ಹೌದು ಪ್ರಸ್ತುತ ದಿನಗಳಲ್ಲಿ ಡೆಂಗ್ಯೂ ಹಾವಳಿ ಜಾಸ್ತಿನೇ ಆಗಿದೆ, ಇವುಗಳಿಂದ ದೂರ ಉಳಿಯಲು ಈ ಕೆಳಗೆ ತಿಳಿಸಿರುವಂತ ಅಂಶಗಳನ್ನು ಅನುಸರಿಸುವುದು ಉತ್ತಮ.
ದಾಳಿಂಬೆ : ದಾಳಿಂಬೆಯಲ್ಲಿ ಪಾಲಿಫಿನೋಲಿಕ್ ಫ್ಲೇವೊನೋಯ್ಡ್ ಪ್ರಮಾಣ ಹೆಚ್ಚಿದ್ದು, ನಿತ್ಯವು ಒಂದು ಗ್ಲಾಸ್ ದಾಳಿಂಬೆ ರಸಕ್ಕೆ 2 ಟೀಸ್ಪೂನ್ ನಿಂಬೆ ರಸವನ್ನು ಬೆರೆಸಿ ಕುಡಿಯಬೇಕು, ಜ್ವರ ಬಂದಾಗ ಪ್ರತಿ 2 ಗಂಟೆಗೊಮ್ಮೆ ಈ ರಸವನ್ನು ಸೇವಿಸಿದರೆ ರಕ್ತದಲ್ಲಿ ರಕ್ತಕಣಗಳ ಸಂಖ್ಯೆ ಹೆಚ್ಚುವುದು.
ಪಪ್ಪಾಯ : ಡೆಂಗ್ಯೂ ಸಮಯದಲ್ಲಿ ಪಪ್ಪಾಯ ಹಣ್ಣಿನ ಸೇವನೆಯ ಜೊತೆ ಇದರ ಎಲೆಗಳ ರಸವನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿ ಎಂದು ಸಂಶೋಧನೆ ಸಾಬೀತು ಪಡಿಸಿದೆ
ಪರಂಗಿ ಬೀಜ : ಪರಂಗಿ ಬೀಜವನ್ನು ಆಹಾರದ ಜೊತೆ ತಿನ್ನಿ, ಇದರಲ್ಲಿರುವ ಆಂಟಿಬ್ಯಾಕ್ಟೀರಿಯಾ ಗುಣ ಡೆಂಗ್ಯೂಜ್ವರವನ್ನು ಕಮ್ಮಿ ಮಾಡುತ್ತದೆ.
ಪರಂಗಿ ಎಲೆಯ ರಸ : ಎಳೆಯ ಪರಂಗಿ ಎಲೆಯನ್ನು ಶುದ್ಧ ಮಾಡಿ ಅದನ್ನು ಹಿಂಡಿ ರಸತೆಗೆದು ದಿನಕ್ಕೆ ಎರಡು ಚಮಚದಂತೆ ಕೊಟ್ಟರೆ ಬೇಗನೆ ಕಡಿಮೆಯಾಗುವುದು.
ಈರುಳ್ಳಿ ಮತ್ತು ವಿನೆಗರ್ : ಈರುಳ್ಳಿಯನ್ನು ಕತ್ತರಿಸಿ ಮಿಕ್ಸಿಗೆ ಹಾಕಿ ಅದಕ್ಕೆ ವಿನೆಗರ್ಹಾಕಿ ಮಿಕ್ಸಿಯಲ್ಲಿ ರುಬ್ಬಿ ಇದನ್ನು ಊಟದ ಜೊತೆ ಕಾಯಿಲೆಯಿಂದ ಗುಣಮುಖವಾಗುವವರೆಗೆ ತಿನ್ನಿ.
ಕಹಿ ಬೇವಿನ ಎಲೆ : ಕಹಿ ಬೇವಿನ ಎಲೆಯರಸ ಕೂಡ ಡೆಂಗ್ಯೂ ಕಾಯಿಲೆಯನ್ನು ಕಡಿಮೆ ಮಾಡುತ್ತದೆ.
ಕೊತ್ತಂಬರಿಸೊಪ್ಪು : ಕೊತ್ತಂಬರಿ ಸೊಪ್ಪನ್ನು ಅಡುಗೆಗೆ ಬಳಸಿ, ಇದರ ಎಲೆಯಿಂದ ರಸವನ್ನು ಹಿಂಡಿ ಟಾನಿಕ್ರೀತಿ ಬಳಸಬಹುದು.
ವಿಟಮಿನ್ಸಿ ಹಣ್ಣು : ವಿಟಮಿನ್ಸಿ ಇರುವ ಹಣ್ಣುಗಳನ್ನು ತಿನ್ನುವುದು ಒಳ್ಳೆಯದು ನೆಲ್ಲಿಕಾಯಿ, ಕಿತ್ತಳೆರಸ ತಿನ್ನಿ.
ತುಳಸಿ ಎಲೆ : ಕುಡಿಯುವ ನೀರಿಗೆ ತುಳಸಿ ಎಲೆ ಹಾಕಿ ಕುದಿಸಿ, ಆ ನೀರನ್ನು ಕುಡಿಯುವುದು ಒಳ್ಳೆಯದು, ಬಿಸಿನೀರಿಗೆ ೧ ಚಮಚ ತುಳಸಿ ರಸ ಮತ್ತು ಸ್ವಲ್ಪ ಕರಿಮೆಣಸಿನ ಪುಡಿ ಹಾಕಿ ಮಿಕ್ಸ್ಮಾಡಿ ಕುಡಿಯುವುದು ಕೂಡ ಒಳ್ಳೆಯದು.
ಮೆಂತೆಸೊಪ್ಪು : ಮೆಂತೆಸೊಪ್ಪನ್ನು ತಿಂದರೆ ಡೆಂಗ್ಯೂಜ್ವರ ಕಡಿಮೆಯಾಗುವುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.