ಆರೋಗ್ಯ ದೃಷ್ಟಿಯಿಂದ ನೋಡಿದರೆ ದಾಳಿಂಬೆ ಎಲ್ಲ ಹಣ್ಣಿಗಳಿಗಿಂತ ಶ್ರೇಷ್ಠವಾದುದು, ಇದು ಜೀವಸತ್ವಗಳ ಆಗರ ಎಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಮಧುಮೇಹ, ಜನನಾಂಗ ಕ್ಯಾನ್ಸರ್, ಕರುಳು ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳನ್ನು ಹತೋಟಿಗೆ ತರುವಲ್ಲಿ ಇದರ ಪಾತ್ರ ಹಿರಿದು. ಫೋಲಿಕ್ ಆಮ್ಲ, ಜೀವಸತ್ವಗಳಾದ ಎ, ಸಿ ಮತ್ತು ಇ ಹೇರಳವಾಗಿರುವುದರಿಂದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ.
ಈ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ನಿಮ್ಮ ನೆನಪಿನ ಶಕ್ತಿಯೂ ಹೆಚ್ಚುವುದಲ್ಲದೆ, ಬೇಗ ವಯಸ್ಸಾದಂತೆ ಕಾಣುವುದು ತಪ್ಪಿಸಲು, ಚಿರಯೌವನ ನಿಮ್ಮದಾಗಿಸಿಕೊಳ್ಳಲು ದಾಳಿಂಬೆಯನ್ನು ನಿಯಮಿತವಾಗಿ ತಿನ್ನಿತ್ತಿದರೆ ಒಳ್ಳೆಯದು ಎಂದು ಸಂಶೋದಕರು ಹೇಳಿದ್ದಾರೆ.
ಹಿಂದಿನ ಕಾಲದಲ್ಲಿ ಇದನ್ನು ದೇವರ ಆಹಾರ ಎಂದು ಕರೆಯುತ್ತಿದ್ದರು ಅದರಲ್ಲಿರುವ ನಿಖರ ರಾಸಾಯನಿಕ ಮನುಷ್ಯನನ್ನು ತಾರುಣ್ಯಭಾರಿತವಾಗಿ ಕಾಣುವಂತೆ ಮಾಡುತ್ತದಂತೆ.
ಮನುಷ್ಯನ ದೇಹದಲ್ಲಿರುವ ಯುರೋಲಿಥಿನ್ ಎ ಎಂಬ ಏಕ ಅಣು ಸ್ವಯಂಭಕ್ಷಣ ಪ್ರಕ್ರಿಯೆಯನ್ನು ಹೊಂದಿದ್ದು, ಹಾನಿಗೀಡಾದ ಕೋಶಗಳನ್ನು ಹೋಗಲಾಡಿಸಿ ಹೊಸ ಕೋಶಗಳು ಉತ್ಪತ್ತಿಯಾಗಲು ಸಹಕರಿಸುತ್ತವೆ. ಆದರೆ ಮನುಷ್ಯನ ಕರುಳಿನಲ್ಲಿ ಸರಿಯಾದ ರೀತಿಯ ಬ್ಯಾಕ್ಟೀರಿಯ ಇದ್ದಾರೆ ಮಾತ್ರ ದಾಳಿಂಬೆಯಲ್ಲಿರುವ ರಾಸಯನಿಕದಿಂದ ಪ್ರಯೋಜನವಾಗುತ್ತದೆ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಜೀರ್ಣಕ್ರಿಯೆಗೂ ಸಹಕಾರಿ ಆಗಿದೆ. ದಾಳಿಂಬೆ ಹಣ್ಣು ಅಥವಾ ರಸವನ್ನು ಪ್ರತಿದಿನ ಸೇವಿಸುವುದರಿಂದ ಚರ್ಮ ಕಾಂತಿಯುತ ವಾಗುತ್ತದೆ, ದೇಹದಲ್ಲಿ ನೀರಿನಂಶವನ್ನು ಹೆಚ್ಚಿಸಿ, ನಿರ್ಜಲೀಕರಣವಾಗದಂತೆ ನೋಡಿಕೊಳ್ಳುತ್ತದೆ. ಚರ್ಮದ ಕ್ಯಾನ್ಸರ್ ಅನ್ನು ಸಹ ನಿವಾರಿಸುವ ಶಕ್ತಿ ಇದಕ್ಕಿದೆ. ಕೂದಲುದುರುವುದನ್ನು ಕಡಿಮೆ ಮಾಡಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
ತಾಯಿಯಾಗುವ ಹಂತದಲ್ಲಿ ಕೂಡ ಮಹಿಳೆಯರಿಗೆ ದಾಳಿಂಬೆ ಸೇವಿಸಲು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ದಾಳಿಂಬೆ ಹಣ್ಣು ಬಹಳ ರೋಗಗಳ ನಿಯಂತ್ರಣದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದಾಳಿಂಬೆ ಹಣ್ಣುಗಳು ಸ್ತನ ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಿ ಆರೋಗ್ಯಕರ ಕೋಶಗಳನ್ನು ಮಾತ್ರ ಉಳಿಸುತ್ತದೆ ಎಂದು ಇಸ್ರೈಲ್ ವೈದ್ಯರು ಕಂಡುಹಿದಿದ್ದಿದಾರೆ.
ಸತತ 7 ದಿನ ದಾಳಿಂಬೆಯನ್ನು ತಿನ್ನುವುದರಿಂದಾಗುವ ಉಪಯೋಗಗಳು ಇಲ್ಲವೆ ನೋಡಿ, ರಕ್ತದೊತ್ತಡ ಹತೋಟಿಗೆ ಬರುವುದು, ಕೊಲೆಸ್ತ್ರೋಲ್ ಕಡಿಮೆಯಾಗುವುದು, ದಾಳಿಂಬೆಯ ಎಲೆ ತಿನ್ನುವುದರಿಂದ ಕೆಮ್ಮು ಕಡಿಮೆಯಾಗುವುದು.
ಮಹಿಳೆಯರು ದಾಳಿಂಬೆಯ ರಸ ಸೇವಿಸುವುದರಿಂದ ಮುಟ್ಟಿನ ತೊಂದರೆ ನಿವಾರರಣೆಯಾಗುವುದು, ನಿಶ್ಯಕ್ತಿಯನ್ನು ನಿವಾರಿಸುವುದು, ಕ್ಯಾನ್ಸರ್ ರೋಗವನ್ನು ನಿಯಂತ್ರಿಸುವುದು, ನೀರಿನಂಶವನ್ನು ಹೆಚ್ಚಿಸಿ ನಿರ್ಜಲೀಕರಣವಾಗದಂತೆ, ನೋಡಿಕೊಳ್ಳುತ್ತದೆ, ಚರ್ಮದ ಕ್ಯಾನ್ಸರ್ ಅನ್ನು ಸಹ ನಿವಾರಿಸುವ ಶಕ್ತಿ ಇದಕ್ಕಿದೆ, ಕೂದಲುದುರುವುದನ್ನು ಕಡಿಮೆ ಮಾಡಿ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.