ಕನ್ನಡ ಚಿತ್ರರಸಿಕರಲ್ಲಿ ಇತ್ತೀಚಿಗೆ ಬಹಳ ನಿರೀಕ್ಷೆಯನ್ನು ಹುಟ್ಟಿಸಿರುವ ಸಿನಿಮಾ ರಂಗನಾಯಕಿ, ತನ್ನ ವಿಭಿನ್ನವಾದ ಟೀಸರ್ ಹಾಗೂ ಟ್ರೈಲರ್ ಗಳಿಂದಲೇ ಜನರ ನಿರೀಕ್ಷೆಯ ಮಟ್ಟವನ್ನು ಹೆಚ್ಚಿಸಿರುವ ಈ ಚಿತ್ರ ಇನ್ನು 15 ದಿನಗಳಲ್ಲಿ ಬಿಡುಗಡೆಯಾಗಲಿದೆ, ಚಿತ್ರದ ಬಿಡುಗಡೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ನಿರ್ದೇಶಕರಾದ ದಯಾಳ್ ಪದ್ಮನಾಭನ್ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು.
ಇದೇ ಪತ್ರಿಕಾಗೋಷ್ಠಿಯಲ್ಲಿ ರಂಗನಾಯಕಿ ಚಿತ್ರಕ್ಕೆ ಸಿಕ್ಕಿರುವ ಜನರ ಪ್ರೋತ್ಸಾಹ ಹಾಗೂ ಬೆಂಬಲ, ಮತ್ತು ಚಿತ್ರ ಮೂಡಿ ಬಂದಿರುವ ರೀತಿಯ ಬಗ್ಗೆ ಮಾತನಾಡುತ್ತಲೇ ನಿರ್ದೇಶಕರು ಆಸ್ಕರ್ ಪ್ರಶಸ್ತಿಯ ಬಗ್ಗೆಯೂ ಮಾತನಾಡಿದ್ದು ವಿಶೇಷವಾಗಿತ್ತು, ಮುಂದೆ ನಾನು ಖಂಡಿತವಾಗಿಯೂ ಕನ್ನಡ ಚಿತ್ರರಂಗಕ್ಕೆ ಆಸ್ಕರ್ ಪ್ರಶಸ್ತಿ ತಂದು ಕೊಡುತ್ತೇನೆ ಎಂಬ ಭರವಸೆಯನ್ನು ಸಹ ಇದೇ ಸಮಯದಲ್ಲಿ ನೀಡಿದರು.
ರಂಗನಾಯಕಿ ಚಿತ್ರ ಆಸ್ಕರ್ ಪ್ರಶಸ್ತಿ ತಂದು ಕೊಡುತ್ತದೆ ಅಥವಾ ಅವರ ಮುಂದಿನ ಸಿನಿಮಾ ಆಸ್ಕರ್ ತರುತ್ತದೆ ಎಂಬುವ ಪ್ರಸ್ತಾಪ ಮಾಡಿದರೋ ಗೊತ್ತಿಲ್ಲ ಆದರೆ ರಂಗನಾಯಕಿ ಸಿನಿಮಾ ಈ ಬಾರಿಯ ಗೋವಾದಲ್ಲಿ ನಡೆಯುವ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಗೆ ಆಯ್ಕೆಯಾಗಿರುವುದು ಖುಷಿಯ ವಿಚಾರ, ಆದರೆ ಚಿತ್ರದ ನಿರ್ದೇಶಕರು ಮಾತ್ರ ಒಂದು ಸಿನಿಮಾ ಸಂಪೂರ್ಣವಾಗಿ ಮುಗಿದು ಬಿಡುಗಡೆ ಆಗುವ ಮುಂಚೆ ಮತ್ತೊಂದು ಸಿನಿಮಾ ತಯಾರಿ ಮಾಡಿಕೊಳ್ಳುವುದು ಇವರ ಒಂದು ಸ್ಪೆಷಾಲಿಟಿ ಎಂದರೆ ತಪ್ಪಾಗಲಾರದು.
ರಂಗನಾಯಕಿ ಸಿನಿಮಾ ಸಂಗೀತ ಜವಾಬ್ದಾರಿ ಹೊತ್ತಿರುವ ಮಣಿಕಾಂತ್ ಕದ್ರಿಯವರ ಉತ್ತಮವಾದ ಹಾಡುಗಳನ್ನು ನೀಡಿದ್ದಾರೆ, ಚಿತ್ರದಲ್ಲಿ ಅದಿತಿ ಪ್ರಭುದೇವ, ತ್ರಿವಿಕ್ರಮ್ ಹಾಗೂ ಶ್ರೀನಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, S V ಎಂಟರ್ಟೈನ್ಮೆಂಟ್ ಅಡಿಯಲ್ಲಿ ತಯಾರಾಗುತ್ತಿರುವ ಸಿನಿಮಾ ರಾಕೇಶ್ ಬಿ ಅವರ ಕ್ಯಾಮರಾ ಕಣ್ಣಲ್ಲಿ ಸರಿಯಾಗಿದೆ.