ನೂರು ಹತಾಶೆಗಳ ನಡುವಿನ ಭರವಸೆಯ ಬೆಳಕಿಗೆ 8 ವರ್ಷದ ಸಾಧನೆಯ ಅಭಿನಂದನೆಗಳು.

0
2420

ಒಂದು ಸಣ್ಣ ಪೆಪ್ಪರ್ಮಿಂಟ್ ತಿಂದರೂ ಪ್ಲಾಸ್ಚಿಕ್ ಚೀಟಿಯನ್ನು ನೆಲಕ್ಕೆಸೆಯುವಾಗ ಬೇಡವೆಂದನಿಸಿ ಜೇಬಿನಲ್ಲಿಟ್ಟಕೊಂಡು ಮನೆಗೆ ಬಂದು ಕಸದಬುಟ್ಚಿಗೆ ಎಸೆಯುವಷ್ಟು ಬೆಳೆದ ಅಂತರ್ಪ್ರಜ್ಞೆಗೆ.

ರಸ್ತೆಬದಿಯಲ್ಲಿ ಒಂದು ಕೇಜಿ ಸಪೋಟಾ ಹಣ್ಣು ಕೊಂಡು ನಲವತ್ತು ರೂಪಾಯಿಯ ವಹಿವಾಟಿಗೆ ಐನೂರರ ನೋಟು ಹಿಡಿದು ಚಿಲ್ಲರೆಗಾಗಿ ಅಲೆಯುತ್ತಿದ್ದಾಗ, ಹಣ್ಣು ಮಾರುವವ Paytm ಮಾಡಿ ಎಂದು QR Code Scanner ಹಿಡಿಯುವಷ್ಟು ಬಂದ ಆಧುನಿಕತೆಗೆ.

ಮೂಗು ಮುಚ್ಚಿಕೊಂಡು, ಹೀಕರಿಸಿಕೊಂಡು, ಮನೆಯಿಂದ ಒಯ್ದ tissue paperನಲ್ಲಿ ಸೀಟುಗಳನ್ನು clean ಮಾಡಿ, ಕಷ್ಟಪಟ್ಟು ಮುಗಿಸುತ್ತಿದ್ದ ರೈಲು ಪ್ರಯಾಣ ದಿನಗಳು ದೂರವಾಗಿ, ಶುಚಿಯಾದ ನಿಲ್ದಾಣ, ಶುಭ್ರ ಆಸನಗಳು, ಸ್ವಚ್ಛ ಶೌಚಾಲಯಗಳ ರೈಲಿನಲ್ಲಿ ರಾಜಾರೋಷವಾಗಿ ನೆಮ್ಮದಿಯಿಂದ ಪ್ರಯಾಣ ಮಾಡುವ ಸೌಲಭ್ಯಕೆ.

ಹೊರದೇಶಗಳಲ್ಲಿ ಸುತ್ತುವಾಗ, ಅಲ್ಲಿನವರು ಸೂರ್ಯ ನಮಸ್ಕಾರ, ಸರ್ವಾಂಗಾಸನ, ಭುಜಂಗಾಸನವೆಂದು ಯೋಗದ ವಿಷಯವಾಗಿ, ಭಾರತವನ್ನು ಕುರಿತು ಮಾತನಾಡುವ ಹೆಮ್ಮೆಯ ಕ್ಷಣಗಳಿಗೆ ಪಕ್ಕದ ಪಾಕಿಸ್ತಾನ, ಶ್ರೀಲಂಕಾ, ನೇಪಾಳದಲ್ಲಿ ಹದಗೆಟ್ಟ ಪರಿಸ್ಥಿತಿ ಇದ್ದರೂ ನಾವು ನಮ್ಮ ದೇಶದಲ್ಲಿ ನೆಮ್ಮದಿಯಾಗಿದ್ದು ನಮ್ಮ ಕರ್ಮಯೋಗಿ ಪ್ರಧಾನಿಗೆ ಬಾಯಿಗೆ ಬಂದಂತೆಬಯ್ಯುವ ಈ luxuryಗೆ ಪ್ರಪಂಚದ ಮುಂದುವರೆದ ದೇಶಗಳೂ ಒಮ್ಮೆ ಭಾರತದತ್ತ ಮುಖ ಮಾಡಿ India’s opinion matters ಎನ್ನುವ ಈ ದಿನಗಳಿಗೆ.

