ಮಹದೇಶ್ವರ ಸ್ವಾಮಿಯ ಈ ಜಾತ್ರೆ ನಡೆಯುವಾಗ ಮಹಿಳೆಯರಿಗೆ ಅವಾಕಾಶ ಇಲ್ಲ ಯಾಕೆ ಗೊತ್ತಾ ?

0
409

ಊರಿನ ಜಾತ್ರೆ ಎಂದರೆ ಸಾಕು ಮನೆಯಲ್ಲಿರುವ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಎಲ್ಲರಿಗೂ ಸಂಭ್ರಮವೇ, ಮುಂಜಾನೆಯೆದ್ದು ಇಡೀ ಮನೆಯನ್ನು ಸ್ವಚ್ಛಗೊಳಿಸಿ ಮನೆಯಲ್ಲಿ ಹಬ್ಬದ ಊಟವನ್ನು ಮಹಿಳೆಯರು ತಯಾರು ಮಾಡುತ್ತಾರೆ ಇತ್ತ ಪುರುಷರು ಮನೆಗೆ ಬೇಕಾದ ಪೂಜೆ ಸಾಮಗ್ರಿಗಳನ್ನು ಮಕ್ಕಳಿಗೆ ಮತ್ತು ಎಲ್ಲರಿಗೂ ಹೊಸಬಟ್ಟೆಗಳನ್ನು ತಂದುಕೊಡುತ್ತಾರೆ ಹೊಟ್ಟಿನಲ್ಲಿ ಊರಿನ ಜಾತ್ರೆ ಎಂದರೆ ಮನೆಯ ಪ್ರತಿಯೊಬ್ಬರಿಗೂ ಸಂತಸದ ವಿಷಯವೇ, ಆದರೆ ನಮ್ಮ ಕರ್ನಾಟಕದ ಒಂದು ಊರಿನಲ್ಲಿ ಜಾತ್ರೆ ನಡೆದರೆ ಇಲ್ಲಿ ಮಹಿಳೆಯರಿಗೆ ಅವಕಾಶವೇ ಇಲ್ಲ ಬರಿ ಪುರುಷರೇ ಈ ಜಾತ್ರೆಯನ್ನು ನಡೆಸಿಕೊಡಬೇಕು ಹೌದು ಈ ಊರಿನ ಬಗ್ಗೆ ಹಾಗೂ ಇಲ್ಲಿಯ ದೇವರ ಬಗ್ಗೆ ನಾವು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ದಾವಣಗೆರೆಯ ಸುತ್ತಲೂ ಇರುವ ಊರಿನಲ್ಲಿ ನಡೆಯುವ ಯಾವುದೇ ಮಹದೇಶ್ವರ ಜಾತ್ರೆಗೆ ಮಹಿಳೆಯರಿಗೆ ಅವಕಾಶವಿಲ್ಲ ಇಲ್ಲಿ ಪುರುಷರು ಜಾತ್ರೆಯನ್ನು ನಡೆಸಿಕೊಡಬೇಕು, ದೇವರ ಅಲಂಕಾರ ಜೊತೆಗೆ ಅಡುಗೆ ಮಾಡಿ ಊಟ ಮಾಡುವುದು ಗಂಡಸರೇ, ಆದ್ದರಿಂದಲೇ ಇಲ್ಲಿ ನಡೆಯುವ ಈ ಜಾತ್ರೆ ಪುರುಷರ ಜಾತ್ರೆ ಎಂದೇ ಪ್ರಸಿದ್ಧಿ ಪಡೆದಿದೆ, ಬಸಾಪುರದ ಮಹೇಶ್ವರ ಸ್ವಾಮಿ ಜಾತ್ರೆಯ ಗ್ರಾಮದಿಂದ ಎರಡು ಕಿಲೋಮೀಟರ್ ದೂರದಲ್ಲಿ ನಡೆಯುತ್ತದೆ ಕಾರಣ ಮಹೇಶ್ವರ ಸ್ವಾಮಿ ಉಗ್ರ ದೇವರೆಂದು ಇಲ್ಲಿ ನಂಬುತ್ತಾರೆ, ಹಾಗೂ ತಾವು ಮಾಡುವ ಯಾವುದೇ ತಪ್ಪಿಗೂ ಉಗ್ರವಾದ ಶಿಕ್ಷೆ ಖಚಿತ ಎಂದು ನಂಬುತ್ತಾರೆ.

