ಈ ಮಂತ್ರ ಪಠಿಸಿದರೆ ಹಣದ ಸಮಸ್ಯೆ ಎಂದಿಗೂ ಬರಲ್ಲ. ಆದರೆ ಅದಕ್ಕಿಂತ ಮೊದಲು ಈ ಮಂತ್ರದ ಶಕ್ತಿ ಎಂಥದ್ದು ಹಾಗೂ ಈ ಮಂತ್ರವನ್ನು ಯಾವಾಗ ಹೇಗೆ ಹೇಳಬೇಕು ಇದೆಲ್ಲವನ್ನೂ ನೀವು ತಿಳಿಯಲೇ ಬೇಕು. ನಮ್ಮಲ್ಲಿ ಪ್ರತಿ ವಾರ ಪ್ರತಿಯೊಂದು ದೇವರನ್ನು ನಾವು ಪೂಜೆ ಮಾಡುತ್ತೇವೆ. ಒಂದು ವೇಳೆ ನಿಮಗೂ ಕೂಡ ಹಣದ ಸಮಸ್ಯೆ ಕಾಡುತ್ತಿದ್ದರೆ ಈ ಮಾಹಿತಿ ನಿಮಗೆ ತುಂಬಾನೇ ಉಪಯೋಗವಾಗುತ್ತದೆ.
ಶುಕ್ರವಾರದಂದು ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಸಂಪತ್ತು ಮತ್ತು ಅದೃಷ್ಟವನ್ನು ಹೆಚ್ಚಿಸಲು ಬಹಳ ಸಹಾಯ ಮಾಡುತ್ತದೆ. ಹಾಗಾದ್ರೆ ಶುಕ್ರವಾರ ಲಕ್ಷ್ಮಿಯನ್ನು ಈ ಮಂತ್ರದಂತೆ ಪಠಿಸಿ ನೋಡಿ. ನಿಮ್ಮಲ್ಲಿ ಕಾಣುವಂತಹ ಬದಲಾವಣೆ ನಿಮ್ಮನ್ನು ಬೇರೆ ಹಂತಕ್ಕೆ ಕರೆದೊಯ್ಯುತ್ತದೆ. ಹಾಗಾದ್ರೆ ಆ ಮಂತ್ರ ಯಾವುದು ಏನು ಎಂಬುದನ್ನು ನಾವು ನಿಮಗೆ ಇದುದಲ್ಲಿ ತಿಳಿಸಿಕೊಡ್ತಿವಿ. ಹಿಂದೂ ಧರ್ಮದಲ್ಲಿ ಲಕ್ಷ್ಮಿಯನ್ನು ಸಂಪತ್ತಿನ ಅಧಿ ದೇವತೆ ಎಂದು ಕರೆಯಲಾಗುತ್ತದೆ.
ಲಕ್ಷ್ಮಿಗೆ ಪೂಜೆ ಮಾಡಲು ಶುಕ್ರವಾರ ದಿನದಂದು ಮೀಸಲಾಗಿಟ್ಟು ಪೂಜೆ ಕೂಡ ಮಾಡಲಾಗುತ್ತದೆ. ಹೌದು, ತಾಯಿ ಲಕ್ಷ್ಮಿ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಉಳಿಯುವುದಿಲ್ಲ. ಇದರಿಂದಾಗಿ ಜೀವನದಲ್ಲಿ ಸಂತೋಷ ದುಃಖದ ಸಂಯೋಜನೆಗಳು ಇರುತ್ತವೆ. ಹಾಗಾಗಿ ಕೆಲವೊಮ್ಮೆ ನಿಮ್ಮಲ್ಲಿ ಬಹಳ ಸಮಸ್ಯೆ ಕಾಣಲು ಶುರು ಮಾಡಿದರೆ ಈ ಪೂಜೆ ಮಾಡಿ ನೋಡಿ. ನೀವು ಹೊರ ಬರುವಂತಹ ಸಾಧ್ಯತೆಗಳು ಬಹಳ ಇರುತ್ತದೆ.
ಹೌದು, ಪೂಜೆ ಮಾಡೋದ್ರ ಜೊತೆಗೆ ಈ ಮಂತ್ರವನ್ನು ಹೇಳಬೇಕು. ಇದೇ ಮುಖ್ಯವಾಗಿರುತ್ತದೆ. ಇದರಿಂದ ನೀವು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರೆ ಅದರಿಂದ ಮುಕ್ತಿ ಹೊಂದಲು ಬಯಸಿದರೆ ಕನಿಷ್ಠ 16 ಶುಕ್ರವಾರಗಳ ಕಾಲ ಲಕ್ಷ್ಮಿ ದೇವಿಯನ್ನು ಪೂಜಿಸಿ ವ್ರತವನ್ನು ತೆಗೆದುಕೊಳ್ಳಬೇಕು.
ಅಲ್ಲದೆ ಶುಕ್ರವಾರದಂದು ಸ್ನಾನ ಮತ್ತು ಧ್ಯಾನದ ನಂತರ ಲಕ್ಷ್ಮಿ ದೇವಿಯನ್ನು ವಿದ್ಯುಕ್ತವಾಗಿ ಪೂಜಿಸಿ. ಇದಲ್ಲದೆ ಪೂಜೆಯ ಸಮಯದಲ್ಲಿ ಖಂಡಿತವಾಗಿಯು ಈ ಮಂತ್ರಗಳನ್ನು ಪಠಿಸುವುದರಿಂದ ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಕೂಡ ನಿವಾರಣೆ ಆಗುತ್ತದೆ. ಹೌದು, ಆ ಒಂದು ನೀವು ಪೂಜೆ ಮಾಡುವಾಗ ಈ ಒಂದು ಮಂತ್ರವನ್ನು ಹೇಳಬೇಕು.
ನಿಮಗೆ ಹೇಳೋಕೆ ಬರೋದಿಲ್ಲ ಅಂದ್ರೆ ಇದನ್ನು ಬರೆದಿಟ್ಟುಕೊಳ್ಳಬಹುದು. ಒಂದು ಮಂತ್ರ ಹೀಗಿದೆ ಯಾ ರ’ಕ್ತಾಂಬುಜವಾಸಿನಿ ವಿಲಾಸಿನಿ ಚಂಡಾಂಶು ತೇಜಸ್ವಿನೀ। ಯಾ ರ’ಕ್ತಾ ರುಧಿರಾಂಬರ ಹರಿಸಖೀ ಯಾ ಶ್ರೀ ಮನೋಲ್ಲಾದಿನೀ|| ಯಾ ರತ್ನಾಕರಮಂಥನಾತ್ಪಗಟಿತಾ ವಿಷ್ಟೋಸ್ವಯಾ ಗೇಹಿನೀ। ಸಾ ಮಾಂ ಪಾತು ಮನೋರಮಾ ಭಗವತೀ ಲಕ್ಷ್ಮೀಶ್ಚ ಪದ್ಮಾವತೀ॥ ಈ ಮಾಹಿತಿ ಇಷ್ಟವಾಗಿದ್ದಾರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯ ತಿಳಿಸಿ. ಮತ್ತಷ್ಟು ಇಂತಹ ಉಪಯುಕ್ತ ಮಾಹಿತಿಗಳು ನಮ್ಮ ಪುಟದಲ್ಲಿ ಲಭ್ಯವಿದೆ ಅದನ್ನೂ ಕೂಡ ಒಮ್ಮೆ ಓದಿ ನೋಡಿ.