ಅತಿ ಹೆಚ್ಚು ಚಿನ್ನ ಹೊಂದಿರುವ ಪ್ರಪಂಚದ 10 ದೇಶಗಳು ಯಾವುದು ಗೊತ್ತಾ? ನಮ್ಮ ದೇಶದ ಬಳಿ ಎಷ್ಟಿದೆ ?

0
3087

ಬಂಗಾರ ಎಂದರೆ ಯಾರಿಗೆ ಆಸೆ ಇಲ್ಲ ಹೇಳಿ, ಹೊಳೆಯುವ ಚಿನ್ನ ಕಣ್ಣನ್ನು ಪಳಪಳ ಎಂದು ಬಿಟ್ಟು ನೋಡುವಂತೆ ಮಾಡುತ್ತದೆ, ಹೀಗಿರುವಾಗ ಬರೀ ಸಾಮಾನ್ಯ ಜನರು ಮಾತ್ರವಲ್ಲದೆ ದೊಡ್ಡ ದೊಡ್ಡ ದೇಶಗಳು ಬಂಗಾರದ ಕ್ರೋಡೀಕರಣಕ್ಕೆ ಹೆಚ್ಚಿನ ಒಲವು ನೀಡುತ್ತದೆ, ಹಾಗಾದರೆ ಜಗತ್ತಿನಲ್ಲಿ ಇರುವ ಯಾವ ದೇಶಗಳು ಅತಿ ಹೆಚ್ಚು ಬಂಗಾರ ವನ್ನು ಹೊಂದಿದೆ ಎಂಬುದರ ಬಗ್ಗೆ ಇಂದು ಟಾಪ್ ಟೆನ್ ವರದಿ ನಿಮಗಾಗಿ ನೀಡುತ್ತಿದ್ದೇವೆ.

10ನೇ ಸ್ಥಾನ : ಜಗತ್ತಿನಲ್ಲಿ 10ನೇ ಸ್ಥಾನ ನಮ್ಮ ಭಾರತ ದೇಶಕ್ಕೆ ಸಿಕ್ಕಿದೆ, ಭಾರತದ ಬಳಿ ಸದ್ಯ 557.7 ಟನ್ ಚಿನ್ನ ವಿದೆ, ಅಂದರೆ ಅತಿ ಹೆಚ್ಚು ಬಂಗಾರವನ್ನು ಬಂದಿರುವ ದೊಡ್ಡ ಮಳಿಗೆಗಳಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕೂಡ ಒಂದು, ಭಾರತದಲ್ಲಿ 125 ಕೋಟಿ ಜನಸಂಖ್ಯೆ ಇರುವುದರಿಂದ ಚಿನ್ನಕ್ಕಾಗಿ ಬೇಡಿಕೆಯೂ ಹೆಚ್ಚಿದೆ, ಹಾಗೂ ದಕ್ಷಿಣ ಏಷ್ಯಾದ ದೇಶಗಳಲ್ಲಿ ಭಾರತಕ್ಕೆ ಮೊದಲ ಸ್ಥಾನವಿದೆ, ಅದರಲ್ಲೂ ಅಕ್ಟೋಬರ್ ಅಥವಾ ಡಿಸೆಂಬರ್ ಅವಧಿ ಹಬ್ಬ ಮತ್ತು ಮದುವೆ ಸಮಾರಂಭಗಳ ಸಮಯದಲ್ಲಿ ಚಿನ್ನಾಭರಣಗಳಿಗೆ ಐತಿಹಾಸಿಕ ಬೇಡಿಕೆ ಸೃಷ್ಟಿಯಾಗುತ್ತದೆ.

9ನೇ ಸ್ಥಾನ : ಒಂಬತ್ತನೆಯ ಸ್ಥಾನವನ್ನು ಅಲಂಕರಿಸುವುದು ನೆದರ್ಲ್ಯಾಂಡ್, ಈ ದೇಶದ ಬಳಿ ಒಟ್ಟು 612.5 ತಂ ಬಂಗಾರವಿದೆ, ಇದೇ ಕಾರಣಕ್ಕಾಗಿಯೇ ಲ್ಯಾಂಡ್ ಅತಿ ಹೆಚ್ಚು ಚಿನ್ನವನ್ನು ಕೂಡಿಟ್ಟಿರುವ 9ನೇ ದೇಶವಾಗಿ ಸ್ಥಾನ ಪಡೆದಿದೆ.

ಎಂಟನೇ ಸ್ಥಾನ : 765.2 ಟನ್ ಬಂಗಾರವನ್ನು ಹೊಂದುವ ಮೂಲಕ ಜಪಾನ್ 8 ನೇ ಸ್ಥಾನವನ್ನು ಅಲಂಕರಿಸಿದೆ, ಜಪಾನಿನ ಸೆಂಟ್ರಲ್ ಬ್ಯಾಂಕ್ ಚಿನ್ನದ ಮಳಿಗೆ ಯಾಗಿದ್ದು, ವಿಶ್ವದಾದ್ಯಂತ ಚಿನ್ನದ ಬೇಡಿಕೆಯನ್ನು ಇದು ಹೊಂದಿದೆ.

ಏಳನೇ ಸ್ಥಾನ : ಬಂಗಾರದ ನಿಕ್ಷೇಪವನ್ನು ಹೊಂದಿರುವ ಯೋಳನೇ ದೇಶ ಸ್ವಿಜರ್ಲ್ಯಾಂಡ್, ಈ ದೇಶದ ಬಳಿ 1040 ಟನ್ ಚಿನ್ನವಿದೆ, ಈ ದೇಶ ಎರಡನೇ ವಿಶ್ವ ಯುದ್ಧ ಸಮಯದಲ್ಲಿ ಯುರೋಪಿನ ಚಿನ್ನದ ವ್ಯಾಪಾರ ನಡೆಸುವ ದೇಶವಾಗಿ ಮಾರ್ಪಾಡಾಯಿತು, ಮುಖ್ಯವಾಗಿ ಈ ದೇಶದ ವಹಿವಾಟು ಹಾಂಕಾಂಗ್ ಮತ್ತು ಚೀನಾ ದೇಶಗಳ ನಡುವೆ ನಡೆಯುತ್ತದೆ.

