ಯಂತ್ರೋದ್ಧಾರಕ ಆಂಜನೇಯ ಸ್ವಾಮಿ. ವ್ಯಾಸರಾಯರು ಹನುಮಂತನನ್ನು ಯಂತ್ರ ರೂಪದಲ್ಲಿ ದಿಗ್ಬಂ’ಧನ ಮಾಡಿದ ಅಪರೂಪದ ದೇವಾಲಯ. ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಆಂಜನೇಯ ಎಂದರೆ ಒಂದು ಶಕ್ತಿ ಈತನನ್ನು ನಂಬಿದರೆ ಬದುಕಿನ ಭವ-ಬಂಧಗಳು ದೂರವಾದಂತೆ ದೇಹಿ ಎಂದು ಮೊರೆಯಿಟ್ಟರೆ ಸಾಕು ಈ ಭಗವಂತ ನಮ್ಮನ್ನು ಪೊರೆಯುತ್ತಾರೆ. ಬನ್ನಿ ಈ ದಿನ ವ್ಯಾಸರಾಯರ ತಪೋಭೂಮಿಯಲ್ಲಿ ಸ್ಥಾಪನೆಯಾದ ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯ ಬಗ್ಗೆ ತಿಳಿಯೋಣ.
ಸಾವಿರಾರು ವರ್ಷಗಳಷ್ಟು ಪುರಾತನವಾದ ಈ ಆಂಜನೇಯ ಸ್ವಾಮಿಯ ದೇವಾಲಯವನ್ನು ಸಂಪೂರ್ಣವಾಗಿ ಬಂಡೆ ಕಲ್ಲುಗಳಿಂದ ಕಟ್ಟಲಾಗಿದ್ದು ಆಲಯದ ಗೋಡೆಗಳ ಹೊರಭಾಗವು ಕೇಸರಿ ಹಾಗೂ ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ ದೇಗುಲದ ಗರ್ಭಗುಡಿಯಲ್ಲಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು ಇಲ್ಲಿನ ದೇವರು ನಮಗೆ ಷಟ್ಕೋನದ ಒಳಗಡೆ ಕುಳಿತ ಭಂಗಿಯಲ್ಲಿ ದರ್ಶನವನ್ನು ನೀಡುತ್ತಾರೆ ಈ ಕ್ಷೇತ್ರಕ್ಕೆ ಬಂದು ಪವನಸುತನಿಗೆ ಜೇನು ತುಪ್ಪದ ಅಭಿಷೇಕ ಸೇವೆಯನ್ನು ಮಾಡಿಸುತ್ತೇವೆ ಎಂದು ಅರಕೆಯನ್ನು ಹೊತ್ತುಕೊಂಡರೆ ನಮ್ಮ ಎಲ್ಲಾ ಸಂಕಷ್ಟಗಳು ದೂರವಾಗಿ ನಮ್ಮ ಕೋರಿಕೆಗಳೆಲ್ಲವೂ ಶೀಘ್ರವಾಗಿ ಪೂರ್ಣವಾಗುತ್ತದೆ ಎನ್ನುವುದು ಇಲ್ಲಿಗೆ ಭೇಟಿ ನೀಡುವ ಭಕ್ತರ ಅಭಿಪ್ರಾಯವಾಗಿದೆ.
ಈ ಚ ಕ್ಷೇತ್ರದಲ್ಲಿಯೇ ವ್ಯಾಸರಾಯರು ಹನುಮಂತನನ್ನು ಯಂತ್ರ ರೂಪದಲ್ಲಿ ದಿಗ್ಬಂದನ ಮಾಡಿದ್ದರು ಎಂದು ಹೇಳಲಾಗುತ್ತದೆ ಹಾಗಾಗಿ ಇಲ್ಲಿನ ಆಂಜನೇಯ ಸ್ವಾಮಿಯನ್ನು ಯಂತ್ರೋಧಾರಕ ಎಂದು ಕರೆಯಲಾಗುತ್ತಿತ್ತು ವ್ಯಾಸರಾಯರು ಈ ರೀತಿ ಹನುಮಂತ ದೇವರನ್ನು ಬಂಧಿಸಿರುವುದರ ಹಿಂದೆ ಒಂದು ಕಾರಣವೂ ಕೂಡ ಇದೆ.
