ನಮಗೆ ಬಿಕ್ಕಳಿಗೆ ಬಂದಾಗಲೆಲ್ಲ ಯಾರೋ ನಿನ್ನ ನೆನಪು ಮಾಡಿಕೊಳ್ತಿದ್ದಾರೆ ಅಂತಾ ಅಮ್ಮ ಅಜ್ಜಿ ಹೇಳಿದ್ದನ್ನ ಹಾಗು ಹಲವಾರು ಹೇಳಿದ್ದನ್ನ ಕೇಳಿರುತ್ತೇವೆ, ನಾವು ಈಗಲೂ ಅದನ್ನೇ ಪಾಲಿಸುತ್ತ ಇದ್ದೇವೆ, ಆದರೆ ಅಸಲಿಗೆ ಕಾರಣವೆ ಬೇರೆ ಇದೆ ಎಂಬುದು ಹಲವರಿಗೆ ತಿಳಿದಿಲ್ಲ, ಬಿಕ್ಕಳಿಕೆ ಬಂದರೆ ಸಾಕು ಯಾರೋ ನೆನೆಸಿಕೊಳ್ಳುತ್ತಾ ಇದ್ದಾರೆ, ಇಲ್ಲವೇ ಯಾರೋ ಬೈಕೊಳ್ಳುತ್ತ ಇದ್ದಾರೆ ಎಂದುಕೊಳ್ಳುತೇವೆ, ಇದು ನಮ್ಮ ಹಿರಿಯರು ಮಾಡಿರುವ ಕಾರಣ, ಆದರೆ ಇದಕ್ಕೆ ವೈಜ್ಞಾನಿಕವಾಗಿ ಕಾರಣ ಬೇರೇನೇ ಇದೆ.
ಸ್ನಾಯು ಹೊಟ್ಟೆಯಿಂದ ಎದೆಯ ಗೂಡನ್ನೂ ಬೇರ್ಪಡಿಸಿದಾಗ ಅದಕ್ಕೆ ಒಂದು ರೀತಿಯಾ ತೊಂದರೆ ಉಂಟಾದಾಗ ಈ ರೀತಿ ಶಬ್ಧ ಮಾಡುತ್ತದೆ, ಕೇವಲ ಇದೊಂದೇ ಕಾರಣವಲ್ಲ ಅತ್ಯಂತ ವೇಗವಾಗಿ ಏನನ್ನಾದ್ರೂ ತಿಂದ್ರೆ, ಕುಡಿದ್ರೆ, ಅತಿಯಾದ ಆಸಕ್ತಿ ಅಥವಾ ಥ್ರಿಲ್ ಇದ್ರೆ, ಹೊಟ್ಟೆಯಲ್ಲಿ ಒಂದು ರೀತಿಯ ಕಿರಿಕಿರಿ ಇದ್ದರೆ ಬಿಕ್ಕಳಿಕೆ ಬರುತ್ತದೆ. ಪಾರ್ಶ್ವಶೂಲೆ, ನ್ಯುಮೋನಿಯಾ, ಹೊಟ್ಟೆ ಅಥವಾ ಅನ್ನನಾಳ ಸಮಸ್ಯೆ, ಮದ್ಯಪಾನ ಮತ್ತು ಹೆಪಟೈಟಿಸ್ ನಂತಹ ಅಸ್ವಸ್ಥತೆಯಿಂದ್ಲೂ ಬಿಕ್ಕಳಿಕೆ ಬರುವ ಸಾಧ್ಯತೆ ಇರುತ್ತದೆ.
ಈ ಬಿಕ್ಕಳಿಕೆಯನ್ನು ಕಡಿಮೆ ಮಾಡುವ ಉಪಾಯ ಇಲ್ಲಿದೆ ನೋಡಿ. ಬಿಕ್ಕಳಿಕೆ ಬಂದಾಕ್ಷಣ ಗಾಬರಿಯಾಗುವ ಅಗತ್ಯವಿಲ್ಲ. ಒಂದು ಚಮಚ ಸಕ್ಕರೆ ಅಥವಾ ಜೇನುತುಪ್ಪ ತಿಂದು ನೀರು ಕುಡಿಯಿರಿ. ಇದರಿಂದ ನರಗಳ ಒತ್ತಡ ಕಡಿಮೆಯಾಗಿ ಸಡಿಲಗೊಳ್ಳುತ್ತವೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.