ಎಚ್ಚರ ಕುಂಕುಮ ಹಚ್ಚಿಕೊಳ್ಳಲು ತಪ್ಪಾದ ಬೆರಳು ಬಳಸ ಬೇಡಿ..!!

0
1956

ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ.

ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ.

ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ.

ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾಗಿ ಅವರಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ:

ಕುಂಕುಮದಲ್ಲಿ ತಾರಕ ಮತ್ತು ಮಾರಕ ಶಕ್ತಿಯನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯಿದೆ. ಸ್ತ್ರೀಯರ ಆತ್ಮಶಕ್ತಿಯು ಜಾಗೃತವಾದರೆ ಆ ಶಕ್ತಿಯಲ್ಲಿ ಕಾರ್ಯಕ್ಕನುಸಾರ ದೇವಿಯ ತಾರಕ ಅಥವಾ ಮಾರಕ ತತ್ತ್ವವನ್ನು ಆಕರ್ಷಿಸುವ ಪ್ರಚಂಡ ಕ್ಷಮತೆಯು ನಿರ್ಮಾಣವಾಗುತ್ತದೆ. ದೇವಿಯ ಕೃಪಾಶೀರ್ವಾದವು ಸಿಗಬೇಕೆಂದು ಸ್ತ್ರೀಯರು ಭ್ರೂಮಧ್ಯದಲ್ಲಿ ಕುಂಕುಮವನ್ನು ಹಚ್ಚಿಕೊಂಡಾಗ ಅಥವಾ ಇತರ ಸ್ತ್ರೀಯರು ಹಚ್ಚಿದಾಗ ಅವರಲ್ಲಿನ ತಾರಕ ಶಕ್ತಿತತ್ತ್ವದ ಸ್ಪಂದನಗಳು ಜಾಗೃತವಾಗುತ್ತವೆ ಮತ್ತು ವಾತಾವರಣದಲ್ಲಿನ ಶಕ್ತಿತತ್ತ್ವದ ಪವಿತ್ರಕಗಳು ಆ ಸ್ತ್ರೀಯರತ್ತ ಆಕರ್ಷಿತವಾಗುತ್ತವೆ.

ಸ್ತ್ರೀ-ಪುರುಷರು ಕುಂಕುಮ ಏಕೆ ಮತ್ತು ಹೇಗೆ ಹಚ್ಚಬೇಕು?

ಶಾಸ್ತ್ರ : ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಬ್ರಹ್ಮಾಂಡದಲ್ಲಿನ ಚೈತನ್ಯವು ಆಕರ್ಷಿತವಾಗುತ್ತದೆ ಮತ್ತು ಕಡಿಮೆ ಸಮಯದಲ್ಲಿ ವ್ಯಕ್ತಿಯ ಭಾವಜಾಗೃತಿಯಾಗುತ್ತದೆ. ಕುಂಕುಮದಿಂದ ಕೆಟ್ಟ ಶಕ್ತಿಗಳಿಂದ ರಕ್ಷಣೆಯಾಗುತ್ತದೆ. ಆದುದರಿಂದ ಸ್ತ್ರೀಯರು ಬಿಂದಿಗಿಂತ ಕುಂಕುಮವನ್ನು ಹಚ್ಚಿಕೊಳ್ಳಬೇಕು.

ಪದ್ಧತಿ : ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು. ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here