ಒಂದೆಲಗ ಸೊಪ್ಪಿನ ಆರೋಗ್ಯ ಉಪಯೋಗಳು ನಿಮಗೆ ಅಚ್ಚರಿ ಮೂಡಿಸುವಂತಿದೆ..!!

0
3920

ಒಂದೆಲಗ ಅಥವಾ ಬ್ರಾಹ್ಮಿ ಔಷಧಿಯಾಗಿಯೂ ಆಹಾರವಾಗಿಯೂ ಉಪಯೋಗಕ್ಕೆ ಬರುವ ಒಂದು ಸಸ್ಯ. ಹೆಸರೇ ಸೂಚಿಸುವಂತೆ ಒಂದೇ ಎಲೆಯಿಂದ ಕಂಗೊಳಿಸುತ್ತದೆ. ಇದು ನೆಲದಲ್ಲಿ ನೀರಿನ ಆಶ್ರಯವಿರುವಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ಕರಾವಳಿ ಪರಿಸರದಲ್ಲಿ ಭತ್ತದ ಗದ್ದೆಗಳ ಬದಿಯ ಜೌಗು ಪ್ರದೇಶದಲ್ಲಿ, ಅಡಿಕೆತೋಟಗಳಲ್ಲೂ ಹೇರಳವಾಗಿ ಬೆಳೆಯುತ್ತದೆ. ಕಾಂಡವು ನೆಲದ ಮೇಲೆ ಬಳ್ಳಿಯಂತೆ ಹರಡಿಕೊಂಡು ೩,೪ ಅಂಗುಲ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳು ಹಸಿರು ಬಣ್ಣದಿಂದ ಕೂಡಿ ದುಂಡಗಾಗಿರುತ್ತವೆ.

ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸುತ್ತಾರೆ. ಒಂದೆಲಗ ಸೇವನೆ ದೇಹಕ್ಕೆ, ಮನಸ್ಸಿಗೆ ತಂಪು ತರುವುದು ಮಾತ್ರವಲ್ಲದೆ ಸ್ಮರಣಶಕ್ತಿಯನ್ನೂ ವರ್ಧಿಸುತ್ತದೆ ಎಂಬ ನಂಬಿಕೆಯಿದೆ. ಇದು ನಿತ್ಯ ತಿಂದರೆ ಬುದ್ಧಿ ಚುರುಕಾಗುತ್ತದೆ. ಮಕ್ಕಳಿಗೆ ಬೆಳಗ್ಗೆ ಇದರ ಎರಡೆರಡು ಎಲೆಗಳನ್ನು ತಿನ್ನಲು ಕೊಡುವುದರಿಂದ ಮಕ್ಕಳ ಜ್ಞಾಪಕಶಕ್ತಿ ಹೆಚ್ಚುತ್ತದೆ. ದಿನಕ್ಕೆ 4 -5 ಎಲೆ ಸೇವಿಸುವುದರಿಂದ ಮಾತಿನ ಉಗ್ಗುವಿಕೆ ಇಲ್ಲವಾಗುವುದು.ಮಲ ಬದ್ದತೆಯಿಂದ ಬಳಲುವವರು ಒಂದೆಲಗದ ಸೊಪ್ಪಿನಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸುತ್ತಾರೆ.

ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2 ಎಲೆ ಒಂದೆಲಗವನ್ನು ಸೇವಿಸಿವುದರಿಂದ ಮಕ್ಕಳಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ, ಒಂದೆಲಗ ರೋಗ ನಿವಾರಕವು ಹೌದು, ಒಂದೆಲಗ ಸೊಪ್ಪನ್ನು ಚೆನ್ನಾಗಿ ಒಣಗಿಸಿ, ಪುಡಿಮಾಡಿ ಮಧುಮೇಹಿಗಳಿಗೆ ದಿನನಿತ್ಯ ನೀಡಿದರೆ ಸಕ್ಕರೆ ಕಾಯಿಲೆಯನ್ನೂ ನಿಯಂತ್ರಿಸಬಹುದು, ಒಂದೆಲಗ ಸೊಪ್ಪನ್ನು ಚೆನ್ನಾಗಿ ಅರೆದು ತಲೆಗೆ ಹಚ್ಚಿ ಎರಡು ಗಂಟೆಗಳ ಕಾಲ ನೆನೆದು ಸ್ನಾನ ಮಾಡಿದರೆ ತಲೆಹೊಟ್ಟು ಕಡಿಮೆಯಾಗುತ್ತದೆ, ಒಂದೆಲಗ ಸೊಪ್ಪಿನಿಂದ ಈ ಕೆಳಕಂಡ ಕೆಲವು ಖಾದ್ಯಗಳನ್ನೂ ತಯಾರಿಸಬಹುದು, ಇವು ರುಚಿಕರವಾಗಿಯೂ ಇದ್ದು ಆರೋಗ್ಯಕ್ಕೂ ಒಳ್ಳೆಯದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here