ಜಾಂಡೀಸ್ ನಂತಹ ದೊಡ್ಡ ರೋಗವನ್ನು ಗುಣಪಡಿಸುವ ತುಂಬೆ ಗಿಡ..! ಬಳಕೆಯ ಸಂಪೂರ್ಣ ವಿವರ.

0
2709

ತುಂಬೆಹೂವು ಈಶ್ವರನ ಪೂಜೆಯಲ್ಲಿ ಇರಲೇಬೇಕು, ಈಶ್ವರನಿಗೆ ಇದು ಅತ್ಯಂತ ಪ್ರೀತಿಯ ಹೂವೆಂದು ಪುರಾಣಗಳಲ್ಲಿ ಹಲವಾರು ಕಥೆಗಳ ಮೂಲಕ ವಿವರಿಸಲಾಗಿದೆ, ಮಳೆಗಾಲದಲ್ಲಿ ಬಯಲು ಗಳಲ್ಲೆಲ್ಲಾ ಬೆಳೆಯುವ ಪುಟ್ಟ ಗಿಡವು ಕಾಮಾಲೆ ರೋಗಕ್ಕೆ ಅತ್ಯುತ್ತಮ ಔಷಧಿ ಎಂದು ವೃಂದ ಮಾಧವ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.

ಇದರ ಹೂವಿನ ಶೈಲಿಯನ್ನು ಕಂಡು ದ್ರೋಣ ಪುಷ್ಟಿ ಸಂಸ್ಕೃತದಲ್ಲಿ, ಗುಮಾ ಹಿಂದಿಯಲ್ಲಿ, ಹಲಕಸಾ ಬಂಗಾಳಿಯಲ್ಲಿ, ತುಂಬಾ ಮಲಯಾಳದಲ್ಲಿ, ಕುಬೊ ಗುಜರಾತ್ ನಲ್ಲಿ, ತoಬಾರಿ ತಮಿಳುನ್ನಲ್ಲಿ ಮೊದಲಾದ ಹೆಸರುಗಳಿಂದ ಇದನ್ನು ಕರೆಯುತ್ತಾರೆ.

ಜಾಂಡೀಸ್ ರೋಗ ದಲ್ಲಿ ಇದರ ಎಲೆಗಳ ರಸವನ್ನು ಕಾಡಿಗೆ ಯಾಂತೆ ಕಣ್ಣಿಗೆ ಹಚ್ಚಿಕೊಳ್ಳಬೇಕು, ಸರ್ಪವಿಷ, ಕ್ರಿಮಿರೋಗ, ನೆಗಡಿ, ಕೆಮ್ಮು, ದಮ್ಮು, ಮುಟ್ಟಾಗಿರುವಾಗ ಅತ್ಯಂತ ನೋವು ಮತ್ತು ಕೆಲವು ರಕ್ತ ಸಂಬಂಧಿ ರೋಗಗಳನ್ನು ಇದರ ಇಡೀ ಕಂಡವನ್ನು ಜಜ್ಜಿ ತೆಗೆದು ರಸವನ್ನು 5ರಿಂದ 10 ಮಿಲಿ ಗ್ರಾಂ ಪ್ರಮಾಣದಲ್ಲಿ ಸೇವಿಸುವುದರಿಂದ ಉತ್ತಮ ಪರಿಣಾಮ ಲಭಿಸುತ್ತದೆ, ತುಂಬೆಯ ಹೂಗಳನ್ನು ಹಾಲಿನಲ್ಲಿ ಅರೆದು ಆಗಿಂದಾಗೆ ಸೇವಿಸಿದರೆ ಬಿಕ್ಕಳಿಕೆ ಶಮನಗೊಳ್ಳುವುದು ಎಂಬುದು ಅನುಭವಿ ವೈದ್ಯರ ಅಭಿಪ್ರಾಯವಾಗಿದೆ, ತುಂಬೆ ಏಲೆಗೆ ಬೆವರು ಬರಿಸುವ ಸಾಮರ್ಥ್ಯ ಇರುವುದರಿಂದ ವಿಷಮಜ್ವರ ಮತ್ತು ಇತರ ಕೆಲವು ಜ್ವರಗಳಲ್ಲೂ ಇದು ಯೋಗ್ಯ ಚಿಕಿತ್ಸೆ ನೀಡುತ್ತದೆ, ಇದೇ ಕಾರಣಕ್ಕಾಗಿ ತುಂಬೆ ಎಲೆಯನ್ನು ಚರ್ಮರೋಗಗಳನ್ನು ಔಷಧಿಯಾಗಿ ಉಪಯೋಗಿಸುತ್ತಾರೆ, ತುಂಬೆಯು ಚರ್ಮದ ಮೇಲೆ ಬೀರುವ ಪರಿಣಾಮದ ಕುರಿತು ವಿಶೇಷ ಅಧ್ಯಯನಗಳು ನಡೆದಿವೆ.

