ಪ್ರತಿಯೊಬ್ಬರು ಮದುವೆ ಮಾಡಿಕೊಳ್ಳಲೇಬೇಕು ಎನ್ನುವುದಕ್ಕೆ ಮೂರು ಕಾರಣಗಳು.. ನೀವು ಅಂದುಕೊಳ್ಳುವ ಕಾರಣಗಳಂತೂ ಅಲ್ಲ.

0
7828

ಮದುವೆ ಮೂರಕ್ಷರ, ಬಾಂಧವ್ಯ ಮೂರಕ್ಷರ, ಮಡದಿ ಮೂರಕ್ಷರ ಹಾಗೆ ಜೀವನವು ಮೂರಕ್ಷರ, ಎರಡು ದೇಹ ಮಾತ್ರವಲ್ಲದೆ ಮನಸ್ಸನ್ನು ಬೆರೆಯುವಂತೆ ಮಾಡುವ ಕಾರ್ಯವೇ ವಿವಾಹ, ಸ್ತ್ರೀ ಮತ್ತು ಪುರುಷ ರನ್ನು ದಂಪತಿಗಳಾಗಿ ಬೆಸೆಯುವ ಅತಿ ಮುಖ್ಯವಾದ ಉದ್ದೇಶವನ್ನು ಮದುವೆ ಹೊಂದಿರುತ್ತದೆ, ಇನ್ನು ಮದುವೆಯಲ್ಲಿ ಪ್ರೀತಿಸಿ ಮದುವೆ ಆಗುವುದು ಅಥವಾ ಮನೆಯವರು ನೋಡಿದ ಹುಡುಗ ಅಥವಾ ಹುಡುಗಿಯನ್ನು ಮದುವೆಯಾಗುವುದು ಎಂಬ ಎರಡು ವಿಧಗಳು ನಾವು ಸಾಮಾನ್ಯವಾಗಿ ನೋಡುತ್ತೇವೆ, ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಸುವ ಕಾಂಟ್ರಾಕ್ಟ್ ಕಂಪನಿಗಳು ಹುಟ್ಟಿಕೊಂಡಿವೆ, ಅವು ನೀಡುವ ಮಾಹಿತಿಗಳು ಅದೆಷ್ಟರ ಮಟ್ಟಿಗೆ ಸರಿ ಇರುತ್ತದೆ ಎಂಬುದನ್ನು ನಾವು ಹೇಗೆ ನಂಬಬೇಕು ನಿಜವಾಗಿಯೂ ಗೊತ್ತಿಲ್ಲ.

ನಮ್ಮ ಜೀವನಶೈಲಿಗಳು ಸಂಪೂರ್ಣವಾಗಿ ಇಂದು ಬದಲಾಗಿದೆ, ದಾಂಪತ್ಯ ಜೀವನಕ್ಕೆ ನಮ್ಮ ಹಿಂದಿನ ಕಾಲದಲ್ಲಿ ಹಿರಿಯರು ನೀಡುತ್ತಿದ್ದ ಪ್ರಾಮುಖ್ಯತೆಯನ್ನು ನಾವು ಇಂದು ನೀಡುತ್ತಿಲ್ಲ, ನಮ್ಮ ಬದುಕನ್ನು ಕಟ್ಟಿಕೊಳ್ಳುವುದರಲ್ಲಿ ಜೀವನ ಮುಗಿಸಿ ಬಿಡುತ್ತೇವೆ, ಯಲ್ಲ ತಿಳಿಯುವಷ್ಟರಲ್ಲಿ ವಯಸ್ಸಾಗಿ ಮದುವೆಯ ಮೇಲೆ ಆಸಕ್ತಿ ಕಡಿಮೆಯಾಗಿ ಬಿಡುತ್ತದೆ, ಹಾಗಾದರೆ ಜೀವನಕ್ಕೆ ಮದುವೆ ಯಾಕೆ ಬೇಕು, ಮದುವೆ ಮಾಡಿಕೊಳ್ಳಲೇಬೇಕು ಎಂದು ನಮ್ಮ ಹಿರಿಯರು ಹೇಳಿರುವುದಕ್ಕೆ ಏನಾದರೂ ಪ್ರಮುಖ ಕಾರಣವಿದೆಯೇ, ಇವುಗಳ ಬಗ್ಗೆ ಎಂದು ಚರ್ಚಿಸೋಣ.