ಒಮ್ಮೆ ವ್ಯಾಸರಾಯರು ಕಲ್ಲಿನ ಮೇಲೆ ಇದ್ದಿಲಿನಿಂದ ಆಂಜನೇಯ ಸ್ವಾಮಿಯ ಚಿತ್ರಣವನ್ನು ಬಿಡಿಸಿ ಮನೆಗೆ ಹೋದರಂತೆ ಆದರೆ ಮರುದಿನ ಬಂದಾಗ ಬಂಡೆಕಲ್ಲಿನ ಮೇಲೆ ಹನುಮಂತ ದೇವರ ಚಿತ್ರ ಕಾಣಿಸದಿದ್ದಾಗ ಮತ್ತೊಮ್ಮೆ ಚಿತ್ರ ಬಿಡಿಸಿದ್ದರು. ಅವರು ಎಷ್ಟೇ ಬಾರಿ ಆಂಜನೇಯಸ್ವಾಮಿಯ ಚಿತ್ರವನ್ನು ಬಿಡಿಸಿದ್ದರು ಕೂಡ ಅದು ಮಾರನೇ ದಿನ ಬಂದು ನೋಡಿದಾಗ ಕಣ್ಮರೆಯಾಗುತ್ತಿತ್ತಂತೆ.
ಇದೇ ರೀತಿ ಒಟ್ಟು ಹನ್ನೆರಡು ಬಾರಿ ಈ ಘಟನೆ ಪುನರಾವರ್ತನೆ ಆದಮೇಲೆ ವ್ಯಾಸರಾಯರು ಒಂದು ದೃಢವಾದ ತೀರ್ಮಾನಕ್ಕೆ ಬಂದು ಬಂಡೆಕಲ್ಲಿನ ಮೇಲೆ ಷಟ್ಕೋನವನ್ನು ಬರೆದು ಮಧ್ಯದಲ್ಲಿ ಆಂಜನೇಯಸ್ವಾಮಿಯ ಚಿತ್ರವನ್ನು ಬಿಡಿಸಿ ಬೀಜಾಕ್ಷರಿ ಮಂತ್ರಗಳನ್ನು ಷಟ್ಕೋನದ ಸುತ್ತಲು ಬರೆದು ಮುಖ್ಯಪ್ರಾಣ ಆಂಜನೇಯನನ್ನು ಈ ಷಟ್ಕೋನದ ಒಳಗಡೆ ತಮ್ಮ ತಪಸ್ಸಿನ ಶಕ್ತಿಯಿಂದ ಬಂದಿಸಿದ್ದರಂತೆ.
ನಂತರ ಹನುಮಂತ ದೇವರು ವ್ಯಾಸರಾಯರ ಭಕ್ತಿಗೆ ಮೆಚ್ಚಿ ಇನ್ನು ಮುಂದೆ ನಾನು ಇಲ್ಲಿಯೇ ನೆಲೆಸುತ್ತೇನೆ ಎಂದು ಹೇಳಿದರ ಫಲವಾಗಿ ಈ ಕ್ಷೇತ್ರದಲ್ಲಿ ಹನುಮಂತ ದೇವರು ಯಂತ್ರೋಧಾರಕ ಪ್ರಾಣ ದೇವರು ಎನ್ನುವ ಹೆಸರಿನಿಂದ ಭಕ್ತಜನರನ್ನು ಆಶೀರ್ವದಿಸುತ್ತಿದ್ದಾರೆ ಎಂದು ಇಲ್ಲಿನ ಸ್ಥಳ ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಇನ್ನು ಪ್ರತಿವರ್ಷ ಮಾರ್ಗಶಿರ ಶುದ್ಧ ತ್ರಯೋದಶಿಯಂದು ಇಲ್ಲಿ ಹನುಮನ ವೃತವನ್ನು ಆಚರಿಸಲಾಗುತ್ತದೆ ಆ ಸಮಯದಲ್ಲಿ ಅರಿಶಿನ ಬಣ್ಣದ ದಾರವನ್ನು ಮಂತ್ರಿಸಿಡಲಾಗುತ್ತದೆ.
