ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಮಂತ್ರಿಗೆ ಬಂತು ಸೋಂಕು..!

0
2368

ಕೊರೊನಾ ಅರಿವು ಮೂಡಿಸುತ್ತಿದ್ದ ಆರೋಗ್ಯ ಮಂತ್ರಿಗೆ ಬಂತು ಸೋಂಕು, ತನ್ನ ದೇಶದ ಜನತೆಗೆ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದ ಇಂಗ್ಲೆಂಡ್ ಆರೋಗ್ಯ ಸಚಿವೆಗೂ ಕೊರೊನಾ ವೈರಸ್ ಬಂದಿರುವುದು ಅವರ ಹೆಲ್ತ್ ಚೆಕಪ್ ಮಾಡಿದ ನಂತರ ತಿಳಿದು ಬಂದಿದೆ.

ಆರೋಗ್ಯ ಸಚಿವೆ ನಾಡಿನ್ ಡೋರಿಸ್‍ಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ವಿಷಯ ತಿಳಿದು ಬಂದ ಕೂಡಲೇ ಸ್ವತಃ ನಾಡಿನ್ ಡೋರಿಸ್ ಅವರೇ ಮನೆಯಿಂದ ಹೊರಗೆ ಬರೆದೇ ಗೃಹ ಬಂಧನದಲ್ಲಿದ್ದಾರೆ.

ನಾಡಿನ್ ಡೋರಿಸ್ ಅವರಿಗೆ ಕಳೆದ ಗುರುವಾರ ರೋಗದ ಲಕ್ಷಣಗಳು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಆದರೆ ರೋಗದ ಲಕ್ಷಣ ಕಾಣಿಸಿಕೊಂಡ ದಿನವೇ ನಾಡಿನ್ ಅವರು ಇಂಗ್ಲೆಂಡ್ ಪ್ರಧಾನ ಮಂತ್ರಿಯವರು ಆಯೋಜನೆ ಮಾಡಿದ್ದ ಒಂದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದ್ದರಿಂದ ಅವರ ಬಳಿ ಸಂಪರ್ಕದಲ್ಲಿ ಇದ್ದ ಎಲ್ಲರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಾಡಿನ್ ಡೋರಿಸ್ ಅವರು, ನನಗೆ ಕೊರೊನಾ ಇರುವುದು ತಿಳಿದ ನಂತರ ಗುಣಮುಖರಾಗಿ ಎಂದು ಶುಭಕೊರಿದ ಎಲ್ಲರಿಗು ಧನ್ಯವಾದಗಳು. ಮುಂದೆ ಎಲ್ಲ ಸರಿ ಹೋಗುತ್ತದೆ. ಆದರೆ ನನ್ನ ಜೊತೆಯಲ್ಲೇ ಇದ್ದ ನನ್ನ 84 ವರ್ಷದ ಅಮ್ಮನಿಗೆ ಕೂಡ ಇಂದು ಕೆಮ್ಮು ಕಾಣಿಸಿಕೊಂಡಿದೆ. ಆಕೆಯನ್ನು ನಾಳೆ ವೈದ್ಯರು ಪರೀಕ್ಷಿಸಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಈ ವೈರಸ್ ಈಗ ವಿಶ್ವದೆಲ್ಲೆಡೆ ಕಾಣಿಸಿಕೊಂಡಿದೆ. ಚೀನಾದಲ್ಲಿ 80,778 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಭಾರತದಲ್ಲಿ ಸುಮಾರು 61 ಮಂದಿಗೆ ಕೊರೊನಾ ಬಂದಿದೆ.

LEAVE A REPLY

Please enter your comment!
Please enter your name here