ಈ ಹಳ್ಳಿಯ ಸಂಪ್ರದಾಯ ನಿಮಗೆ ನಿಜವಾಗಿಯೂ ಅಚ್ಚರಿ ಮೂಡಿಸುತ್ತದೆ..!

0
8648

ಭಾರತ ದೇಶವು ಅನೇಕ ವೈವಿದ್ಯಮಯ ಆಚರಣೆಗಳಿಗೆ ಹೆಸರುವಾಸಿಯಾಗಿದೆ, ಹಲವು ರೀತಿಯ ಸಂಪ್ರದಾಯಗಳನ್ನು ನಾವು ನಮ್ಮ ದೇಶದಲ್ಲಿ ನೋಡಬಹುದು, ಇಂತಹ ಸಂಪ್ರದಾಯದಲ್ಲಿ ವಿಶಿಷ್ಟವಾಗಿ ಇರುವಂತಹ ರಾಜಸ್ಥಾನದ ಗೆರಾಸಿಯ ಎಂಬ ಸಂಪ್ರದಾಯದ ಬಗ್ಗೆ ಇಂದು ನಾವು ನಿಮಗೆ ತಿಳಿಸುತ್ತೇವೆ, ಇಲ್ಲಿಯ ಪುರುಷರು ತಮಗೆ ಇಷ್ಟಬಂದ ಹುಡುಗಿಯರ ಜೊತೆ ಲಿವಿಂಗ್ ರೆಲೇಶನ್ಶಿಪ್ ನಲ್ಲಿ ಇರಬಹುದು, ಇದಕ್ಕೆ ಇಲ್ಲಿನ ಹಿರಿಯರು ಅಭ್ಯಂತರ ಮಾಡುವುದಿಲ್ಲ ಹಾಗೂ ಇವರು ಇಷ್ಟಪಟ್ಟಲ್ಲಿ ಮಕ್ಕಳನ್ನು ಸಹ ಪಡೆಯಬಹುದು, ಮದುವೆ ಆಗದಿದ್ದರೂ ಇಲ್ಲಿನ ಯುವಕ-ಯುವತಿಯರು ಗಂಡ ಹೆಂಡತಿಯರಂತೆ ಸಂಸಾರ ಮಾಡಬಹುದು, ಮದುವೆಯೊಂದು ನಡೆದಿಲ್ಲ ಎನ್ನುವ ವಿಚಾರ ಬಿಟ್ಟರೆ ಉಳಿದೆಲ್ಲ ಮದುವೆಯಾದ ಗಂಡ ಹೆಂಡತಿಯರಂತೆ ಜೀವನ ಮಾಡುತ್ತಾರೆ.

ಈ ಸಂಪ್ರದಾಯವು ಇತಿಹಾಸಪೂರ್ವ ದಾಗಿದ್ದು ಎಲ್ಲಾ ಆಚರಣೆಗೆ ಹಿರಿಯರ ಒಪ್ಪಿಗೆ ಇರುತ್ತದೆ, ಈ ರೀತಿ ಲಿವಿಂಗ್ ರೆಲೇಶನ್ಶಿಪ್ ನಲ್ಲಿ ಇರುವ ಜೋಡಿಗೆ ಮಕ್ಕಳು ಪಡೆಯುವ ಪೂರ್ಣ ಸ್ವತಂತ್ರ ಇದೆಯಂತೆ, ಮದುವೆ ಬೇಕಾದರೆ ಆಮೇಲೆ ಮಾಡಿಕೊಳ್ಳಬಹುದು ಅಂತೆ, ಇದು ಗೆರಾಸಿ ಜನರ ಆಚಾರ, ಇವರ ಆಚರಣೆ ಎಷ್ಟು ವಿಶಿಷ್ಟವಾಗಿದೆ ಯು ಅದೇ ರೀತಿ ಇವರ ವೇಷವು ಅಷ್ಟೇ ವಿಚಿತ್ರವಾಗಿರುತ್ತದೆ, ಇಲ್ಲಿನ ಹೆಣ್ಣುಮಕ್ಕಳು ಗಾಢ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ.

ಇಲ್ಲಿನ ಸಂಪ್ರದಾಯದಲ್ಲಿ ಮೂರು ವಿಧದ ಮದುವೆ ಚಾಲ್ತಿಯಲ್ಲಿದೆ, ಅದರಲ್ಲಿ ಮೊದಲನೆಯದು ಮೌರ್ ಬಾದಿಯ ಈ ಪ್ರಕಾರದ ಮದುವೆಯಲ್ಲಿ ಸಪ್ತಪದಿ ರೀತಿ ಎಲ್ಲಾ ಆಚರಣೆಗಳು ಇರುತ್ತದೆ, ಪಹಾರವನ ವಿವಾಹ ಹೆಸರಿಗೆ ಮಾತ್ರ ಈ ವಿಧಾನದಲ್ಲಿ ವಿಧಿ ವಿಧಾನಗಳು ನಡೆಯುತ್ತವೆ, ಕನಾನ ವಿವಾಹ ಈ ವಿಧಾನದಲ್ಲಿ ವರನ ಕಡೆಯವರಿಗೆ ವಧುವಿನ ಕಡೆಯವರು ಕನ್ಯೆಯನ್ನು ಉಡುಗೊರೆ ರೂಪದಲ್ಲಿ ನೀಡುತ್ತಾರೆ.

LEAVE A REPLY

Please enter your comment!
Please enter your name here