ಇಲ್ಲಿ ನೀಡುವ ಹನುಮಾನ್ ವ್ರತದ ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ ಎಂದು ಹೇಳಲಾಗುತ್ತದೆ ಹೀಗಾಗಿ ನಿತ್ಯ ನೂರಾರು ಮಂದಿ ಇಲ್ಲಿಗೆ ಭೇಟಿ ನೀಡಿ ಹನುಮಾನ್ ವ್ರತದ ದಾರವನ್ನು ಪಡೆದು ತಮ್ಮ ಸಂಕಷ್ಟಗಳನ್ನು ನೀಗಿಸು ಎಂದು ದೇವರ ಬಳಿ ಕೇಳಿಕೊಳ್ಳುತ್ತಾರೆ.
ಇದಿಷ್ಟು ಸಂಗತಿಗಳು ಮಾತ್ರವಲ್ಲದೆ ಪುರಂದರದಾಸರ ಮಗ ಮಧ್ವಪತಿ ವಿತಲರು ಈ ಯಂತ್ರೋದ್ಧಾರಕ ಹನುಮಂತ ದೇವರಿಗೆ ಪ್ರತಿನಿತ್ಯ ಊಟವನ್ನು ಮಾಡಿಸುತ್ತಿದ್ದರು ಎಂದು ಹೇಳಲಾಗುತ್ತದೆ ವ್ಯಾಸರಾಯರು ರಚಿಸಿದ ಯಂತ್ರೋಧಾರಕ ಆಂಜನೇಯನ ಶ್ಲೋಕವನ್ನು ಯಾರು ಪಠಿಸುತ್ತಾರೋ ಅವರಿಗೆ ಶತ್ರು ಬಾದೆ ದೂರವಾಗಿ ಅವರ ಮನೆಯಲ್ಲಿ ಹನುಮಂತ ದೇವರು ಸದಾ ನೆಲೆಸಿರುತ್ತಾರೆ ಎನ್ನುವುದು ಈ ಶ್ಲೋಕವನ್ನು ಪಠಿಸುವವರ ಅಚಲವಾದ ನಂಬಿಕೆಯಾಗಿದೆ.
ವ್ಯಾಸರಾಯರು ತಮ್ಮ ಶ್ಲೋಕದಲ್ಲಿ ಆಂಜನೇಯ ಸ್ವಾಮಿಯನ್ನು : “ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್ ! ಪೀನ ವೃತ್ತ ಮಹಾಬಾಹೂಂ ಸರ್ವ ಶತ್ರು ನಿವಾರಣಮ್ ” ಎಂದು ಉಲ್ಲೇಖಿಸಿದ್ದಾರೆ ಅತ್ಯಂತ ಶಕ್ತಿಶಾಲಿ ಆದ ಈ ಆಂಜನೇಯ ಸ್ವಾಮಿಯನ್ನು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದರ್ಶನ ಮಾಡಬಹುದಾಗಿದೆ. ಈ ಬೆಂಗಳೂರಿನಿಂದ 343 ಕಿಲೋಮೀಟರ್ ಹುಬ್ಬಳ್ಳಿ ಇಂದ 104 ಕಿಲೋಮೀಟರ್ ಶಿವಮೊಗ್ಗದಿಂದ 250 ಕಿಲೋ ಮೀಟರ್ ಬಳ್ಳಾರಿಯಿಂದ 61 ಕಿಲೋಮೀಟರ್, ಹೊಸಪೇಟೆಯಿಂದ ಕೇವಲ 13 ಕಿಲೋಮೀಟರ್ ದೂರದಲ್ಲಿದೆ.
ಬಳ್ಳಾರಿಗೆ ರಾಜ್ಯದ ಹಲವಾರು ಭಾಗಗಳಿಂದ ಕರ್ನಾಟಕ ಬಸ್ ಸಾರಿಗೆ ಸೌಲಭ್ಯ ಇದ್ದು ಬಳ್ಳಾರಿ ಇಂದ ಹೊಸಪೇಟೆಗೆ ತಲುಪಿ ಅಲ್ಲಿಂದ ನೇರವಾಗಿ ಟ್ಯಾಕ್ಸಿ ಮಾಡಿಕೊಂಡು ಈ ಕ್ಷೇತ್ರಕ್ಕೆ ಸುಲಭವಾಗಿ ತಲುಪಬಹುದು ಈ ದೇಗುಲಕ್ಕೆ ಹೊಸಪೇಟೆಯು ಸಮೀಪದ ರೈಲ್ವೆ ನಿಲ್ದಾಣವಾಗಿದೆ ಸಾಧ್ಯವಾದರೆ ನೀವೂ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಯಂತ್ರೋದ್ಧಾರಕ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾಗಿ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.