ನೀರು ಮನುಷ್ಯನ ದೇಹಕ್ಕೆ ಅತ್ಯವಶ್ಯಕ, ಊಟವಿಲ್ಲದೆ ನಾವು ದಿನ ಕಳೆಯಬಹುದು ಆದರೆ ನೀರಿಲ್ಲದೆ ಕಳೆಯಲು ಸಾಧ್ಯವಿಲ್ಲ ದೇಹಕ್ಕೆ ನೀರು ಅಷ್ಟು ಮುಖ್ಯ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ದೇಹ ಅನೇಕ ರೋಗಗಳಿಂದ ಮುಕ್ತಿ ಪಡೆಯಬಹುದು, ಇಂತಹ ನೀರನ್ನು ನಾವು ಯಾವಾಗ ಕುಡಿಬೇಕು ಎಷ್ಟು ಪ್ರಮಾಣದಲ್ಲಿ ಕುಡಿಬೇಕು ಎಂಬುವುದನ್ನು ತಿಳಿಯುವುದು ಅತ್ಯವಶ್ಯಕ ಅಂತಹ ಒಂದು ಉಪಯುಕ್ತ ಮಾಹಿತಿಯನ್ನು ಇಂದು ನಾವು ನಿಮಗೆ ತಿಳಿಸುತ್ತೇವೆ.
ಬೆಳಿಗ್ಗೆ ಎದ್ದ ತಕ್ಷಣ : ಹೌದು ನೀವು ಬೆಳಗ್ಗೆ ನಿದ್ರೆಯಿಂದ ಎದ್ದ ತಕ್ಷಣ ಹಲ್ಲು ಉಜ್ಜದೆ ಅಥವಾ ಬಾಯಿ ತೊಳೆಯದೆ ಒಂದು ಲೋಟ ನೀರನ್ನು ಕುಡಿಯಬೇಕು ಕಾರಣ ಆ ಸಮಯದಲ್ಲಿ ನಿಮ್ಮ ಬಾಯಿಯಲ್ಲಿ ಲಾಲಾರಸ ಉತ್ಪತ್ತಿಯಾಗಿರುತ್ತದೆ ಇದು ನೀವು ಕುಡಿಯುವ ನೀರಿನ ಜೊತೆ ಮಿಶ್ರಣವಾಗಿ ದೇಹವನ್ನು ಸೇರಬೇಕು ಕಾರಣ ರಾತ್ರಿ ಮಲಗಿದ್ದಾಗ ಹೊಟ್ಟೆಯಲ್ಲಿ ಬಹಳ ಪ್ರಮಾಣದಲ್ಲಿ ಆಸಿಡ್ ಉತ್ಪತ್ತಿಯಾಗುತ್ತದೆ ಜೊತೆಯಲ್ಲಿ ಟಾಕ್ಸಿನ್ ಸಹ ಬಿಡುಗಡೆಯಾಗುತ್ತದೆ ಲಾಲಾರಸ ಟಾಕ್ಸಿನ್ ನನ್ನು ದೇಹದ ಹೊರಗೆ ಹಾಕಲು ಸಹಾಯ ಮಾಡುತ್ತದೆ ಇದರಿಂದ ಮಲ ಸಂಪೂರ್ಣವಾಗಿ ದೇಹದಿಂದ ಹೊರಕ್ಕೆ ಬರುತ್ತದೆ ಬಹುಮುಖ್ಯವಾಗಿ ಈ ಕ್ರಿಯೆಯಿಂದ ಮಾನವ ದೇಹ ಹಲವು ಕಾಯಿಲೆಗಳಿಂದ ಮುಕ್ತಿ ಪಡೆಯುತ್ತದೆ.