ತುಂಬೆರಸವನ್ನು ಕಣ್ಣಿಗೆ ಎರಡೆರಡು ಹನಿಯಷ್ಟು ಹಾಕಿದರೆ ಯಾವುದೇ ರೀತಿಯ ಹೊಟ್ಟೆ ನೋವು ಕೂಡ ಒಮ್ಮೆ ಕಡಿಮೆ ಆಗುತ್ತದೆ ಕಣ್ಣಿಗೆ ಸಾಮಾನ್ಯ ಗಾಯಗಳಾದಗ ಲೂ ಇದೇ ಚಿಕಿತ್ಸೆಯಿಂದ ಉಪಶಮನ ಲಭ್ಯ.

ವಿಪರೀತ ಹಲ್ಲು ನೋವು ಮತ್ತು ಹಲ್ಲುಗಳನ್ನು ಅಲುಗಾಡುವ ಸ್ಥಿತಿ ಉಂಟಾಗಲು ಒಂದು ಹಿಡಿ ತುಂಬಾ ಬೇರನ್ನು ಒಂದು ಲೀಟರ್ ನೀರಿನಲ್ಲಿ ಕಷಾಯವಿರಿಸಿ ಅರ್ಧಷ್ಟಕ್ಕೆ ಬತ್ತಿಸಿ ಅದಕ್ಕೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಿದರೆ ನೋವು ಕಡಿಮೆಯಾಗುವುದರ ಜೊತೆಗೆ ಹಲ್ಲುಗಳೆಲ್ಲ ಗಟ್ಟಿಯಾಗುತ್ತದೆ ಜೊತೆಗೆ ಒಸಡುಗಳ ಹಾಗೂ ಹಲ್ಲಿನ ಬುಡಗಳ ಹಾಗೂ ನೋವು ಮತ್ತು ಬಾಯಿ ವಾಸನೆಗಳು ಗುಣಹೊಂದುತ್ತವೆ ಎಂಬುದು ಪಂಡಿತರ ಅನುಭವ.

ಸಾಮಾನ್ಯವಾಗಿ ಸೈನಸೈಟಿಸ್ ಆದಾಗ ಸೈನಸ್ ಗಳಲ್ಲಿ ಕೀವು ತುಂಬಿ ಮದ್ದಿನಲ್ಲಿ ಅರದಾಗ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ, ಅಸಾಧ್ಯವಾದ ತಲೆನೋವಿನಿಂದ ರೋಗಿ ಯಾವುದೇ ಚಿಕಿತ್ಸೆಗೆ ತಲೆಒಡ್ಡಲು ಸಿದ್ಧನಾಗುತ್ತಾನೆ, ಆದರೆ ಶಸ್ತ್ರಚಿಕಿತ್ಸೆಯ ಇರಿಸುಮುರುಸು ಇಲ್ಲದೆ ಇದನ್ನು ತುಂಬೆಗಿಡದ ನೆರವಿನಿಂದ ಪೂರ್ಣವಾಗಿ ಗುಣಪಡಿಸಬಹುದೆಂದು ಡಾಕ್ಟರ್ ಸಾವಿತ್ರಿ ದೈತೋಟ ಅವರು ಪ್ರಕಟಿಸಿದ್ದಾರೆ ಇದರ ವಿಧಾನ ಹೀಗಿದೆ.

