ಕಾಲಿನ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ ?

0
2652

ಸಧ್ಯದ ಪೀಳಿಗೆಗೆ ಸರಿಯಾಗಿ ಊಟ ಮಾಡಲು ಸಮಯವಿಲ್ಲ ಹಾಗಾಗಿ ಕೆಲಸಕ್ಕೆ ಹೋಗುವ ಅವಸರದಲ್ಲಿ ಸರಿಯಾಗಿ ಆಹಾರ ಸೇವನೆ ಮಾಡುವುದಿಲ್ಲ, ಇನ್ನು ಮಧ್ಯ ಇತರ ಸ್ನಾಕ್ಸ್ ತಿಂದು ಸುಮ್ಮನಾದರೆ ರಾತ್ರಿ ಮೊಬೈಲ್ ನಲ್ಲಿ ಮುಳುಗಿ ನಾವು ಏನು ತಿನ್ನುತ್ತಿದ್ದೀವಿ ಅನ್ನುವ ಜ್ಞಾನವು ಇರುವುದಿಲ್ಲ, ಇಂತಹ ಸಮಯದಲ್ಲಿ ಅನ್ನವನ್ನು ತಿನ್ನುವ ರೀತಿಯ ಬಗ್ಗೆ ಅಥವಾ ಊಟಕ್ಕೆ ಕುಳಿತುಕೊಳ್ಳುವ ಆಸನದ ಬಗ್ಗೆ ಅಷ್ಟಾಗಿ ಚಿಂತೆ ಮಾಡಿರುವುದಿಲ್ಲ, ನಮ್ಮ ಧರ್ಮದಲ್ಲಿ ಪ್ರತಿಯೊಂದು ಆಚರಣೆಗೂ ಧಾರ್ಮಿಕ ಹಾಗು ವೈಜ್ಞಾನಿಕ ಕಾರಣಗಳು ಇದ್ದೆ ಇರುತ್ತವೆ, ಅದರ ತಿಳಿಯೋಣ ಸಂಪೂರ್ಣವಾಗಿ ಓದಿ.

ಅನ್ನವು ಪೂರ್ಣಬ್ರಹ್ಮವಾಗಿರುವುದರಿಂದ ಅದಕ್ಕೆ ದೇವತ್ವದ ಗೌರವವನ್ನು ಕೊಡಬೇಕು, ತೊಡೆಯ ಮೇಲೆ ಅನ್ನವನ್ನಿಟ್ಟುಕೊಂಡು ಊಟ ಮಾಡಿದರೆ ಅನ್ನದಲ್ಲಿನ ದೇವತ್ವಕ್ಕೆ ಅಗೌರವ ತೋರಿದಂತಾಗಿ ಅನ್ನಬ್ರಹ್ಮದಲ್ಲಿನ ಸಾತ್ತ್ವಿಕತೆಯ ಲಾಭವು ಅಪೇಕ್ಷಿತ ರೀತಿಯಲ್ಲಾಗುವುದಿಲ್ಲ.

ತೊಡೆಯ ಮೇಲೆ ತಟ್ಟೆಯನ್ನಿಟ್ಟು ಅನ್ನವನ್ನು ಸೇವಿಸಿದರೆ, ಶರೀರದ ಸಂಪರ್ಕವು ಅನ್ನದೊಂದಿಗೆ ಹೆಚ್ಚಿನ ಪ್ರಮಾಣದಲ್ಲಾಗುತ್ತದೆ. ಇದರಿಂದ ಜೀವದ ಅಂತರ್ಮನಸ್ಸಿನ ವಾಸನೆಯ ವಿಚಾರಗಳಿಗನುಸಾರ ಪ್ರಕ್ಷೇಪಿತವಾಗುವ ಲಹರಿಗಳು ಅನ್ನದ ಮೂಲಕ ದೇಹದಲ್ಲಿ ಸಂಕ್ರಮಿತವಾಗುತ್ತವೆ. ಈ ಪ್ರಕ್ರಿಯೆಯಲ್ಲಿ ಜೀವವು ತನ್ನ ರಜ-ತಮಾತ್ಮಕ ಲಹರಿಯುಕ್ತ ಕೋಶದಲ್ಲಿ ಅನ್ನವನ್ನಿಟ್ಟುಕೊಂಡು ಸೇವಿಸುತ್ತಿರುತ್ತದೆ. ಇದರಿಂದ ಜೀವವು ಅನ್ನದಿಂದ ಸಿಗುವ ಭೂಮಿ ಲಹರಿಗಳ ಲಾಭದಿಂದ ವಂಚಿತವಾಗುತ್ತದೆ.

ಪಾದಗಳ ಸ್ಪರ್ಶದಿಂದ ಪಾತಾಳದಿಂದ ಬರುವ ತೊಂದರೆದಾಯಕ ಸ್ಪಂದನಗಳು ಹೆಚ್ಚಾಗಿ ಮಂಡಿಗಳ ಟೊಳ್ಳಿನಲ್ಲಿ ತಮ್ಮ ಸ್ಥಾನವನ್ನು ಮಾಡಿಕೊಳ್ಳುತ್ತವೆ. ತೊಡೆಯ ಮೇಲೆ ತಟ್ಟೆಯನ್ನಿಟ್ಟು ಊಟವನ್ನು ಮಾಡುವುದರಿಂದ ಸ್ಪರ್ಶದ ಮಾಧ್ಯಮದಿಂದ ಕಾಲು, ಮಂಡಿ ಮತ್ತು ತೊಡೆಗಳಲ್ಲಿ ಸುಪ್ತವಾಗಿರುವ ಸ್ಪಂದನಗಳು ಕಾರ್ಯನಿರತವಾಗಿ ಅನ್ನವು ಅಪವಿತ್ರವಾಗಬಹುದು, ಆದುದರಿಂದ ಊಟದ ತಟ್ಟೆಯನ್ನು ತೊಡೆಗಳ ಮೇಲೆ ಇಟ್ಟುಕೊಂಡು ಊಟವನ್ನು ಮಾಡಬಾರದು.

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವುದು ಒಂದು ಒಳ್ಳೆಯ ವೀಚ್ಚರವೇ.

LEAVE A REPLY

Please enter your comment!
Please enter your name here