ಬಾಗಿಲು ತೆರೆದ ವರ್ಷಕ್ಕೊಮ್ಮೆ ಮಾತ್ರ ದರ್ಶನ ಕೊಡುವ ಹಾಸನಾಂಬೆ ದೇವಸ್ಥಾನ, ಈ ಪುಣ್ಯ ದೇವಸ್ಥಾನಕ್ಕೆ ಭೇಟಿ ನೀಡಲು ಹಾಗೂ ತಾಯಿ ಹಾಸನಾಂಬೆ ದರ್ಶನ ಪಡೆಯಲು ಇಲ್ಲಿದೆ ಸಂಪೂರ್ಣ ಮಾಹಿತಿ !

0
1506

ಹಾಸನ ಕ್ಷೇತ್ರದಲ್ಲಿ ನೆಲೆನಿಂತು ಹಾಸನಾಂಬೆ ಹೆಸರಿನಲ್ಲಿ ಭಕ್ತಾದಿಗಳನ್ನು ಆಶೀರ್ವದಿಸುವ ಈ ತಾಯಿಯ ಮಹಿಮೆ ಯಾರಿಗೆ ತಾನೇ ಗೊತ್ತಿಲ್ಲ, ಹಾಸನಾಂಬೆಯ ದರ್ಶನ ಪಡೆಯಬೇಕಾದರೆ ಒಂದು ವರ್ಷ ಕಾಯಲೇಬೇಕು, ಕಾರಣ ಈ ತಾಯಿಯ ದೇಗುಲ ವರ್ಷಕ್ಕೆ ಒಮ್ಮೆ ಮಾತ್ರ ಬಾಗಿಲನ್ನು ತೆರೆಯುತ್ತದೆ, ಈ ವರ್ಷ ಗುರುವಾರದಿಂದ ದೇವಸ್ಥಾನದ ಬಾಗಿಲನ್ನು ತೆರೆದು ತಾಯಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇದೇ ಸಂಭ್ರಮದಲ್ಲಿ ಹಾಸನ ಸಂಪೂರ್ಣವಾಗಿ ಮದುವೆ ಹೆಣ್ಣಿನ ರೀತಿಯಲ್ಲಿ ಸಿಂಗಾರವಾಗಿ ನಾಚುತ್ತಾ ನಿಂತಿದೆ, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾದಿಗಳು ತಾಯಿಗೆ ದರ್ಶನಕ್ಕಾಗಿ ಇಲ್ಲಿಗೆ ಬರುವುದರಿಂದ ಜಿಲ್ಲಾಡಳಿತ ಬರುವ ಭಕ್ತಾದಿಗಳಿಗೆ ಬೇಕಾಗಿರುವ ಸಕಲ ವ್ಯವಸ್ಥೆಗಳನ್ನು ಮಾಡಿದೆ, ಅತಿ ಮುಖ್ಯವಾಗಿ ಈ ಬಾರಿ ದೇವಾಲಯವು ಇದೇ ತಿಂಗಳ 29 ನೇ ತಾರೀಖಿನವರೆಗೂ ತೆರೆದಿರುತ್ತದೆ, ಪ್ರತಿಬಾರಿಯಂತೆ ಈ ಬಾರಿಯೂ ಅರಸುಮನೆತನದ ನಟರಾಜ್ ಸಾಂಪ್ರದಾಯಿಕವಾಗಿ ಬನ್ನಿ ಕಡಿಯುವ ಮುಖಾಂತರ ದೇವಸ್ಥಾನದ ಬಾಗಿಲನ್ನು ತೆರೆಯಲಾಗಿದೇ.

ಹಾಸನಾಂಬೆಯ ದರ್ಶನ ಪಡೆಯಲು ಹಾಸನ ಮಾತ್ರವಲ್ಲದೆ ಕರ್ನಾಟಕದ ಪ್ರತಿ ಮೂಲೆಯಿಂದಲೂ ಭಕ್ತಾದಿಗಳು ಬರ್ತಾರೆ, ಆದರೆ ಈ ಬಾರಿ ನೆರೆ ರಾಜ್ಯಗಳಿಂದಲೂ ಭಕ್ತಾದಿಗಳು ಬರುವ ಕಾರಣ ಭಕ್ತಾದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ, ಇದೇ ಕಾರಣಕ್ಕಾಗಿಯೇ ಈ ಬಾರಿ 14 ದಿನಗಳ ಕಾಲ ದೇವಸ್ಥಾನದ ಬಾಗಿಲನ್ನು ತೆರೆಯಲು ನಿರ್ಧಾರ ಮಾಡಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅಕ್ಟೋಬರ್ 14 ರಿಂದ ಸಪ್ತಮಾತೃಕೆಯರು ಮತ್ತು ಹಾಸನಾಂಭ ಕಥೆಯನ್ನು ಹೇಳುವ ರಥವು ಸಂಚಾರ ಮಾಡಲಿದೆ, ಪ್ರಮುಖ ಕಲಾವಿದರುಗಳು ದೇವತೆಯ ಪುರಾಣಗಳನ್ನು ಜಿಲ್ಲೆಯ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಪ್ರಮುಖವಾಗಿ ನಿರೂಪಣೆ ಮಾಡಲಿದ್ದಾರೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ಬಾರಿ ಬರುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ರೈಲಿನ ವ್ಯವಸ್ಥೆ ಹಾಗೂ ಬಸ್ಸಿನ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ, ಯಾವುದೇ ಆಯ್ತಾ ಘಟನೆ ನಡೆಯದಂತೆ ಪೊಲೀಸರು ಗಮನ ಹರಿಸಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯದ ಆವರಣ ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದಾರೆ.

ಹಾಸನಾಂಬೆ ದೇವಾಲಯವು ದಿನದ ಎಲ್ಲಾ ಸಮಯವು ತೆರೆದಿರುತ್ತದೆ ಆದರೆ ದೇವಸ್ಥಾನದ ಮೊದಲ ದಿನ ಹಾಗೂ ಕೊನೆಯ ದಿನ ಭಕ್ತಾದಿಗಳಿಗೆ ಅವಕಾಶ ಇರುವುದಿಲ್ಲ ಕಾರಣ ಈ ಸಮಯದಲ್ಲಿ ತಾಯಿಯ ಪೂಜೆ ನಡೆಯುತ್ತಿರುತ್ತದೆ, ಈ ಬಾರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಕೂಡ ಹಾಸನಾಂಬೆಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ವಿಶೇಷ ಪ್ಯಾಕೇಜ್ ಗಳನ್ನು ನೀಡಲು ಮುಂದಾಗಿದೆ.

LEAVE A REPLY

Please enter your comment!
Please enter your name here