ನಾವು ಯಾವುದಾದರೂ ಬಹಳ ಮುಖ್ಯವಾದ ಪೂಜೆಯನ್ನು ಮಾಡಿಸುತ್ತೇವೆ ಎಂದರೆ ಹಿಂದಿನ ದಿನವೇ ನಮಗೆ ಪುರೋಹಿತರು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳಲು ಹೇಳುತ್ತಾರೆ ಅದರ ಜೊತೆಯಲ್ಲಿ ಆಹಾರದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸಬಾರದು ಎಂದು ಹೇಳುತ್ತಾರೆ, ಇನ್ನು ನಮ್ಮ ಹಿರಿಯರು ಹಬ್ಬ-ಹರಿದಿನಗಳು ಬಂದರೆ ಅತಿಹೆಚ್ಚಾಗಿ ಈರುಳ್ಳಿಯನ್ನು ಬಳಸುವುದಿಲ್ಲ, ಹಾಗಾದರೆ ಈರುಳ್ಳಿ ಮಾಂಸಾಹಾರವೇ ಯಾಕೆ ಈ ರೀತಿ ಮಾಡುತ್ತಾರೆ, ಈ ರೀತಿಯ ಎಷ್ಟೋ ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಇದ್ದರೆ ಇಂದು ಇದರ ಸಂಪೂರ್ಣ ವಿವರ ನೀಡುತ್ತೇವೆ.
ನಮ್ಮ ಸಂಪ್ರದಾಯದಲ್ಲಿ ಪೂಜಾ ಸಾಮಗ್ರಿಗಳಿಗೆ ಅದರದೇ ಆದ ವಿಶಿಷ್ಟತೆ ಇದೆ, ಹಾಗೂ ಕೆಲವು ಕ್ರಮಬದ್ಧವಾದ ರೀತಿಯೂ ಇದೆ ಜೊತೆಯಲ್ಲಿ ಎಲ್ಲಾ ಪೂಜಾ ಸಾಮಗ್ರಿ ಗಳಿಗೂ ಪೌರಾಣಿಕ ಹಿನ್ನೆಲೆ ಕೂಡ ಇದೆ, ಅದೇ ರೀತಿ ಕೆಲವು ವಸ್ತುಗಳನ್ನು ದೇವರ ಪೂಜಾ ಕಾರ್ಯಕ್ರಮದಲ್ಲಿ ಬಳಕೆ ಮಾಡುವಂತಿಲ್ಲ, ಅದರಲ್ಲೂ ದೇವರ ಪೂಜೆಗೆ ಇಡುವ ನೈವೇದ್ಯದಲ್ಲಿ ಈರುಳ್ಳಿಯ ಬಳಕೆ ಮಾಡುವಂತಿಲ್ಲ ಕಾರಣ ಹೀಗಿದೆ.
ಸಮುದ್ರ ಮಂಥನದ ಸಮಯದಲ್ಲಿ ಸಮುದ್ರದಿಂದ ಹಲವಾರು ವಸ್ತುಗಳು ಹೊರಗೆ ಬಂದಿದ್ದು ನಿಮಗೆ ತಿಳಿದಿರುವ ವಿಷಯ, ಈ ರೀತಿ ಸಮುದ್ರದಿಂದ ಅಮೃತ ಕಲಶ ಕೂಡ ಉದ್ಭವವಾಗುತ್ತದೆ, ಈ ಅಮೃತವನ್ನು ಹಂಚಿಕೊಳ್ಳಲು ದೇವತೆಗಳು ಮತ್ತು ರಾಕ್ಷಸ ಗಣಗಳು ಇವರಿಬ್ಬರ ನಡುವೆ ಘೋರ ಯುದ್ಧವೇ ನಡೆದು ಹೋಗುತ್ತದೆ, ಇಂತಹ ಸಂದರ್ಭದಲ್ಲಿ ಗರುಡನು ಅಮೃತದ ಕಲಶವನ್ನು ತೆಗೆದುಕೊಂಡು ಹೋಗುತ್ತಾನೆ, ದೇವತೆಗಳಲ್ಲ ಇದನ್ನು ಗಮನಿಸಿ ಶ್ರೀಮನ್ನಾರಾಯಣನನ್ನು ಪ್ರಾರ್ಥನೆ ಮಾಡುತ್ತಾರೆ, ಆಗಲೇ ಶ್ರೀಮನ್ನಾರಾಯಣ ಮೋಹಿನಿಯ ರೂಪದಲ್ಲಿ ಬಂದು ರಾಕ್ಷಸರ ಕಣ್ಣುತಪ್ಪಿಸಿ ದೇವತೆಗಳಿಗೆ ಅಮೃತ ಹಂಚುತ್ತಾನೆ.