ನಿಮಗೆ ತಿಳಿದಿರಬಹುದು ಪ್ರತಿಯೊಬ್ಬನ ಜನನ ಮೂರು ಗುಣಗಳಿಂದ ಪ್ರಾರಂಭವಾಗುತ್ತದೆ, ಅದರಲ್ಲಿ ಮೊದಲನೆಯದು ಋಷಿಋಣ, ಎರಡನೆಯದು ದೇವಋಣ ಹಾಗೂ ಮೂರನೆಯದು ಪಿತೃಋಣ, ಹುಟ್ಟಿದ ಮನುಷ್ಯ ತನ್ನ ಜೀವಮಾನದಲ್ಲಿ ತೀರಿಸಲಿ ಬೇಕಾದ ಅತಿಮುಖ್ಯವಾದ ಋಣಗಳಿದು, ಈ ಜನ್ಮದಲ್ಲಿ ನೀವು ಈ ಮೂರು ಗುಣಗಳನ್ನು ತೀರಿಸದಿದ್ದರೆ ಮತ್ತೊಂದು ಜನುಮ ಎತ್ತಬೇಕಾಗುತ್ತದೆ, ಅದಕ್ಕಾಗಿಯೇ ಈ ಮೂರು ಋಣಗಳನ್ನು ತಿಳಿಸಬೇಕಾಗಿ ಹಾಗೂ ತೀರಿಸಿ ಋಣಮುಕ್ತ ರಾಗಿ ಇರಬೇಕೆಂದು ವೇದಾಧ್ಯನ ಹೇಳುತ್ತದೆ, ಅದರಲ್ಲೂ ಯಜ್ಞ ಮಾಡುವುದು ಸಂತಾನ ಪಡೆಯುವುದು ನೀವು ಮಾನವನು ಕಡ್ಡಾಯವಾಗಿ ಮಾಡಲೇಬೇಕಾದ ವಿದಿ ಎಂದು ವೇದ ಸಾರುತ್ತದೆ.

ಬ್ರಹ್ಮ ಚರ್ಚೆಯಲ್ಲಿ ಮಾಡಬೇಕಾದ ವೇದ ಧ್ಯಾನವನ್ನು ಮಾಡಿ ಬ್ರಹ್ಮಚರ್ಯ ಮೂಲಕ ಕೆಡಿಸುವ ಋಣವೇ ಋಷಿಋಣ, ಪುರಾಣಗಳ ಅಧ್ಯಯನ ಮಾಡಿ ಮುಂದಿನ ಪೀಳಿಗೆಗೂ ಇವುಗಳನ್ನು ಹೇಳಿಕೊಡುವ ಮೂಲಕ ಈ ಋಣವನ್ನು ತೀರಿಸಿಕೊಳ್ಳಬೇಕು.

ಜಗತ್ತಿನಲ್ಲಿ ಉಚಿತವಾಗಿ ದೊರೆಯುವ ನೀರು ಗಾಳಿ ಹಾಗೂ ಬೆಳಕು ಇವುಗಳನ್ನು ಸ್ವೀಕರಿಸುವಾಗ ಪ್ರಕೃತಿಗೆ ನಾವು ಆಭಾರಿಯಾಗಿರಬೇಕು, ಇವುಗಳನ್ನು ಪಡೆಯುತ್ತಿರುವ ನಾವು ದೇವತೆಗಳಿಗೆ ಕೃತಜ್ಞರಾಗಿರಬೇಕು, ಹಾಗೂ ಪೂಜೆ ಯಜ್ಞ ಗಳ ಮೂಲಕ ದೇವತೆಗಳನ್ನು ತೃಪ್ತಿಪಡಿಸಬೇಕು, ಈ ರೀತಿ ದೇವರು ನವನ್ನು ನಾವು ತೀರಿಸಿಕೊಳ್ಳಬಹುದು, ಮೊದಲೆಲ್ಲ ಕಾಲಕಾಲಕ್ಕೆ ಮಳೆ ಬೆಳೆಯಾಗಲು ಈ ಋಣವನ್ನು ತಪ್ಪದೆ ತೀರಿಸುತ್ತಿದ್ದರು.

ಮಾನವನಿಗೆ ಜನ್ಮ ನೀಡಿದ ಪೋಷಕರೇ ಮೊದಲ ದೇವರು, ಜನ್ಮ ನೀಡುವುದು ಮಾತ್ರವಲ್ಲದೆ ಬೆಳೆದು ಬುದ್ಧಿ ಬರುವವರೆಗೂ ನಮ್ಮನ್ನು ಪಾಲಿಸಿ ಪೋಷಣೆ ಮಾಡುವ ಪೋಷಕರಿಗೆ ನಾವು ಎಷ್ಟು ನಮನ ಸಲ್ಲಿಸಿದರು ಕಡಿಮೆಯೆ, ಈ ಋಣವನ್ನು ನಾವು ತೀರಿಸಲು ಮದುವೆಯಾಗಿ ಸಂತಾನವನ್ನು ಪಡೆದು ತೀರಿಸಿಕೊಳ್ಳಬಹುದು, ಪ್ರಮುಖವಾಗಿ ವಂಶವನ್ನು ಬೆಳೆಸಿ ಅವಿಚ್ಛಿನ್ನವಾಗಿ ಮುಂದುವರಿಸುವುದು, ಅಷ್ಟೇ ಅಲ್ಲದೆ ಪಿತೃ ದೇವತೆಗಳಿಗೆ ತರ್ಪಣ ಕ್ರಿಯೆಗಳನ್ನು ನಿರ್ವಹಿಸಿ ಯೋಗ್ಯರಾದ ಸಂತಾನವನ್ನು ಪಡೆಯುವ ಮೂಲಕ ಪಿತೃಋಣ ತೀರಿಸಿಕೊಳ್ಳಬಹುದು.

LEAVE A REPLY

Please enter your comment!
Please enter your name here