ಆದ್ದರಿಂದಲೇ ಮಹೇಶ್ವರ ಸ್ವಾಮಿಯ ಜಾತ್ರೆ ಅಥವಾ ಪೂಜೆಯನ್ನು ಬಹಳ ನಿಷ್ಠೆಯಿಂದ ಜಾಗೃತಿಯಿಂದ ಮಾಡುತ್ತಾರೆ, ನಿಮಗೆ ಅಚ್ಚರಿಯಾಗಬಹುದು ಈ ಜಾತ್ರೆ ಸರಿ ಸುಮಾರು 400 ವರ್ಷಗಳ ಇತಿಹಾಸವನ್ನು ಹೊಂದಿದೆ, ಇದೊಂದು ಕರ್ನಾಟಕದ ಹಳೆಯ ಸಂಪ್ರದಾಯವಾಗಿದೆ, ಮಹಿಳೆಯರಿಗೆ ಮಾತ್ರವಲ್ಲದೆ ಈ ಜಾತ್ರೆಯಲ್ಲಿ ಸಣ್ಣ ಹೆಣ್ಣುಮಕ್ಕಳಿಗೂ ಬರುವ ಅವಕಾಶವಿಲ್ಲ, ಪ್ರತಿ ಮನೆಯ ಹಿರಿಯ ಮಗ ಈ ಜಾತ್ರೆಗೆ ಕಡ್ಡಾಯವಾಗಿ ಬರಲೇಬೇಕು, ಹೆಂಗಸರು ಎಂದರೆ ಆಗದ ಈ ದೇವರಿಗೆ ದೇವಸ್ಥಾನವು ಇಲ್ಲ ದೊಡ್ಡ ಮರಗಳ ಕೆಳಗೆ ದೇವರಿಗೆ ಪೂಜೆ ನಡೆಯುತ್ತದೆ.

ಈ ಜಾತ್ರೆಗೆ ಎಷ್ಟೇ ಭಕ್ತಾದಿಗಳು ಬಂದರು ಪ್ರತಿಯೊಬ್ಬರಿಗೂ ಊಟದ ವ್ಯವಸ್ಥೆ ಇರುತ್ತದೆ, ಈ ಜಾತ್ರೆಯಲ್ಲಿ ವಿಶೇಷವಾಗಿ ಅನ್ನ ಸಾಂಬಾರ್ ಮತ್ತು ಬಾಳೆಹಣ್ಣಿನ ಪ್ರಸಾದ ನೀಡಲಾಗುವುದು, ಅದರಲ್ಲೂ ಬಾಳೆಹಣ್ಣನ್ನು ಪ್ರತಿಯೊಬ್ಬರು ಇಲ್ಲಿ ಬಂದು ಕಡ್ಡಾಯವಾಗಿ ಪ್ರಸಾದವಾಗಿ ಸ್ವೀಕರಿಸಿ ತಿನ್ನಲೇಬೇಕು ಬಾಳೆ ಮಹೇಶ್ವರ ಸ್ವಾಮಿಯ ಪ್ರತಿಭಾವಂತೆ, ಇಲ್ಲೊಂದು ಬಾವಿ ಇದೆ ಈ ಬಾವಿಗೆ ಬಾಳೆಹಣ್ಣನ್ನು ಬಿಡಲಾಗುತ್ತದೆ, ಯಾವುದೇ ಕಾರಣಕ್ಕೂ ಬಾಳೆಹಣ್ಣುಗಳು ಮುಳುಗೋದಿಲ್ಲ ಏನಾದರೂ ಮುಳುಗಿದರೆ ಊರಿಗೆ ಆಪತ್ತು ಖಂಡಿತ ಎಂದು ಇಲ್ಲಿನ ಭಕ್ತರು ಬಲವಾಗಿ ನಂಬುತ್ತಾರೆ.

ಜಾಹಿರಾತು : ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಪೀಠಂ ಪ್ರಧಾನ ಗುರೂಜಿ ಶ್ರೀ ಗಜೇಂದ್ರ ಅವಧಾನಿ. ಸಾಧ್ಯವಾದದ್ದು ಇಲ್ಲಿ ಸಾಧ್ಯ. ನಂಬಿದರೆ ನಂಬಿ ಇದು ಸತ್ಯ ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಕರೆ ಮಾಡಿ 95350 04448 ಹಲವಾರು ದೀರ್ಘಕಾಲದ ಸಮಸ್ಯೆಗಳಿಗೆ ಎರಡು ದಿನದಲ್ಲಿ ಪರಿಹಾರ ಶತಸಿದ್ಧ.

LEAVE A REPLY

Please enter your comment!
Please enter your name here