ಎಂಟು ಮಿಲಿ ನುಣ್ಣಗಿನ ಜೇಷ್ಠ ಮಧು ಒಂದು ನಿಂಬೆ ರಸದಲ್ಲಿ ಕಲಸಿ ಅದಕ್ಕೆ 15 ಮೇಲೆ ಶುದ್ಧವಾದ ಜೇನುತುಪ್ಪ ಹಾಕಿ ಪ್ರತಿದಿನ ಮೂರು ಬಾರಿ ಲೆಕ್ಕಿಸಬೇಕು, ಹೀಗೆ ಎರಡು ಮೂರು ದಿನ ಮಾಡಿದ್ದಲ್ಲಿ ಒಣಕೆಮ್ಮು ನಿವಾರಣೆಯಾಗುತ್ತದೆ.
ಹೊತ್ತಿಗೆ ಕಾಲು ಚಮಚದಷ್ಟು ಅಳಲೆಕಾಯಿಯ ಚೂರ್ಣವನ್ನು ಒಂದು ಚಮಚದಷ್ಟು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಬೇಕು, ಹೀಗೆ ದಿನಕ್ಕೆ ಎರಡರಿಂದ ಮೂರು ಬಾರಿ ಮಾಡಿದರೆ ಒಣ ಕೆಮ್ಮು ನಿಲ್ಲುತ್ತದೆ.
ಕಾಲು ಚಮಚದಷ್ಟು ಅಳಲೇಕಾಯಿ ಚೂರ್ಣವನ್ನು ಪ್ರತಿ ದಿನವೂ ಎರಡು ಅಥವಾ ಮೂರು ಬಾರಿ ಜೇನುತುಪ್ಪದಲ್ಲಿ ಕಲಸಿ ಸೇವಿಸಿದರೆ ಒಣಕೆಮ್ಮು ನಿಲ್ಲುತ್ತದೆ, ಇದನ್ನೇ ಕಿರು ನಾಲಿಗೆಗೆ ಸವರಿದರೆ ಕಿರುನಾಲಿಗೆ ಬಿದ್ದದ್ದು ಪರಿಹಾರವಾಗುತ್ತದೆ.
ಕಫಯುಕ್ತ ಕೆಮ್ಮು ಪರಿಹಾರಕ್ಕೆ ಎರಡು ಚಮಚದಷ್ಟು ಹೊಂಗೆಯ ಎಲೆಯ ರಸದೊಂದಿಗೆ 4.6 ಕರಿ ಮೆಣಸಿನ ಪುಡಿ ಸೇರಿಸಿ ನಿತ್ಯವೂ ಬೆಳಗ್ಗೆ ಮತ್ತು ಸಂಜೆ ಸೇವಿಸುತ್ತಿದ್ದರೆ ಉಪಯುಕ್ತವಾದ ಕೆಮ್ಮು ಪರಿಹಾರವಾಗುತ್ತದೆ ಹೀಗೆ ಅಗತ್ಯ ಕಾಣುವ ತನಕ ಉಪಯೋಗಿಸಬಹುದು.
ಹೊಸ ಜನ್ಯ ಕೆಮ್ಮು ಆಗಿದ್ದರೆ ಎಕ್ಕದ ಬೇರಿನ ತೊಗಟೆಯನ್ನು ನೆರಳಲ್ಲಿ ಒಣಗಿಸಿ ಚೂರ್ಣ ಮಾಡಿಟ್ಟುಕೊಂಡು ಹೊತ್ತಿಗೆ ಸ್ವಲ್ಪ ಸ್ವಲ್ಪ ಜೇನಿನಲ್ಲಿ ದಿನಕ್ಕೆರಡು ಬಾರಿಯಂತೆ ಎರಡು ಮೂರು ವಾರ ತೆಗೆದುಕೊಳ್ಳಬೇಕು.
30 ಮಿಲಿಯಷ್ಟು ಹೊಂಗೆಯ ಎಲೆ ರಸಕ್ಕೆ 0.25ಗ್ರಾಂ ಕಾಳುಮೆಣಸು ಪುಡಿಯನ್ನು ಸೇರಿಸಿ ನಿತ್ಯ ಬೆಳಗ್ಗೆ ಮತ್ತು ಸಂಜೆ ನೆಕ್ಕಿಸಿದರೆ ಕಫಯುಕ್ತವಾದ ಕೆಮ್ಮು ನಿವಾರಣೆಯಾಗುತ್ತದೆ, ಹೀಗೆ ಕನಿಷ್ಠ ನಾಲ್ಕು ಅಥವಾ ಐದು ದಿನವಾದರೂ ಮಾಡತಕ್ಕದ್ದು.
ವೀಳ್ಯದೆಲೆಯ ರಸದಲ್ಲಿ ಅರ್ಧ ಹೆಸರು ಕಾಳಿನಷ್ಟು ಕಸ್ತೂರಿಯನ್ನು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಕಿ ಕುಡಿದರೆ ಚಿಕ್ಕ ಮಕ್ಕಳ ಎದೆಯಲ್ಲಿ ಕಫ ಪರಿಹಾರವಾಗುತ್ತದೆ, ಕೆಮ್ಮು ಗುಣವಾಗುತ್ತದೆ ಹೀಗೆ ದಿನಕ್ಕೆ ಒಮ್ಮೆಯಂತೆ ಮೂರು ದಿನ ಮಾಡಿ.
ಈ ಉಪಯುಕ್ತ ಮಾಹಿತಿ ಯು ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಜೊತೆಯಲ್ಲಿ ನಮ್ಮ ಪೇಜ್ ಅನ್ನು ಲೈಕ್ ಮಾಡುವುದು ಮರೆಯದಿರಿ.