ಭಾರತದ ಕರೆನ್ಸಿ ನೋಟುಗಳು ಹೇಗೆ ಮತ್ತು ಎಲ್ಲೆಲ್ಲಿ ಪ್ರಿಂಟ್ ಆಗುತ್ತೆ ನೋಡಿ!

0
2588

1950ರ ಆಗಸ್ಟ್‌ 15ರ ನಂತರ ನೋಟುಗಳಲ್ಲಿ ಮತ್ತು ನಾಣ್ಯಗಳಲ್ಲಿ ಬ್ರಿಟಿಷ್‌ ಆಡಳಿತಗಾರರ ಚಿತ್ರದ ಬದಲಿಗೆ ಅಶೋಕ ಸ್ತಂಭದ ಚಿತ್ರ ಮುದ್ರಿಸಲಾಯಿತು. ಅಲ್ಲಿಂದ ಮುಂದೆ ಭಾರತೀಯ ಹಣಕಾಸು ವ್ಯವಸ್ಥೆ ಮತ್ತೊಂದು ಹಂತಕ್ಕೆ ಕಾಲಿರಿಸಿತು. (ಆಣೆ ವ್ಯವಸ್ಥೆಯಲ್ಲಿ ಒಂದು ರೂಪಾಯಿ ಎಂದರೆ 16 ಆಣೆ (ಅಥವಾ 96(ಕಾಸು) ಪೈಸೆ ಆಗಿತ್ತು).

1955ರಲ್ಲಿ ಭಾರತೀಯ ನಾಣ್ಯ ಪದ್ಧತಿ ಕಾಯ್ದೆಗೆ ತಿದ್ದುಪಡಿ ಮಾಡಲಾಯಿತು. 1957ರ ಏಪ್ರಿಲ್‌ 1ರಿಂದ ಜಾರಿಗೆ ಬಂತು. ಒಂದು ರೂಪಾಯಿ ಎಂದರೆ 100 ಪೈಸೆ ಎಂಬ ಮಾನದಂಡವನ್ನು ಅಂದಿನಿಂದ ಅನುಸರಿಸಲಾಯಿತು. ಅಂಧರಿಗೂ ಗುರುತಿಸಲು ಸುಲಭವಾಗುವ ರೀತಿಯಲ್ಲಿ ವಿವಿಧ ಆಕಾರದ ನಾಣ್ಯಗಳನ್ನು ಆರ್‌ಬಿಐ ಬಿಡುಗಡೆ ಮಾಡಿತು. 1969ರಲ್ಲಿ ಮಹಾತ್ಮ ಗಾಂಧಿ ಅವರ ಜನ್ಮಶತಮಾನೋತ್ಸವದ ಗೌರವಾರ್ಥ ಅವರ ಚಿತ್ರವಿರುವ ನೋಟುಗಳನ್ನು ಬಿಡುಗಡೆಗೊಳಿಸಲಾಯಿತು.

2010ರ ಜುಲೈನಲ್ಲಿ ರೂಪಾಯಿಗೆ ಒಂದು ಚಿಹ್ನೆಯೂ ಸಿಕ್ಕಿತು. ಆ ಮೂಲಕ ಕರೆನ್ಸಿಗೆ ಚಿಹ್ನೆ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಸಾಲಿಗೆ ಭಾರತವೂ ಸೇರಿತು. ಅದಕ್ಕೂ ಮೊದಲು ರೂ, Rs ಎಂದೆಲ್ಲ ಬರೆಯಲಾಗುತ್ತಿತ್ತು. ಈಗ ಈ “₹” ಚಿಹ್ನೆ (ಮೇಲೆ ಅಂಕಣದಲ್ಲಿ ದೊಡ್ಡದಾಗಿ ಕೊಟ್ಟಿದೆ.) ಉಪಯೋಗಿಸಬಹುದು. ಉದಯ ಕುಮಾರ್‌ ಧರ್ಮಲಿಂಗಂ ಎಂಬುವವರು ಈ ಚಿಹ್ನೆಯ ವಿನ್ಯಾಸಕಾರ.

ಹಾಗಾದರೆ ಇಂದಿನ ಹೊಸ ನೋಟುಗಳನ್ನು ಎಲ್ಲಿ ಮುದ್ರಿಸುತ್ತಾರೆ ಹಾಗು ಹೇಗೆ ಮುದ್ರಿಸುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ತುಂಬಿರುವ ವಿಡಿಯೋ ಈ ಕೆಳಗೆ ನೀಡಿದ್ದು ತಪ್ಪದೆ ಸಂಪೂರ್ಣವಾಗಿ ನೋಡಿ, ಕಾಮೆಂಟ್ ಮೂಲಕ ನಿಮ್ಮ ಅನಿಸಿಕೆ ತಿಳಿಸಿ.

LEAVE A REPLY

Please enter your comment!
Please enter your name here