ಭಾರತ ದೇಶದಲ್ಲಿ ಹಲವು ರೀತಿಯ ಆಚರಣೆಗಳಿವೆ, ಹಾಗೂ ಅದೇ ರೀತಿ ದೇವಾಲಯಗಳು ಇದೆ, ಪ್ರತಿಯೊಂದು ದೇವಾಲಯವು ತನ್ನದೇ ಆದ ವೈಶಿಷ್ಟ್ಯವನ್ನು ಹಾಗೂ ಇತಿಹಾಸವನ್ನು ಹೊಂದಿರುತ್ತದೆ, ಪ್ರತಿಯೊಂದು ದೇವಸ್ಥಾನದ ಹಿಂದೆಯೂ ಪುರಾಣದ ಕಥೆ ಇರುತ್ತದೆ, ಇವತ್ತು ನಾವು ನಿಮಗೆ ಹಿಮಾಲಯ ಪ್ರದೇಶದಲ್ಲಿ ಇರುವ ಒಂದು ಶಕ್ತಿಯುತ ದೇವಸ್ಥಾನದ ಬಗ್ಗೆ ಹಾಗೂ ಅದರ ವಿಶಿಷ್ಟ ಆಚರಣೆಗಳ ಬಗ್ಗೆ ತಿಳಿಸಿಕೊಡುತ್ತೇವೆ.
ನಮ್ಮ ಆಚರಣೆಯಲ್ಲಿ ಅಥವಾ ನಮ್ಮ ನಾಡಿನಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತೇವೆ, ಭೂಮಿತಾಯಿಯನ್ನು ಮಹಿಳೆಗೆ ಹೋಲಿಸಿ ಪೂಜೆಯನ್ನು ಮಾಡುತ್ತೇವೆ, ಸಕಲ ಪುಣ್ಯ ಕಾರ್ಯಗಳಿಗೂ ಮಹಿಳೆಯನ್ನು ಆಧರಿಸಿರುತ್ತವೆ, ಹೆಣ್ಣನ್ನು ದೇವತೆಯಾಗಿ ಕಾಣುತ್ತೇವೆ, ಆದರೆ ಆ ಹೆಣ್ಣಿಗೆ ಇದು ಯಾವುದೂ ಮುಖ್ಯವಲ್ಲ ಅವಳಿಗೆ ಸಂತಾನ ಹೊತ್ತು ತಾಯಿಯಾಗುವ ಆಸೆ ಅತಿ ಹೆಚ್ಚಾಗಿರುತ್ತದೆ ಇದರ ಮುಂದೆ ಉಳಿದವೆಲ್ಲ ಶೂನ್ಯ, ತಾಯಿಯಾದ ಹೆಣ್ಣನ್ನು ನಮ್ಮಲ್ಲಿ ತುಂಬಾ ಕೀಳಾಗಿ ನೋಡುತ್ತಾರೆ ಹಾಗೂ ಇತರ ಯಾವುದೇ ಕಾರ್ಯಗಳನ್ನು ಆಯ್ಕೆಯಿಂದ ಮಾಡಿಸುವುದಿಲ್ಲ.
ಆದರೆ ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಹಿಮಾಚಲ ಪ್ರದೇಶದ ಈ ಮಂದಿರದಲ್ಲಿ ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳಾಗುತ್ತವೆ ಎಂಬ ಕಾರಣಕ್ಕಾಗಿ ಅತಿ ಹೆಚ್ಚು ಪ್ರಸಿದ್ಧವಾಗಿದೆ, ಈ ದೇಗುಲಕ್ಕೆ ಅಲ್ಲಿನ ಭಕ್ತರು ಸಂತಾನಾದ್ರಿ ಎಂದು ಕರೆಯುತ್ತಾರೆ, ಮಕ್ಕಳಾಗದ ಮಹಿಳೆಯರು ನವರಾತ್ರಿಯ ದಿನದಂದು ಈ ಮಂದಿರದಲ್ಲಿ ಒಂದು ರಾತ್ರಿ ಮಲಗಿದರೆ ಅವರಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ಇಲ್ಲಿನ ಭಕ್ತರ ದೃಢವಾದ ನಂಬಿಕೆ.
ಈ ದೇವಾಲಯವು ಹಿಮಾಚಲಪ್ರದೇಶದ ಮಂಡಿ ಜಿಲ್ಲೆಯ ಲಡಬಡೋ ತಾಲೂಕಿನ ಸಿಮಸ್ ಊರಿನಲ್ಲಿದೆ, ಈ ದೇವಾಲಯದಲ್ಲಿ ಪೂಜಿಸಲ್ಪಡುವ ದೇವತೆಯ ಹೆಸರು ಸಿಮಾಸ, ಮಕ್ಕಳಿಲ್ಲದ ನೂರಾರು ಮಹಿಳೆಯರು ನವರಾತ್ರಿಯ ದಿನ ದೇವಾಲಯದಲ್ಲಿ ಮಲಗಲು ಬರುತ್ತಾರೆ ನಿಮಗೆ ಆಶ್ಚರ್ಯವಾಗಬಹುದು ರಾತ್ರಿ ಇಲ್ಲಿ ಮಲಗಿದ ಮಹಿಳೆಯರ ಕನಸಿನಲ್ಲಿ ಅವರಿಗೆ ಹುಟ್ಟುವ ಮಗುವಿನ ಲಿಂಗವು ತಿಳಿಯುತ್ತದೆ ಎಂದೆ, ಅದು ಯಾವ ರೀತಿ ಎಂದರೆ ಕನಸಿನಲ್ಲಿ ಸೀಬೆಹಣ್ಣು ಕಾಣಿಸಿಕೊಂಡರೆ ಅದು ಗಂಡು ಮಗು ಹಾಗೂ ಬೆಂಡೆಕಾಯಿ ಕಾಣಿಸಿಕೊಂಡರೆ ಅದು ಹೆಣ್ಣು ಮಗು ಎಂಬ ನಂಬಿಕೆಯನ್ನು ಇಲ್ಲಿನ ಭಕ್ತರು ಹೊಂದಿದ್ದಾರೆ.
ಇವರ ಯಾವ ನಂಬಿಕೆಯೂ ಇಂದಿಗೂ ಸುಳ್ಳಾಗಿಲ್ಲ, ಎಲ್ಲಾ ವಿಚಾರಗಳು ವಿಜ್ಞಾನಕ್ಕೆ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ, ಈ ರೀತಿಯ ಇನ್ನೂ ಅನೇಕ ವಿಶಿಷ್ಟ, ಆಚರಣೆಗಳು ಮತ್ತು ಇತಿಹಾಸವನ್ನು ಹೊಂದಿರುವ ಭಾರತದ ದೇವಾಲಯಗಳ ಬಗ್ಗೆ ನಮಗೆ ಮಾಹಿತಿಯನ್ನು ನೀಡುತ್ತವೆ, ತಪ್ಪದೇ ನಮ್ಮ ಫೇಸ್ಬುಕ್ ಖಾತೆಯನ್ನು ಲೈಕ್ ಮಾಡಿ ಹಾಗೂ ಹೆಚ್ಚಿನ ಮಾಹಿತಿಯನ್ನು ಪ್ರತಿದಿನ ಪಡೆಯಿರಿ, ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.