ಇದನ್ನು ಹೇಗೋ ತಿಳಿದು ಅಸುರ ರಾಹು-ಕೇತು ವೇಷಮರೆಸಿಕೊಂಡು ದೇವತೆಗಳ ರೂಪದಲ್ಲಿ ಅಮೃತ ಕುಡಿಯುತ್ತಾರೆ, ಸೂರ್ಯಚಂದ್ರರು ಇದನ್ನು ಗಮನಿಸಿ ನಾರಾಯಣರಿಗೆ ವರದಿ ಒಪ್ಪಿಸುತ್ತಾರೆ, ಕೋಪಗೊಂಡ ನಾರಾಯಣ ರಾಹುವಿನ ತಲೆ ಕತ್ತರಿಸುತ್ತಾನೆ ಅಷ್ಟರಲ್ಲಾಗಲೇ ರಾಹು ಗಂಟಲಿನವರೆಗೂ ಅಮೃತ ಬಂದಿರುತ್ತದೆ ಆದ್ದರಿಂದ ತಲೆ ಸಾಯುವುದಿಲ್ಲ, ಹೀಗೆ ಈತನ ತಲೆ ಕತ್ತರಿಸುವಾಗ ಬಾಯಿಯಲ್ಲಿದ್ದ ಅಮೃತಬಿಂದು ಇಂದ ಈರುಳ್ಳಿ ಮತ್ತು ಬೆಳ್ಳುಳ್ಳಿ ಹುಟ್ಟಿಕೊಂಡವು ಎಂದು ಹೇಳಲಾಗುತ್ತದೆ.
ರಾಕ್ಷಸನ ಬಾಯಿಗೆ ಬಿಂದುವಿನಿಂದ ಬಿದ್ದು ಹುಟ್ಟಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಅವರ ಎಂಜಲು ಆದ್ದರಿಂದ ದುರ್ಗಂಧ ಹಾಗೂ ಅಪವಿತ್ರ ಎಂದು ಎರಡನ್ನು ತಾಮಸಿಕ ಆಹಾರದ ಗುಂಪಿಗೆ ಸೇರಿಸಲಾಗಿದೆ, ಇದೇ ಕಾರಣಕ್ಕಾಗಿಯೇ ದೇವತೆಗಳ ಕಾರ್ಯದಲ್ಲಿ ಅಥವಾ ಪೂಜಾಸಮಯದಲ್ಲಿ ಮಾಡುವ ನೈವೇದ್ಯಕ್ಕೆ ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಬಳಸಬಾರದು ಎನ್ನಲಾಗಿದೆ, ನಾವು ತಿನ್ನುವ ಆಹಾರವೇ ನಮ್ಮ ಸ್ವಭಾವವನ್ನು ನಿರ್ಧರಿಸುತ್ತದೆ, ತಾಮಸವಲ್ಲದ ಆಹಾರ ಸೇರಿಸುವುದರಿಂದ ಮನಸ್ಸು ಕೆಟ್ಟಯೋಚನೆ ಕಡೆ ಗಮನ ಹರಿಸುವುದಿಲ್ಲ.