ಕೋಟಿ ಕೋಟಿ ಹಣವನ್ನು ಹೊಂದಿರುವ ತಿರುಪತಿ ದೇವಸ್ಥಾನದ ಈ ರಹಸ್ಯ ನಿಮಗೆ ತಿಳಿದಿರಲು ಸಾಧ್ಯವಿಲ್ಲ.!

0
2771

ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಾಲಯವು ಭಾರತದಲ್ಲಿನ ಪ್ರತ್ಯೇಕ ದೇವಾಲಯಗಳಲ್ಲಿ ಒಂದು, ಈ ಪ್ರಸಿದ್ಧವಾದ ದೇವಾಲಯವು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲ ಪಟ್ಟಣದ ತಿರುಪತಿ ಬೆಟ್ಟದ ಮೇಲೆ ನಡೆಸಿದ್ದಾರೆ, ಈ ದೇವಾಲಯವನ್ನು ಕಲಿಯುಗದ ವೈಕುಂಠ ಎಂದು ಕರೆಯಲಾಗುತ್ತದೆ, ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಬಾಲಾಜಿ ಗೋವಿಂದಾ ಶ್ರೀನಿವಾಸ ವೆಂಕಟೇಶ್ವರ ವೆಂಕಟರಮಣ ಅಂತ ಕೆಲವು ನಾಮಗಳಿಂದ ಕರೆಯಲಾಗುತ್ತೆ, ಈ ದೇವಾಲಯವನ್ನು ದ್ರಾವಿಡ ವಾಸ್ತು ಶಿಲ್ಪದಲ್ಲಿ ನಿರ್ಮಿಸಲಾಗಿದೆ, ವೆಂಕಟೇಶ್ವರ ಸ್ವಾಮಿ ಪೂರ್ವದಿಕ್ಕಿನಲ್ಲಿ ನಿಂತ ಭಂಗಿಯಲ್ಲಿ ಭಕ್ತರಿಗೆ ದರ್ಶನವನ್ನು ನೀಡುತ್ತಾರೆ, ದೇಣಿಗೆ ಮತ್ತು ಸಂಪತ್ತು ಪಡೆಯುವ ದೃಷ್ಟಿಯಿಂದ ಜಗತ್ತಿನ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ತಿರುಪತಿ ದೇವಾಲಯ ಕೂಡ ಒಂದು, ತಿರುಪತಿಯ ಬೆಟ್ಟಗಳು ಶೇಷಾಚಲ ಬೆಟ್ಟಗಳ ಭಾಗವಾಗಿದೆ, ಶಿಕರಗಳು ಏನು ಮುಖಂಡರನ್ನು ಪ್ರತಿನಿಧಿಸುತ್ತೆ, ಸ್ವಯಂಭು ವಿಷ್ಣುವಿನ ಕ್ಷೇತ್ರದಲ್ಲಿ ಸ್ವಾಮಿಯ ಹಲವಾರು ವಿಶೇಷತೆಗಳಿವೆ, ಈ ದೇವಾಲಯದಲ್ಲಿನ ಹಲವಾರು ರಹಸ್ಯಗಳು ಇಂದಿಗೂ ಜಗತ್ತಿಗೆ ತಿಳಿದಿಲ್ಲ, ತಿರುಪತಿ ದೇವಾಲಯದ 10 ರಹಸ್ಯಗಳ ಬಗ್ಗೆ ನಾವು ಇವತ್ತು ತಿಳಿದುಕೊಳ್ಳೋಣ.

ವೆಂಕಟೇಶ್ವರ ಸ್ವಾಮಿ ಮೂರ್ತಿ : ತಿರುಪತಿಯಲ್ಲಿರುವ ವೆಂಕಟರಮಣಸ್ವಾಮಿಯ ಮೂಲವಿಗ್ರಹ ಇವತ್ತಿಗೂ 43 ಡಿಗ್ರಿ ಉಷ್ಣಾಂಶ ದಿಂದ ಕೂಡಿರುತ್ತದೆ, ಈ ಸ್ವಾಮಿ ವಿಗ್ರಹವು ಸಮುದ್ರಮಟ್ಟದಿಂದ 3000 ಅಡಿ ಎತ್ತರದಲ್ಲಿ ಇರುತ್ತದೆ, ಸಾಮಾನ್ಯವಾಗಿ ಅಷ್ಟು ಎತ್ತರದಲ್ಲಿ ವಾತಾವರಣ ಅತ್ಯಂತ ತಂಪಾಗಿರುತ್ತದೆ, ಹಾಗಿದ್ದರೂ ಸಹ ಸ್ವಾಮಿಯ ವಿಗ್ರಹಕ್ಕೆ ಮಾತ್ರ ಸೆಕೆ ಸೋರ್ತಾ ಇರುತ್ತೆ ಪ್ರತಿದಿನ 4:00 ಗಂಟೆಗೆ ಮುಂಜಾನೆ ಅಭಿಷೇಕವನ್ನು ನಿರ್ವಹಿಸಲಾಗುತ್ತದೆ, ಆದರೂ ಸಹ ಸೆಕೆ ನಿಲ್ಲುವುದಿಲ್ಲ ಅದಕ್ಕೆ ಪೂಜಾರಿಗಳು ಕೋಮಲವಾದ ವಸ್ತ್ರಗಳಿಂದ ವರೆಸುತ್ತಾರೆ, ಪ್ರತಿ ಗುರುವಾರ ಸ್ವಾಮಿಯ ವಸ್ತುಗಳನ್ನು ತೆಗೆಯಲಾಗುತ್ತದೆ, ಆ ಸಮಯದಲ್ಲಿ ಸ್ವಾಮಿಗೆ ಧರಿಸಿದ ಆಭರಣ ಗಳೆಲ್ಲ ತುಂಬಾ ಉಷ್ಣತೆಯಿಂದ ಕೂಡಿರುತಂತೆ.

