ಅತ್ತಿ ಹಣ್ಣನ್ನು ಈ ರೀತಿ ಬಳಸಿದರೆ ಹೊಟ್ಟೆ ನೋವು, ಬಾಯಿಹುಣ್ಣು ಹಾಗು ಇನ್ನಿತರ ಸಮಸ್ಯೆಗಳಿಂದ ಸಿಗುತ್ತೆ ತಕ್ಷಣ ಪರಿಹಾರ..!!

0
2178

ನಗರ ಜೀವನ ಶುರುವಾದ ಮೇಲೆ ಮರಗಳ ಮಾರಣ ಹೋಮವಾಗಿದೆ ಇನ್ನು ಸಣ್ಣ ಸಸ್ಯಗಳ ಬಗೆಗಿನ ಜ್ಞಾನವಂತೂ ಇಲ್ಲವೇ ಇಲ್ಲ, ಯಾವುದೇ ಸಣ್ಣ ಪುಟ್ಟ ಆರೋಗ್ಯಗಳ ಸಮಸ್ಯೆಗೆ ಮಾತ್ರೆಗಳ ಮೊರೆ ಹೋಗುತ್ತೇವೆ ಆದರೆ ಮೊದಲೆಲ್ಲ ಹಾಗು ಹಳ್ಳಿಗಳಲ್ಲಿ ಹೀಗಿಲ್ಲ, ಇನ್ನು ಹಳ್ಳಿಗಳಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅತ್ತಿ ಹಣ್ಣುಗಳು ಸಿಗುತ್ತವೆ ಆದರೆ ಅದರಲ್ಲಿರುವ ಆರೋಗ್ಯಕಾರಿ ಗುಣಗಳು ನಮಗೆ ತಿಳಿದಿರುವುದಿಲ್ಲ, ಅದರಲ್ಲೇನು ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.

ಕೆಲವರಿಗೆ ಮೂಗಿನಲ್ಲಿ ರಕ್ತಸ್ರಾವದ ಸಮಸ್ಯೆಯಿಂದ ಬಹಳ ಬಳಲುತ್ತಿರುತ್ತಾರೆ, ಅಂತವರು ಅತ್ತಿ ಹಣ್ಣಿಗೆ ಸಕ್ಕರೆ ಸೇರಿಸಿ ಸೇವಿಸಿದರೆ ರಕ್ತಸ್ರಾವ ನಿಲ್ಲುತ್ತದೆ.

ಉಷ್ಣತೆಯಿಂದ ಬಾಯಿಹುಣ್ಣಾಗಿದ್ದರೆ ಅತ್ತಿ ಎಲೆ ಮೇಲಿನ ಉಬ್ಬಿದ ಕಾಳುಗಳನ್ನು ತೆಗೆದು ಕಲ್ಲುಸಕ್ಕರೆಯ ಜೊತೆ ಅರೆದು ಸೇವಿಸಿದರೆ ಬಾಯಿಹುಣ್ಣು ಗುಣವಾಗುತ್ತದೆ.

ಹೆಣ್ಣು ಮಕ್ಕಳಲ್ಲಿ ಬಿಳಿ ಮುಟ್ಟು ಸಮಸ್ಯೆ ಹೆಚ್ಚಾಗಿದ್ದರೆ ಅತ್ತಿ ಹಣ್ಣಿನ ರಸಕ್ಕೆ ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ 2 ಬಾರಿ ಕುಡಿದರೆ ತೊಂದರೆ ನಿವಾರಣೆಯಾಗುತ್ತದೆ, ಅತ್ತಿಕಾಯಿಯ ಪುಡಿಗೆ ಕಲ್ಲುಸಕ್ಕರೆ ಬೆರೆಸಿ ನೀರಿನ ಜತೆ ಕುಡಿದರೆ ಮುಟ್ಟಿನ ಸಮಯದಲ್ಲಿ ಆಗುವ ಅತಿ ಹೆಚ್ಚು ರಕ್ತಸ್ರಾವ ನಿಲ್ಲುತ್ತದೆ.

ಅತ್ತಿ ಮರದ ತೊಗಟೆ ಕಷಾಯದಿಂದ ಪ್ರತಿ ದಿನ ಬಾಯಿ ಮುಕ್ಕಳಿಸಿದರೆ ಪದೇ ಪದೇ ಆಗುತ್ತಿರುವ ಬಾಯಿಹುಣ್ಣು ನಿವಾರಣೆಯಾಗುತ್ತದೆ, ಉಗುರು ಸುತ್ತು ಆದ ಬೆರಳನ್ನು ಹತ್ತಿ ಹಣ್ಣಿನೊಳಗೆ ಇಟ್ಟು ಗಟ್ಟಿಯಾಗಿ ಕಟ್ಟಿದರೆ ಉಗುರು ಸುತ್ತು ಬೇಗ ಮಾಯುತ್ತದೆ.

ಅತ್ತಿ ಹಣ್ಣಿನ ಸೇವನೆಯಿಂದ ಹೊಟ್ಟೆ ನೋವು ಕಡಿಮೆಯಾಗುತ್ತದೆ, ಅತ್ತಿ ಮರದ ತಾಜಾ ಎಲೆಯನ್ನು ಅರೆದು ಅದಕ್ಕೆ ಮೊಸರು ಹಾಗೂ ಸೈಂಧವ ಉಪ್ಪನ್ನು ಬೆರೆಸಿ ಕುಡಿದರೆ ಮೂಲವ್ಯಾಧಿ ಗುಣವಾಗುತ್ತದೆ. ಅತ್ತಿ ಮರದ ತೊಗಟೆಯನ್ನು ನೀರಲ್ಲಿ ತೇದು ದೇಹದಲ್ಲಿ ಊತ ಇರುವ ಜಾಗದಲ್ಲಿ ಹಚ್ಚಿದರೆ ಊತ ಬೇಗ ಶಮನವಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here