ಮಹಾ ಶಕ್ತಿ ಶಾಲಿ ಮೈಸೂರು ರಸ್ತೆಯ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಗ್ಗೆ ನಿಮಗೆ ಗೊತ್ತಿಲ್ಲದ ಅಚ್ಚರಿಗಳು!

0
1935

ಗಾಳಿ ಆಂಜನೇಯ ದೇವಸ್ಥಾನವು ಬ್ಯಾಟರಾಯಣಪುರ, ಮೈಸೂರು ರಸ್ತೆ, ಬೆಂಗಳೂರಿನಲ್ಲಿ ಸುಮಾರು 1400 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಮತ್ತು ಚನ್ನಪಟ್ಟಣದ ಶ್ರೀ ವ್ಯಾಸರಾಯರ ಸಹಾಯದಿಂದ ನಿರ್ಮಿಸಲಾಗಿದೆ. ಈ ದೇವಾಲಯವನ್ನು ಹಿಂದೂ ದೇವರಾದ ಹನುಮಂತನಿಗೆ ಸಮರ್ಪಿಸಲಾಗಿದೆ. ದೇವಾಲಯದಲ್ಲಿ ಆಂಜನೇಯ ಪ್ರತಿಮೆಯನ್ನು ಉಡುಪಿಯ ಸಾಲಿಗ್ರಾಮದಲ್ಲಿ ನಿರ್ಮಿಸಲಾಗಿದೆ, ದೇವಸ್ಥಾನದಲ್ಲಿ ಭಗವಂತನು ಅತ್ಯಂತ ಶಕ್ತಿಯುತವಾದವನು ಮತ್ತು ಭಕ್ತರ ಕೋರಿಕೆಗಳನ್ನು ಪೂರೈಸುವ ಕರುಣಾಮಹಿಮನು. ಇಡೀ ವರ್ಷ ಈ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯುತ್ತದೆ ಮತ್ತು ಧಾರ್ಮಿಕ ಹಬ್ಬಗಳ ಆಚರಣೆಯು ನಡೆಯುತ್ತದೆ.

ದೇವಾಲಯದಲ್ಲಿ ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ನಾಲ್ಕನೇ ಕಂಬವಿದ್ದು ಇದೊಂದು ಐತಿಹಾಸಿಕ ಹಿನ್ನೆಲೆಯಾಗಿದೆ. ಬೆಂಗಳೂರಿನ ಸಂಸ್ಥಾಪಕರು ನಾಲ್ಕು ಸ್ತಂಭಗಳಿಂದ ಬೆಂಗಳೂರಿಗೆ ಒಂದು ಚೌಕವನ್ನು ಹೊಂದಿಸಿದ್ದರು, ಆ ಸ್ತಂಭದಲ್ಲಿ ನಾವು ಒಂದ್ದನ್ನು ಗಾಳಿ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ ನೋಡಬಹುದು.

ಹನುಮಂತನ ವಿಗ್ರಹ : ಪಶ್ಚಿಮದ ಕಡೆ ತಿರುಗಿರುವ ಹನುಮ ಯಾವಾಗಲು ಸಿಂಧೂರದಿಂದ ಅಲಂಕೃತವಾಗಿರುತ್ತಾನೆ, ಶಾಂತ ಸ್ವರೂಪಿಯಾದ ಹನುಮ ಮಂಗಳಕಾರಕನು ಹೌದು. ತನ್ನ ಎಡಗೈ ನಲ್ಲಿ ಹೂವನ್ನು ಹಿಡಿದಿರುವ ಮತ್ತು ಬಲಗೈ ತನ್ನ ಭಕ್ತರಿಗೆ ಅಭಯ ಮುದ್ರಾ ನೀಡುವ ನಿಲುವನ್ನು ನೋಡಬಹುದು.

ಈ ಆಂಜನೇಯನ ಮತ್ತೊಂದು ಆಕರ್ಷಣೆಯಂದರೆ ಭಗವಂತನು ಮೀಸೆಯನ್ನು ಹೊಂದಿದ್ದಾನೆ ಮತ್ತು ಯಥುರುಮುಕಿಯಾಗಿದ್ದಾನೆ, ಭಕ್ತರನ್ನು ನೇರವಾಗಿ ಎರಡೂ ಕಣ್ಣುಗಳೊಂದಿಗೆ ನೋಡುವ ಮೂರ್ತಿ ಇದಾಗಿದೆ. ಬಾಲವು ಅನೇಕ ಸುರುಳಿಗಳನ್ನು ಹೊಂದಿದೆ ಮತ್ತು ಕೊನೆಯಲ್ಲಿ ಸುತ್ತಿಕೊಳ್ಳುತ್ತದೆ, ಇಲ್ಲಿ ಗಾಳಿ ಆಂಜನೇಯ ಶಾಂತ ಸ್ವರೂಪಿ ಎಂದು ಸೂಚಿಸುತ್ತದೆ. ಆಂಜನೇಯನ ವಿಗ್ರಹದ ಬಾಲಕ್ಕೆ ಒಂದು ಸಣ್ಣ ಗಂಟೆಯನ್ನು ಕಟ್ಟಲಾಗಿದೆ ಅದು ವ್ಯಾಸರಾಯರ ಸೂಚನೆಯನ್ನು ನೀಡುತ್ತದೆ.

ಗಾಳಿ ಆಂಜನೇಯ ದೇವಸ್ಥಾನದ ವಿಶಿಷ್ಟತೆಯು ಭಕ್ತರು ತಮ್ಮ ಕಷ್ಟ ನಿವಾರನೆಗೆಂದು ಇಲ್ಲಿ ಬರುವರು ಮತ್ತು ರಾಜಕಾರಣಿಗಳು ಎಲೆಕ್ಷನ್ ಗಿಂತ ಮುಂಚೆ ಇಲ್ಲಿ ಬಂದು ಆಶೀರ್ವಾದ ಪಡೆಯುತ್ತಾರೆ, ಬಹು ಮುಖ್ಯವಾಗಿ ಇಲ್ಲಿ ದೊರೆಯುವ ಯಂತ್ರವನ್ನು ಮಕ್ಕಳಿಗೆ ಅಥವಾ ಜನರಿಗೆ ಕಟ್ಟುವುದರಿಂದ ದುಷ್ಟ ಶಕ್ತಿಗಳಿಂದ ಮುಕ್ತಿಯನ್ನು ಪಡೆಯಬಹುದು.

ಈ ಮಾಹಿತಿ ನಿಮಗೆ ಇಷ್ಟವಾದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here