ದೀಪಾ : ವೆಂಕಟೇಶ್ವರ ಸ್ವಾಮಿ ಗರ್ಭಗುಡಿಯಲ್ಲಿ ದೀಪ ಒಂದಿದೆ, ಅದು ಅಖಂಡ ಜ್ಯೋತಿಯಾಗಿ ಗರ್ಭಗುಡಿಯಲ್ಲಿ ಬೆಳಕನ್ನು ನೀಡುತ್ತದೇ, ದೀಪವನ್ನ ಯಾವಾಗ ಬೆಳಗಿಸಿದ್ದಾರೆ ಯಾರು ಬೆಳಗಿಸಿದ್ದಾರೆ ಅಂತ ಇಂದಿಗೂ ಒಂದು ಪ್ರಶ್ನೆಯಾಗಿ ಉಳಿದಿದೆ, ದೀಪವು ಎಷ್ಟು ಸಾವಿರ ವರ್ಷಗಳಿಂದ ಹಾಗೆಯೇ ಉರಿಯುತ್ತಲೇ ಇದೆ ಅಂತೆ.

ಜಲಪಾತ : ವೆಂಕಟೇಶ್ವರ ಸ್ವಾಮಿ ಗರ್ಭಗುಡಿಯಲ್ಲಿ ಸ್ವಾಮಿಯ ಮೂರ್ತಿಯೆಂದು ಜಲಪಾತ ಇದೆಯಂತೆ, ಸ್ವಾಮಿಗೆ ಅಲಂಕಾರ ಮಾಡಿ ತೆಗೆದ ಹೂವುಗಳನ್ನು ಜಲಪಾತಕ್ಕೆ ಹಾಕುತ್ತಾರಂತೆ, ಹೂವುಗಳು 20 ಕಿಲೋಮೀಟರ್ ದೂರದಲ್ಲಿ ಇರುವ ವೆಲ್ಪೆದು ಎಂಬ ಗ್ರಾಮದಲ್ಲಿ ತೇಲುತ್ತದೆ, ವೆಂಕಟೇಶ್ವರ ಸ್ವಾಮಿಯ ಬೆನ್ನಹಿಂದೆ ಕಿವಿಯಿಟ್ಟು ಕೇಳಿದರೆ ಸಮುದ್ರದ ಅಲೆಗಳ ಶಬ್ದ ಕೇಳುತ್ತದೆಯಂತೆ.

ಕೂದಲು : ವೆಂಕಟೇಶ್ವರ ಸ್ವಾಮಿಗೆ ಕೂದಲು ಇದೆಯಂತೆ, ಆ ಕೂದಲು ಸ್ವಾಮಿಯ ನಿಜವಾದ ಕೂದಲಂತೆ, ಸ್ವಾಮಿಗೆ ಎಷ್ಟೇ ಬಾರಿ ಅಭಿಷೇಕ ಮಾಡಿದರು ಕೂಡ ಆ ಕೂದಲು ಉದುರುವುದಿಲ್ಲ ವಂತೆ.

ಗ್ರಾಮ : ವೆಂಕಟೇಶ್ವರ ಸ್ವಾಮಿ ತಿರುಪತಿ ದೇವಾಲಯದಿಂದ ಸುಮಾರು 23 ಕಿಲೋಮೀಟರ್ ದೂರದಲ್ಲಿ ಒಂದು ಗ್ರಾಮವಿದೆ, ಆ ಗ್ರಾಮದಲ್ಲಿ ಹೊರಗಡೆಯಿಂದ ಬರುವ ವ್ಯಕ್ತಿಗಳಿಗೆ ಅನುಮತಿ ಇಲ್ಲ, ಯಾಕೆಂದರೆ ಆ ಗ್ರಾಮದಿಂದಲೇ ಪ್ರತಿದಿನ ಸ್ವಾಮಿಯೇ ಪೂಜೆಗೆ ಅಗತ್ಯವಿರುವ ಹೂವುಗಳು ಹಾಲು ಮೊಸರು ಬೆಣ್ಣೆ ಎಣ್ಣೆ ಇತ್ಯಾದಿ ಹಲವು ಪದಾರ್ಥಗಳನ್ನು ತಯಾರಿಸುತ್ತಾರೆ, ಸ್ವಾಮಿಗೆ ನೀಡುವ ಪ್ರತಿಯೊಂದು ವಸ್ತುವೂ ಪವಿತ್ರವಾಗಿರಬೇಕು ಆದ್ದರಿಂದ ಆ ಗ್ರಾಮದ ಪ್ರಜೆಗಳು ಇದನ್ನು ನೇಮ ನಿಷ್ಠೆಯಿಂದ ಪಾಲಿಸುತ್ತಾರೆ.

LEAVE A REPLY

Please enter your comment!
Please enter your name here