜ್ಯೂಸ್ ರಕ್ತದೊತ್ತಡ ಕಡಿಮೆ ಮಾಡುತ್ತದೆ. ಬೀಟ್‌ರೂಟ್ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಆಗಿ ಪರಿವರ್ತಿಸುವ ನೈಟ್ರೇಟ್’ಗಳಿಂದ ಸಮೃದ್ಧವಾಗಿದ್ದು, ನೈಟ್ರಿಕ್ ಆಕ್ಸೈಡ್ ರಕ್ತನಾಳಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ರಕ್ತದ ಹರಿವು ಮತ್ತು ರಕ್ತಪರಿಚಲನೆ ಸುಧಾರಿಸುತ್ತದೆ.

​ಮೊದಲನೆಯ ವಿಧಾನ : ಒಂದು ಬೀಟ್ರೂಟ್ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು, ಒಂದು ಕುಕ್ಕರ್ ಅಥವಾ ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಅದರಲ್ಲಿ ಹಾಕಿ ಬೇಯಿಸಬೇಕು. ಆನಂತರದಲ್ಲಿ ಇದರ ಸಿಪ್ಪೆಯನ್ನು ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿ ನೀವು ತಯಾರುಮಾಡುವ ಸಲಾಡ್ ನಲ್ಲಿ ಹಾಕಿ ಸೇವನೆ ಮಾಡಿ.

​ಎರಡನೆಯ ವಿಧಾನ : ಒಂದು ವೇಳೆ ನೀವು ಉಪಯೋಗಿಸುತ್ತಿರುವ ಬೀಟ್ರೋಟ್ ತುಂಬಾ ಗಟ್ಟಿಯಿದ್ದರೆ, ಅದರಿಂದ ಜ್ಯೂಸ್ ತಯಾರು ಮಾಡಿ ಕುಡಿಯಬಹುದು. ಇದನ್ನು ಸಣ್ಣ ಸಣ್ಣ ಹೋಳುಗಳನ್ನಾಗಿ ಕತ್ತರಿಸಿ, ನಂತರ ತುರಿದು, ಒಂದು ಬ್ಲೆಂಡರ್ ನಲ್ಲಿ ಹಾಕಿ ಅದರಿಂದ ಜ್ಯೂಸ್ ಹೊರ ತೆಗೆದು, ಅದಕ್ಕೆ ಸ್ವಲ್ಪ ಪುಡಿ ಉಪ್ಪು ಸೇರಿಸಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು.

ಇನ್ನೊಂದು ವಿಧಾನ : ಮನೆಯಲ್ಲಿ ಬೀಟ್‌ರೂಟ್ ಜ್ಯೂಸ್‌ ಮಾಡುವುದು ಹೇಗೆ?

2-4 ಮಧ್ಯಮ ಗಾತ್ರದ ಬೀಟ್‌ರೂಟ್ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಸಿಪ್ಪೆ ತೆಗೆದು, ಚಿಕ್ಕದಾಗಿ ಕಟ್ ಮಾಡಿ, ಜ್ಯೂಸ್ ಜಾರ್’ನಲ್ಲಿ ಹಾಕಿ, ರುಬ್ಬಿ. ಈಗ ಜ್ಯೂಸ್ ರೆಡಿ. ಇದಕ್ಕೆ ಬೇಕಾದರೆ ಅರ್ಧ ಸೇಬಿನ ರಸವನ್ನು ಸೇರಿಸಬಹುದು, ಜ್ಯೂಸ್ ಇನ್ನು ಸಿಹಿಯಾಗುತ್ತದೆ. ಬೀಟ್‌ರೂಟ್ ರಸವು ನೈಸರ್ಗಿಕವಾಗಿ ರುಚಿಯಾಗಿರುತ್ತದೆ. ಆದರೂ ನಿಂಬೆ ರಸ, ಸೇಬಿನ ರಸ ಸೇರಿಸುವ ಮೂಲಕ ನೀವು ಅದರ ರುಚಿಯನ್ನು ಹೆಚ್ಚಿಸಬಹುದು.ಹೀಗೆ ಸ್ವಲ್ಪ ದಿನಾ ಹೀಗೆ ಬೀಟ್‌ರೂಟ್ ಜ್ಯೂಸ್‌ ಕುಡಿಯುತ್ತಾ ಬಂದ್ರೆ ಖಂಡಿತವಾಗಿಯೂ ಬಿಪಿ ಸಮಸ್ಯೆಯನ್ನು ನಿಯಂತ್ರಿಸಬಹುದು.

LEAVE A REPLY

Please enter your comment!
Please enter your name here