ಶನಿಯ ಅನುಗ್ರಹದಿಂದ ನವೆಂಬರ್ ವರೆಗೆ ಈ 5 ರಾಶಿಗೆ ಇವರ ಅದೃಷವೆ ಬದಲಾಗುತ್ತೆ.

0
2938

ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಜೂನ್ ಇಪ್ಪತ್ತೊಂಬತ್ತರ ಮಧ್ಯರಾತ್ರಿಯಲ್ಲಿ ಹಿಮ್ಮೆಟ್ಟುತ್ತಾನೆ ಮತ್ತು ನವೆಂಬರ್ ವರೆಗೆ ಇದೇ ಸ್ಥಿತಿಯಲ್ಲಿ ಇರುತ್ತಾನೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಮುಂಬರುವ ಸಮಯವು ಈ ಐದು ರಾಶಿಗಳಿಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದವಾಗಲಿದೆ. ಹಾಗಾದರೆ ಶನಿಯು ಮಂಗಳಕರ ದೃಷ್ಟಿಯನ್ನು ಈ ಎಲ್ಲಾ ರಾಶಿಗಳ ಮೇಲೆ ಬೀರುತ್ತದೆ.

ಆ ಅದೃಷ್ಟವಂತ ರಾಶಿಗಳು ಯಾವುವು ಅಂತ ಹೇಳಿ ನಾವು ನಿಮಗೆ ತಿಳಿಸಿಕೊಡ್ತೀವಿ. ಹೌದು, ಮೊದಲನೇ ಮೇಷ ರಾಶಿ ಶನಿಯ ಈ ಒಂದು ಸಂಚಾರದಿಂದ ನಿಮ್ಮ ಧೈರ್ಯ, ಶೌರ್ಯ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ. ನಿಮ್ಮ ಆದಾಯವನ್ನು ಹೆಚ್ಚಿಸುವ ಮತ್ತು ನಿಮ್ಮ ಯೋಜನೆಗಳು ಯಶಸ್ವಿಯಾಗುತ್ತವೆ.

ಆದಾಯ ಹೆಚ್ಚಳದಿಂದ ಜೀವನ ಮಟ್ಟ ಸುಧಾರಿಸುತ್ತದೆ. ವ್ಯವಹಾರದಲ್ಲಿ ಲಾಭವನ್ನು ನೀವು ಕಾಣುತ್ತೀರಿ ಬಂದಿರುವಂತಹ ಲಾಭಲ್ಲಿ ನಿಮ್ಮ ಯೋಜನೆಯನ್ನು ವಿಸ್ತಾರ ಮಾಡುತ್ತೀರಿ ಹಾಗೂ ನಿಮ್ಮದೇ ಆದಂತಹ ಸ್ವಂತ ಮನೆ ಹಾಗೂ ಸ್ವಂತ ಕಾರನ್ನು ಖರೀದಿ ಮಾಡುತ್ತೀರಿ. ಇನ್ನು ಕಟಕ ರಾಶಿ ನಿಮ್ಮ ಮಾನಸಿಕ ಚಂಚಲತೆ ಕಡಿಮೆಯಾಗುವ ಸಾಧ್ಯತೆ ಇದೆ ಮತ್ತು ಇದು ನಿಮ್ಮ ಕೆಲಸದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.

ವ್ಯಾಪಾರ ಮತ್ತು ವ್ಯವಹಾರದಲ್ಲಿ ಉತ್ತಮ ಲಾಭಗಳು ಆಗಲಿದೆ ಮತ್ತು ನಿಮಗೆ ಹಣದ ಒಳಹರಿವು ಹೆಚ್ಚಾಗುವ ಸಾಧ್ಯತೆಗಳು ಇದ್ದೇ ಹಾಗೂ ಕುಟುಂಬದ ಜೀವನ ಸುಖಮಯವಾಗಿ ಇರುತ್ತದೆ. ಇನ್ನು ಮೂರನೆಯ ಅದೃಷ್ಟವಂತ ರಾಶಿ ಅಂದ್ರೆ ಸಿಂಹ ರಾಶಿ ವ್ಯಾಪಾರದ ಪ್ರವಾಸ ಸಾಧ್ಯತೆಗಳಿವೆ.

ಅದು ಪ್ರಯೋಜನಕಾರಿಯಾಗಲಿದೆ ನಿಮಗೆ. ಇನ್ನು ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ಪಡೆಯುವರು. ಉನ್ನತ ಶಿಕ್ಷಣಕ್ಕಾಗಿ ನೀವು ಉತ್ತಮ ಸಂಸ್ಥೆಯಲ್ಲಿ ಪ್ರವೇಶ ಪಡೆಯಬಹುದು. ಇನ್ನು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಅಂತಾನೇ ಹೇಳಬಹುದು.

ಇದರಿಂದ ಅತ್ಯಂತ ಲಾಭ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಆಡಳಿತ ಮತ್ತು ಅಧಿಕಾರದಲ್ಲಿ ನಿಮ್ಮ ಭಾಗವಹಿಸುವಿಕೆ ಹೆಚ್ಚಾಗುತ್ತದೆ. ಇನ್ನು ನಾಲ್ಕನೇ ಅದೃಷ್ಟವಂತ ರಾಶಿ ಧನು ರಾಶಿ ಜೀವನದಲ್ಲಿ ಆರ್ಥಿಕ ಪ್ರಗತಿಯ ಸಾಧ್ಯತೆಗಳು ತುಂಬಾನೇ ಇದೆ.

ಹಣದ ಹರಿವು ಹೆಚ್ಚಾಗುತ್ತದೆ. ಜೀವನಶೈಲಿ ಬದಲಾಗುತ್ತದೆ. ಕುಟುಂಬ ಸಂತೋಷ ಹೆಚ್ಚಾಗುತ್ತದೆ. ಹೊಸ ಕೆಲಸ ಅಥವಾ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಸಂಬಂಧಿಕರ ಬೆಂಬಲ ಸಿಗಲಿದೆ ಹಾಗೂ ದೊಡ್ಡ ಉದ್ಯಮಿಗಳು ಮತ್ತು ಉತ್ತಮ ವ್ಯಾಪಾರವನ್ನು ನೀವು ಪಡೆಯುತ್ತೀರಿ. ಹಾಗೂ ಕೊನೆಯ ರಾಶಿ ಯಾವುದು ಎಂದರೆ ಕುಂಭ ರಾಶಿ.

ಹೌದು, ಈ ರಾಶಿಯಲ್ಲೂ ಕೂಡ ನೀವು ಅಂದುಕೊಂಡಂತಹ ಕೆಲಸಗಳು ಎಲ್ಲವೂ ಕೂಡ ಯತ್ನ ಪ್ರಕಾರ ನಡೆಯಲು ಸಾಧ್ಯವಾಗುತ್ತದೆ. ಈ ಮಾಹಿತಿ ಇಷ್ಟವಾಗಿದ್ದಾರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ಮತ್ತಷ್ಟು ಇಂತಹ ಉಪಯುಕ್ತ ಮಾಹಿತಿಗಳು ನಮ್ಮ ಪುಟದಲ್ಲಿ ಲಭ್ಯವಿದೆ ಅದನ್ನೂ ಕೂಡ ಒಮ್ಮೆ ಓದಿ ನೋಡಿ.

LEAVE A REPLY

Please enter your comment!
Please enter your name here