ಸೂರ್ಯೋದಯಕ್ಕೆ ಮೊದಲೇ ತುಂಬಿ ಗಿಡದ ಎಲೆ ಚಿಗುರು ತಂದು ಸ್ವಚ್ಛಗೊಳಿಸಿ ಚೆನ್ನಾಗಿ ಹಿಸುಕಿ ರೋಗಿಯನ್ನು ಕುತ್ತಿಗೆಯಡಿಗೆ ದಿಂಬನ್ನು ಆಧಾರವಾಗಿಸಿ ಗಡ್ಡವನ್ನು ಸ್ವಲ್ಪ ಮೇಲಕ್ಕೆತ್ತಿ ಮೂಗಿನ ಹೊಳ್ಳೆಗಳು ಸರಿಯಾಗಿ ಮೇಲ್ಮುಖವಾಗಿ ತೆರೆದುಕೊಳ್ಳುವಂತೆ ಮಲಗಿಸಿ ಪ್ರತಿ ಹೊಳೆಗಳಿಗೆ 6 ಬಿಂದು ತುಂಬ ರಸ ಹಿಂಡಬೇಕು, ಒಂದೆರಡು ನಿಮಿಷ ಹಾಗೆಯೇ ಮಲಗಿದ್ದು ಆಮೇಲೆ ಎದ್ದು ತಲೆಯನ್ನು ಸ್ವಲ್ಪ ಮುಂದಕ್ಕೆ ಬಾಗಿಸಿ ಒಳಗಿನಿಂದ ಹರಿದು ಬರುವ ಮೂಗಿನ ಸುರಿಯುವಿಕೆ ಸುಲಭವಾಗಿ ಹರಿಯುವಂತೆ ಕುಳಿತುಕೊಳ್ಳಬೇಕು, ಹರಿಯುವುದು ನಿಂತ ಮೇಲೆ ಮೂಗು ಸ್ವಚ್ಛಗೊಳಿಸಬೇಕು ಹೀಗೆ ಮೂರು ದಿನ ಹಾಕಬೇಕು ಈ ಪ್ರಕಾರವಾಗಿ ಮೂರು ನಾಲ್ಕು ಬಾರಿ ಮಾಡಿಕೊಂಡರೆ ಆಮೇಲೆ ಸೈನಸೈಟಿಸ್ ಆಗುವುದು ಕಡಿಮೆಯಾಗುತ್ತದೆ.

ತುಂಬೆ ಗಿಡದ ರಸ ಎರಡು ಬಿಂದು ಕಣ್ಣಿಗೆ ಹಾಕಿದರೆ 18 ರಿಂದ 24 ದಿನಗಳಲ್ಲಿ ದುರ್ಮಾಂಸದ ಮೊಳಕೆ ಕರಗುತ್ತದೆ. ಕೆಪ್ಪಟೆಕಾರು ಆದಾಗ ತುಂಬಾ ಎಲೆಯ ರಸಕ್ಕೆ ಸುಣ್ಣ ಹಾಕಿ ಕಲಿಸಿ ಅದನ್ನು ಆರಲು ಬಿಡದೆ ಹಾಗೆಯೆ ಲೇಪಿಸಬೇಕು ಮೂರರಿಂದ ನಾಲ್ಕು ಗಂಟೆ ಹಾಗೆ ಹಚ್ಚುತ್ತಿದ್ದು ಆಮೇಲೆ ತೊಳೆದು ತೆಗೆಯಬೇಕು ಇದರಿಂದ ನೋವು ಕಡಿಮೆಯಾಗುವುದಲ್ಲದೆ ಬಾವೂ ಬೇಗ ವಾಸಿಯಾಗುತ್ತದೆ.

LEAVE A REPLY

Please enter your comment!
Please enter your name here