ಜೀರ್ಣಕ್ರಿಯೆ : ನಾರಿನಂಶ ಅಧಿಕವಾಗಿ ಜೋಳದಲ್ಲಿ ಇರುತ್ತದೆ ಈ ನಾರಿನಂಶ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ, ಜೋಳ ತಿಂದರೆ ಅದು ಕರುಳಿನ ಕ್ಯಾನ್ಸರ್ ಕಾಯಿಲೆ ತಡೆಕಟ್ಟುವ ಸಾಮರ್ಥ್ಯ ಹೊಂದಿದೆ, ಅಲ್ಲದೆ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸುವಲ್ಲಿ ಸಹಕಾರಿ.
ಖನಿಜಾಂಶಗಳು : ಜೋಳದಲ್ಲಿ ಅಧಿಕ ಮ್ಯಾಗ್ನಿಷಿಯಂ, ಕಬ್ಬಿಣ, ಸತು, ರಂಜಕ ಇರುವುದರಿಂದ ಮೂಳೆಗೆ ತುಂಬಾ ಒಳ್ಳೆಯದು, ಇದು ಮೂಳೆಯನ್ನು ಬಲಪಡಿಸುವುದು ಮಾತ್ರವಲ್ಲ, ಕಿಡ್ನಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.
ಸುಂದರ ತ್ವಚೆ : ಜೋಳದಲ್ಲಿ antioxidants ಪ್ರಮಾಣ ಹೆಚ್ಚಿದ್ದು ಅದು ನಿಮ್ಮ ತ್ವಚೆ ಬೇಗನೆ ಮುಪ್ಪಾಗದಂತೆ ಕಾಪಾಡುತ್ತದೆ, ಜೊತೆಯಲ್ಲಿ ಜೋಳದ ಎಣ್ಣೆಯನ್ನು ಹಚ್ಚಿಕೊಂಡರೆ ತ್ವಚೆ ಅಲರ್ಜಿ, ತ್ವಚೆಯಲ್ಲಿ ಕೆಂಪು ಗುಳ್ಳೆಗಳಾಗುವುದನ್ನು ತಡೆಯಬಹುದು.
ಕೊಲೆಸ್ಟ್ರಾಲ್ ನಿಯಂತ್ರಣ : ಜೋಳದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಇದ್ದು ದೇಹದ ಆರೋಗ್ಯವನ್ನು ಹೆಚ್ಚು ಮಾಡುತ್ತದೆ, ಸ್ವೀಟ್ ಕಾರ್ನ್ ನಲ್ಲಿ ವಿಟಮಿನ್ ಸಿ, carotenoids ಮತ್ತು bioflavinoids ಅಂಶವಿರುವುದರಿಂದ ಹೃದ್ರೋಗ ಸಮಸ್ಯೆ ಇರುವವರಿಗೆ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ.
ಗರ್ಭೀಣಿಯರ ಆರೋಗ್ಯಕ್ಕೆ : ಗರ್ಭಿಣಿಯರ ಆರೋಗ್ಯಕ್ಕೆ ಜೋಳ ತುಂಬಾ ಒಳ್ಳೆಯದು, ಇದನ್ನು ಸೇವಿಸುವುದರಿಂದ ಫಾಲಿಕ್ ಆಸಿಡ್ ಕೊರತೆಯನ್ನು ನೀಗಿಸಬಹುದು, ಫಾಲಿಕ್ ಆಸಿಡ್ ಕೊರತೆ ಉಂಟಾದರೆ ಗರ್ಭಿಣಿಯರಲ್ಲಿ ಕೈ ಕಾಲುಗಳಲ್ಲಿ ಊತ, ಅಧಿಕ ರಕ್ತದೊತ್ತಡ ಕಂಡು ಬರುತ್ತದೆ, ಕಡಿಮೆ ಫಾಲಿಕ್ ಆಸಿಡ್ ಇದ್ದರೆ ಕಡಿಮೆ ತೂಕದ ಮಗು ಹುಟ್ಟುತ್ತದೆ, ಆದ್ದರಿಂದ ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಜೋಳ ತಿನ್ನುವುದು ಒಳ್ಳೆಯದು, ಕುರುಕಲು ತಿಂಡಿ ತಿನ್ನುವ ಬದಲು ಜೋಳದ ಸ್ನ್ಯಾಕ್ಸ್ ತಿನ್ನುವುದು ಒಳ್ಳೆಯದು, ಜೋಳದ ಅಡುಗೆ ಪ್ರತಿನಿತ್ಯ ತಿಂದರೆ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವುದಿಲ್ಲ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.