ಆರನೇ ಸ್ಥಾನ : ಆರನೇ ಸ್ಥಾನವನ್ನು ರಷ್ಯಾ ತನ್ನ ಪಾಲಾಗಿ ಸಿ ಕೊಂಡಿದೆ, ರಷ್ಯಾದ ಬಳಿ ಒಟ್ಟು 1460.4 ಟನ್ ಬಂಗಾರವಿದೆ, ನಿಮಗೆ ತಿಳಿದಿರಲಿ ಸಸ್ಯ ಹಲವು ವರ್ಷಗಳಿಂದ ತನ್ನ ದೇಶದಲ್ಲಿ ಬಂಗಾರವನ್ನು ಸಂಗ್ರಹ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಿದೆ, ಈ ದೇಶ 2015ರಲ್ಲಿ ಉನ್ನತ ಖರೀದಿದಾರ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ, ಚಿನ್ನದ ವಹಿವಾಟಿನಲ್ಲಿ ರಶ್ಯಾ ತನ್ನದೇ ಛಾಪನ್ನು ಹೊಂದಿದೆ.

ಐದನೇ ಸ್ಥಾನ : ಚೀನಾ ದೇಶ 1797.5 ಟನ್ ಬಂಗಾರದ ಮುಂದಿಂದು ಐದನೇ ಸ್ಥಾನವನ್ನು ಪಡೆದಿದೆ, ಚೀನಾ ಕೂಡ 2009ರಿಂದ ಮಾಸಿಕ ಬೇಸಿಸ್ ನಲ್ಲಿ ಚೀನಾ ಪೀಪಲ್ ಸ್ಪ್ಯಾಂಕ್ ಚಿನ್ನ ಖರೀದಿ ಮಾಡುವ ಚಟುವಟಿಕೆಗಳನ್ನು ಶುರುಮಾಡಿದೆ.

ನಾಲ್ಕನೇ ಸ್ಥಾನ : ಫ್ರಾನ್ಸ್ ಸೆಂಟರ್ ಬ್ಯಾಂಕ್ ಕಳೆದ ಹಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ತನ್ನ ಚಿನ್ನವನ್ನು ಮಾರಾಟ ಮಾಡಿದೆ, ಫ್ರಾನ್ಸ್ ದೇಶದ ಬಳಿ ಸದ್ಯ ಒಟ್ಟು 2434.7 ಟನ್ ಬಂಗಾರವನ್ನು ಹೊಂದುವ ಮುಖಾಂತರ 4ನೇ ಸ್ಥಾನ ಅಲಂಕರಿಸಿದೆ.

ಮೂರನೇ ಸ್ಥಾನ : ಇಟಲಿ ದೇಶವು 2451.8 ಟನ್ ಬಂಗಾರವನ್ನು ಹೊಂದಿತ್ತು ಟಾಪ್ ತ್ರೀ ಸ್ಥಾನದಲ್ಲಿ ಜಾಗ ಪಡೆದಿದೆ, ಈ ದೇಶವು ಹಲವು ವರ್ಷಗಳಿಂದ ತನ್ನ ಮೀಸಲು ಗಾತ್ರ ಕಾಪಾಡಿಕೊಂಡು ಜಾಗೃತವಾದ ಹೆಜ್ಜೆಯನ್ನು ಇಡುತ್ತಿದೆ.

ಎರಡನೇ ಸ್ಥಾನ : ಎರಡನೆಯ ಸ್ಥಾನವೂ ಜರ್ಮನಿ ದೇಶ ತನ್ನದಾಗಿಸಿಕೊಂಡಿದೆ, ಈ ದೇಶದ ಬಳಿ ಒಟ್ಟು 3381 ಟನ್ ಬಂಗಾರವಿದೆ, ಈ ದೇಶವು ವಿದೇಶಿ ಸಂಗ್ರಹಣ ಕೇಂದ್ರಗಳಿಂದ ಹಾಗೂ ನ್ಯೂಯಾರ್ಕ್ ಮತ್ತು ಪ್ಯಾರಿಸ್ ದೇಶಗಳಿಂದ ತನ್ನ ಬಂಗಾರವನ್ನು ಸ್ವದೇಶಕ್ಕೆ ಮರಳಿ ಪಡೆಯುವ ಪ್ರಕ್ರಿಯೆ ಶುರು ಮಾಡಿದೆ.

ಮೊದಲನೇ ಸ್ಥಾನ : ಅಮೆರಿಕ ಮೊದಲನೇ ಸ್ಥಾನವನ್ನು ಅಲಂಕರಿಸಿದ್ದರು, ಈ ದೇಶದ ಬಳಿ ಒಟ್ಟು 8133.5 ಟನ್ ಬಂಗಾರವಿದೆ, ಜಗತ್ತಿಗೆ ದೊಡ್ಡಣ್ಣ ನಾಗಿರುವ ಅಮೆರಿಕ ಎಲ್ಲಾ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿದ್ದು, ಅತಿ ಹೆಚ್ಚು ಬಂಗಾರವನ್ನು ಹೊಂದಿರುವ ದೇಶ, ಹಾಗೂ ಜಗತ್ತಿನ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ.

LEAVE A REPLY

Please enter your comment!
Please enter your name here