ಯುದ್ಧದ ಕಾರ್ಮೋಡದ ನಡುವೆಯೂ ಭರವಸೆಯ ಬದುಕು ಕಾಣುತ್ತಿರುವ ನಮ್ಮ ಈ ಅದೃಷ್ಟಕ್ಕೆ. ಕೊರೊನಾ ಮಹಾಮಾರಿಯ ವಿರುದ್ಧ ಕೋಟ್ಯಾಂತರ ಭಾರತೀಯರಿಗೆ ಉಚಿತ ಚುಚ್ಚುಮದ್ದಿನ ಕವಚ ನೀಡಿದ ಹೆಗ್ಗಳಿಕೆಗೆ. ಸಾವರ್ಕರ್, ಸರ್ದಾರ್ ಪಟೇಲ್, ಶಾಸ್ತ್ರೀಜಿ, ಅಂಬೇಡ್ಕರ್, ಶಿವಾಜಿ ಮುಂತಾದ ಈವರೆಗೂ ಅನಾಮಧೇಯರಾಗಿದ್ದ ದೇಶಭಕ್ತರ ಜೀವನದ ಯಶೋಗಾಥೆಯ ಅನುರಣನೆಯ ಈ ಕಾಲಘಟ್ಟಕ್ಕೆ.

ಹೀನ, ದೀನ, ಕಡೆಗಣಿಸಿದ ಮಂದಿಯ ನಡುವೆ ಎದ್ದು ಬಂದ ಸಾಧಕರು ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸಿದಾಗ ದೇಶಕ್ಕೆ ದೇಶವೇ ನೀಡಿದ ಚಪ್ಪಾಳೆಯ ಕರತಾಡನದ ಸಂಭ್ರಮಕ್ಕೆ. ಕೇದಾರ, ಕಾಶಿ, ಅಯೋಧ್ಯೆ, ಮಥುರೆಯಲ್ಲಿ ಮೊಳಗುವ ನಿರ್ಭೀತ ಘಂಟಾನಾದಕ್ಕೆ ಒಂದು ಕ್ಷಣವೂ ದಣಿವಿರದೆ ಸದಾ “ರಾಷ್ಟ್ರದೇವೋಭವ” ಎಂದು ನಂಬಿ ನಡೆಯುತ್ತಿರುವ ಸಿಂಹಗಾಂಭೀರ್ಯಕ್ಕೆ.

ನಮ್ಮಲ್ಲಿ ಮೊಳೆತ ದೇಶಾಭಿಮಾನದ ಕಿಚ್ಚಿಗೆ. ಒಂದು ಕ್ಷಣ ಎದೆಗುಂದಿದಾಗ ಸ್ಫೂರ್ತಿಯಾಗಿ ಕಾಣುವ ಮೇರುಸದೃಷ ವ್ಯಕ್ತಿಯ ರಾಷ್ಟ್ರಸೇವೆಯ ನಿರಂತರ ಕೈಂಕರ್ಯಕ್ಕೆ ಎಂಟು ವರ್ಷಗಳು. ಮಿಂಚುಗಳ ನಡುವಿನ ದೇದೀಪ್ಯಮಾನ ಸೂರ್ಯನಿಗೆ, ನೂರು ಹತಾಶೆಗಳ ನಡುವಿನ ಭರವಸೆಯ ಬೆಳಕಿಗೆ, ಮಾತಿನ ರಣಭೇರಿ ನಗಾರಿಯ ಗದ್ದಲದ ನಡುವಿನ ಮೌನಕ್ಕೆ, ನರಿ, ತೋಳ,ಗೂಬೆ, ಗಿಡುಗಗಳ ನಡುವಿನ ರಾಜಸಿಂಹನಿಗೆ 8 ವರ್ಷದ ಸಾಧನೆಯ ಅಭಿನಂದನೆಗಳು.

ಇಷ್ಟವಾಗದಿರುವುದು ನಾಯಿ ನರಿ ತೋಳ ಗೂಬೆಗಳಿಗೆ ಮಾತ್ರ. ಇಂತಹ ಬರಹಗಳು ಖಂಡಿತ ಸಮಾಜಕ್ಕೆ, ಮಾನವಕುಲಕ್ಕೆ ಅತ್ಯವಶ್ಯಕ.

LEAVE A REPLY

Please enter your comment!
Please enter your name here