ಎಚ್ಚರ ಹಿಂದೂ ಧರ್ಮದ ಪ್ರಕಾರ ಈ ಸಮಯದಲ್ಲಿ ಸ್ನಾನ ಮಾಡಿದರೆ ದರಿದ್ರ ಕಾಡುತ್ತದೆ..!

0
9213

ಬೇಗ ಏಳು ಬೇಗ ಮಲಗು ಪದ್ಧತಿ ಈಗಿಲ್ಲ, ರಾತ್ರಿ 12ರ ಮೇಲೆ ನಿದ್ರೆ ಮಾಡುವವರ ಸಂಖ್ಯೆಯೇ ಹೆಚ್ಚು, ಇದರಿಂದಾಗಿ ಬೆಳಿಗ್ಗೆ ಏಳುವುದು ತಡವಾಗುತ್ತದೆ. ಸೂರ್ಯೋದಯಕ್ಕಿಂತ ಮೊದಲ ಸ್ನಾನ ಮಾಡುವವರ ಸಂಖ್ಯೆ ಅತೀ ಕಡಿಮೆ. ಸೂರ್ಯ ನೆತ್ತಿ ಮೇಲೆ ಬಂದರೂ ಕೆಲವರಿಗೆ ಸ್ನಾನ ಆಗಿರುವುದಿಲ್ಲ. ನೀವು ಇಂತವರಲ್ಲಿ ಒಬ್ಬರಾಗಿದ್ದರೆ ಎಚ್ಚರ. ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ.

ಬೆಳಗಿನ ಜಾವ 4 ಗಂಟೆಯಿಂದ ಐದು ಗಂಟೆಯೊಳಗೆ ಮಾಡುವ ಸ್ನಾನವನ್ನು ಮುನಿ ಸ್ನಾನ ಎಂದು ಕರೆಯಲಾಗುತ್ತದೆ. ಇದು ಸ್ನಾನ ಮಾಡಲು ಅತ್ಯುತ್ತಮವಾದ ಸಮಯ. ಮುನಿ ಸ್ನಾನ ಮಾಡುವುದರಿಂದ ಮನೆಯಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸುತ್ತದೆಂದು ನಂಬಲಾಗಿದೆ. ಬೆಳಿಗ್ಗೆ ಐದು ಗಂಟೆಯಿಂದ ಆರು ಗಂಟೆಯೊಳಗೆ ಸ್ನಾನ ಮಾಡಿದರೆ ಮಾಡಿದರೆ ಆಯಸ್ಸು, ಕೀರ್ತಿ, ಧನ, ಸಂತೋಷ ಲಭಿಸುತ್ತದೆ.

ಇದನ್ನು ದೇವಿ ಸ್ನಾನ ಎಂದು ಕರೆಯಲಾಗುತ್ತದೆ. ಶಾಸ್ತ್ರಗಳ ಪ್ರಕಾರ ಈ ಸ್ನಾನ ಕೂಡ ಉತ್ತಮವಾದದ್ದು. ಮೂರನೇ ಸ್ನಾನವನ್ನು ಮನುಷ್ಯ ಸ್ನಾನ ಎಂದು ಕರೆಯಲಾಗುತ್ತದೆ. ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ಇದಾಗಿದೆ. ಈ ಸಮಯದಲ್ಲಿ ಸ್ನಾನ ಮಾಡಿದರೆ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ.

ಕೊನೆಯ ಸ್ನಾನ ರಾಕ್ಷಸಿ ಸ್ನಾನ ಇದೀಗ ಸಾಮಾನ್ಯವಾಗಿದೆ, 8 ಗಂಟೆ ನಂತರ ಮಾಡುವ ಸ್ನಾನ ಈ ಶ್ರೇಣಿಯಲ್ಲಿ ಬರುತ್ತದೆ, ಇದನ್ನು ಧರ್ಮ ನಿಷೇಧವೆಂದು ಪರಿಗಣಿಸಲಾಗಿದೆ, ಈ ಸ್ನಾನ ಮಾಡುವುದರಿಂದ ಮನೆಯಲ್ಲಿ ಬಡತನ, ಕಲಹ, ಅಶಾಂತಿ, ಅನಾರೋಗ್ಯ ಕಾಡುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here