ಮೊಡವೆ ನಿಮ್ಮ ಮುಖದ ಮೇಲೆ ಹೇಗೆ ಮೂಡುತ್ತವೆ ಗೊತ್ತಾ ?? ತ್ವಚೆಯಲ್ಲಿನ ಕೊಬ್ಬಿನ ಗ್ರಂಥಿಗಳಲ್ಲಿ ಬ್ಯಾಕ್ಟೇರಿಯಾ ಸೋಂಕಾಗಿ ಅದರಲ್ಲಿ ಊತ ಬಂದು ಕೀವುತುಂಬುತ್ತದೆ. ಈ ರೀತಿಯ ತ್ವಚೆಯ ಸೋಂಕನ್ನು ಮೊಡವೆಗಳೆಂದು ಕರೆಯುತ್ತಾರೆ. ಈ ಕೊಬ್ಬಿನ ಗ್ರಂಥಿಗಳಲ್ಲಿ ಅಧಿಕ ಸೆಬಮ್ ಉತ್ಪತ್ತಿಯಾಗಿ ಮೊಡವೆಗಳಿಗೆ ಕಾರಣವಾಗುತ್ತದೆ.
ಮೊಡವೆಗಳ ಚಿಕಿತ್ಸೆಗೆ ಕೆಲವು ಸಲಹೆಗಳು : ಬೇವು ಮತ್ತು ತುಳಸಿ ಎಲೆಗಳನ್ನು ಸಾಮಾನ್ಯವಾಗಿ ಮೊಡವೆಗಳ ಚಿಕಿತ್ಸೆಗಾಗಿ ಬಳಸುತ್ತಾರೆ. ಹಸಿ ಅಥವಾ ಒಣಗಿದ ಎಳೆಗಳ ಲೇಪನವನ್ನು 10 ನಿಮಿಷಗಳ ಕಾಲ ಮುಖದ ಮೇಲೆ ಹಚ್ಚಿಕೊಳ್ಳಿ ಮತ್ತು ಇದನ್ನು ವಾರಕ್ಕೆ 4-5 ಸಲ ಮಾಡಿದರೆ ಮೊಡವೆಗಳು ಕಡಿಮೆಯಾಗುತ್ತವೆ. ಬೇವಿನ ಎಲೆಯಲ್ಲಿರುವ ನಿಂಬಿನ್ ಎಂಬ ಅಂಶವು, ರೋಗನಿಯೋವಾರಕ, ಶಿಲಿಂಧ್ರ ನಿವಾರಕ ಮತ್ತು ನೋವು ನಿವಾರಕವೂ ಆಗಿರುವುದರಿಂದ ಇದು ಮೊಡವೆಗಳನ್ನು ಹೋಗಲಾಡಿಸಲು ಅತ್ಯುತ್ತಮ ಔಷಧಿಯಾಗಿದೆ.
ತುಳಸಿ ಬಳಸಿ ನಿಮ್ಮ ಮೊಡವೆಗಳನ್ನು ನಿವಾರಿಸಿಕೊಳ್ಳಬಹುದು, ತುಳಸಿಯಲ್ಲಿ ಯೂಗಿನಾಲ್ ಎಂಬ ಅಂಶವಿದ್ದು ಇದು ರೋಗನಿವಾರಕವಾಗಿದೆ. ತುಳಸಿ ರಸದ ಲೇಪನವನ್ನು ವಾರಕ್ಕೆ 4-5 ಬಾರಿ ಮೊಡವೆಗಳ ಮೇಲೆ ಹಚ್ಚುತ್ತಿರಿ. ಇದರ ಸುಂದು ಬರುವ ಗುಣದಿಂದ ನಿಮಗೆ ಮೊಡವೆಗಳಿಂದ ಆಗುವ ನೋವನ್ನು ಕ್ಷಣಾರ್ಧದಲ್ಲಿ ಕಡಿಮೆ ಮಾಡಿಕೊಳ್ಳಬಹುದು.