ಅಷ್ಟೇ ಅಲ್ಲದೇ ಪ್ರತಿದಿನ ಮಲಬದ್ಧತೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿದ್ದರೆ ಮನುಷ್ಯನ ಮೆದುಳು ಕ್ರಿಯಾಶೀಲವಾಗಿ ಇರುತ್ತದೆ ಪ್ರತಿದಿನ ಆತನ ಆಲೋಚನೆ ಹಾಗೂ ಜೀವನ ಶೈಲಿಯ ಉತ್ತಮವಾಗಿರುತ್ತದೆ ಅದರ ಜೊತೆಯಲ್ಲಿ ಪೈಲ್ಸ್ ಸಮಸ್ಯೆ ಇದ್ದರೆ ಅದು ಸಹ ಈ ರೀತಿ ಮಾಡುವುದರಿಂದ ಕಡಿಮೆಯಾಗುತ್ತದೆ ಇನ್ನು ಕೆಲವರು ತಮ್ಮ ಇಂಜಿನನ್ನು ಅಂದರೆ ಲಾಲಾ ರಸವನ್ನು ಆಚೆ ಉಗಿಯುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ ಇದು ನಿಜವಾಗಿಯೂ ಕೆಟ್ಟ ಅಭ್ಯಾಸ ಇದರಿಂದ ಅಂಥವರು ಬಹುಬೇಗ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಹಾಗೂ ಅನಾರೋಗ್ಯದಿಂದ ಹೊರಬರಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ.
ಉದಾಹರಣೆಗೆ ನಮ್ಮ ಕೈಬೆರಳುಗಳು ಗಾಯವಾದಾಗ ನಾವು ತಕ್ಷಣ ಆ ಬೆರಳನ್ನು ಬಾಯಿಯಲ್ಲಿ ಇಟ್ಟುಕೊಳ್ಳುತ್ತೇವೆ ಮತ್ತು ಪ್ರಾಣಿಗಳನ್ನು ಗಮನಿಸಿದರೆ ಅವಕ್ಕೆ ಗಾಯವಾದಾಗ ಅವು ತಮ್ಮ ನಾಲಿಗೆಯಿಂದ ಅದನ್ನು ಸ್ವಚ್ಛ ಮಾಡುತ್ತದೆ ಹಾಗೂ ಗಾಯ ಸಹ ಬೇಗ ವಾಸಿಯಾಗುತ್ತದೆ ಇನ್ನು ಕೆಲವು ಸಂಶೋಧನೆಗಳು ಹೇಳುವ ಪ್ರಕಾರ ಲಾಲಾರಸ ದಲ್ಲಿ ನೋವು ನಿವಾರಿಸುವ ಗುಣವಿದೆ ಎಂದು ಹೇಳಲಾಗುತ್ತದೆ.
ಈ ರೀತಿ ಬೆಳಗ್ಗೆ ಎದ್ದು ತಕ್ಷಣ ನೀರು ಕುಡಿಯುವುದರಿಂದ ಮುಖದಲ್ಲಿರುವ ಮೊಡವೆಗಳು, ಗುಳ್ಳೆಗಳು ಕಡಿಮೆಯಾಗುತ್ತದೆ ಜೊತೆಯಲ್ಲಿ ಕಪ್ಪು ಕಲೆಗಳು ಹಾಗೂ ಕೆಂಪು ಕಲೆಗಳು ವಾಸಿಯಾಗುತ್ತದೆ ಇನ್ನು ಕೆಲವರಿಗೆ ಮುಖದ ಚರ್ಮ ಜಿಡ್ಡಿನಿಂದ ಕೂಡಿರುತ್ತದೆ ಅಂತವರು ಸಹ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಇಂತಹ ಸಮಸ್ಯೆಗಳಿಂದ ದೂರವಿರಬಹುದು ಅಷ್ಟೇ ಅಲ್ಲದೆ ಕಣ್ಣಿನ ಸುತ್ತ ಇರುವ ಕಪ್ಪು ಕಲೆಯನ್ನು ಸಹ ಈ ರೀತಿ ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಕಡಿಮೆ ಮಾಡಿಕೊಳ್ಳಬಹುದು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಖಂಡಿತ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.