ಆಲೂಗೆಡ್ಡೆಯ ರಸ ಬ್ಲೀಚಿಂಗ್ ಗುಣವನ್ನು ಹೊಂದಿದ್ದು, ತ್ವಚೆಗೆ ಸೌಮ್ಯ ಬ್ಲೀಚ್ ನೀಡಿ ಕಾಂತಿಯುಕ್ತಮಾಡುತ್ತದೆ. ಆಲೂಗೆಡ್ಡೆಯಲ್ಲಿರುವ ವಿಟಮಿನ್ ಸಿ, ಬಿ6, ಕೆರೊಟಿನೋಯ್ಡ್ ಮತ್ತು ಅಂಥೋಸಿಯಾನಿನ್ಗಳು ತ್ವಚೆಯ ನೈಸರ್ಗಿಕ ಹೊಳಪಿಗಾಗಿ ಸಹಾಯ ಮಾಡುತ್ತದೆ ಹಾಗಾಗಿ ಆಲೂಗೆಡ್ಡೆ ರಸ ಅಥವಾ ಹೋಳು ಮಾಡಿದ ಅಥವಾ ತುರಿದ ಆಲೂಗೆಡ್ಡೆಯನ್ನು ನೇರವಾಗಿ ನಿಮ್ಮ ಮೊಡವೆಗಳಿಗೆ ಹಚ್ಚಿ, 10 ನಿಮಿಷಗಳ ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದುಕೊಳ್ಳಿರಿ.
ಜೇನುತುಪ್ಪ ಸೂಕ್ಷ್ಮರೋಗಾಣುನಿವಾರಕ ಆಗಿದೆ ಮತ್ತು ನಿಂಬೆರಸದಲ್ಲಿ ವಿಟಮಿನ್ ಸಿ ಹೆಚ್ಚಿರುವುದರಿಂದ ಇವೆರಡನ್ನೂ ಜೊತೆಯಲ್ಲಿ ಬಳಸುವುದರಿಂದ ಮೊಡವೆಗಳು ಶಮನವಾಗುವುದು. ತಾಜಾ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವನ್ನು ಒಂದೇ ಪ್ರಮಾಣದಲ್ಲಿ ಬೆರೆಸಿ ಮೊಡವೆಗಳ ಮೇಲೆ 10 ನಿಮಿಷಗಳ ವರೆಗೆ ಹಚ್ಚಿ ಮತ್ತು ನಂತರ ತೊಳೆದುಕೊಳ್ಳಿ. ಒಡೆದ ಮೊಡವೆಗಳ ಮೇಲೆ ಮಾತ್ರ ಹಚ್ಚಬೇಡಿ, ಅದು ಉರಿಯುವುದಕ್ಕೆ ಶುರು ಮಾಡುತ್ತದೆ.
ಹಸಿ ಪರಂಗಿಹಣ್ಣಿನ ಸಿಪ್ಪೆಯನ್ನು ಸಹ ಮೊಡವೆ ಚಿಕಿತ್ಸೆಗೆ ಬಳಸುತ್ತಾರೆ. ಹಸಿ ಪಪ್ಪಾಯದ ಸಿಪ್ಪೆಯನ್ನು ತೆಗೆದಾಗ ಅದರಲ್ಲಿ ಬರುವ ಬಿಳಿಯ ಹಾಲನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು 10 ನಿಮಿಷಗಳ ನಂತರ ಉಗುರುಬೆಚ್ಚಗಿನ ನೀರಿನಲ್ಲಿ ಅಥವಾ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಈ ಬಿಳಿಯ ಹಾಲಿನಲ್ಲಿ ಕಾರ್ಪಾಯಿನ್ ಎಂಬ ಅಂಶವಿದ್ದು, ಸೂಕ್ಷ್ಮ ರೋಗಾಣುಗಳ ಬೆಳವಣಿಗೆಯನ್ನು ತಡೆಗಟ್ಟುತ್ತದೆ ಅಷ್ಟೇ ಅಲ್ಲದೆ ಇದು ಕ್ಯಾನ್ಸರ್ ಅಂಗಾಂಶಗಳಾಗುವುದನ್ನು ತಡೆಗಟ್ಟುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.