ನೋಡ ನೋಡುತ್ತಿದ್ದಂತೆ ಸಮುದ್ರದಲ್ಲಿ ಮುಳುಗುತ್ತೆ ಶಿವನ ಈ ದೇವಸ್ತಾನ!

0
2619

ಈ ಹಿಂದೆ ಶಿವನ ಲಿಂಗವನ್ನು ಸಮುದ್ರ ದೇವಾ ಬಂದು ಸ್ಪರ್ಶ ಮಾಡುವುದನ್ನು ನಾವು ನಿಮಗೆ ತಿಳಿಸಿದ್ದೆವು ಆದರೆ ಇಂದು ತೋರಿಸುತ್ತಿರುವುದು ಶಿವ ದೇವಾಲಯವೇ ಆದರೆ ಅದು ಬೇರೆ ಇದು ಬೇರೆ ದೇವಾಲಯ ಇಲ್ಲಿಯ ವಿಸ್ಮಯ ನಿಮಗೆ ಇನ್ನು ಆರ್ಚರ್ಯವನ್ನು ಶಿವನ ಮೇಲೆ ಭಕ್ತಿಯನ್ನು ಹಿಮ್ಮಡಿ ಗೊಳಿಸುವುದಲ್ಲಿ ಯಾವ ಸಂಶಯವೂ ಇಲ್ಲ.

ಮಹಾಭಾರತ ಯುದ್ಧವು ಕೊನೆಗೊಂಡಂತೆ, ಪಾಂಡವರು ತಮ್ಮ ಸಂಬಂಧಿಕರನ್ನು ಕೊಲ್ಲುವುದರ ಮೂಲಕ ಪಾಪ ಮಾಡಿದ್ದರಿಂದ ದೈವಿಕ ಅಸಮಾಧಾನವಿತ್ತು, ಇದಕ್ಕಾಗಿ ಅವರು ಕೃಷ್ಣ ಪರಮಾತ್ಮನನ್ನು ಭೇಟಿ ಮಾಡಲು ನಿರ್ಧರಿಸಿದರು. ಕೃಷ್ಣನು ಅವರಿಗೆ ಕಪ್ಪು ಹಸು ಮತ್ತು ಕಪ್ಪು ದ್ವಜವನ್ನು ನೀಡಿ ಈ ಹಸು ಮತ್ತು ದ್ವಜ ಬಣ್ಣ ಬದಲಿಸಿ ಬಿಳಿಯಾದರೆ ನಿಮ್ಮ ಪಾಪ ಪರಿಹಾರವಾಗುತ್ತದೆ ಎಂದು ತಿಳಿಸಿದನು, ಮತ್ತು ಶಿವನ್ನನ್ನು ಬೇಡಿ ತಪಸ್ಸು ಮಾಡಲು ಹೇಳಿದನು, ನಂತರ ಪಾಂಡವರು ಆ ಹಸುವನ್ನು ಹಿಂಬಾಲಿಸುತ್ತಿದ್ದರು ಮತ್ತು ಅವರು ಧ್ವಜವನ್ನು ಹೊತ್ತೊಯ್ಯುತ್ತಿದ್ದರು ಮತ್ತು ಗುಜರಾತಿನ ಭಾವನಗರದಲ್ಲಿರುವ ಕೊಲಿಯಕ್ ಕಡಲತೀರವನ್ನು ತಲುಪಿದಾಗ, ಹಸು ಮತ್ತು ಧ್ವಜ ಎರಡೂ ಬಣ್ಣವನ್ನು ಬದಲಾಯಿಸಿದವು. ಪಾಂಡವರ ಭಕ್ತಿಯಿಂದ ಪ್ರಭಾವಿತನಾದ ಶಿವನು ದರ್ಶನ ಕೊಟ್ಟನು.

ಪಾಂಡವರು ಈ ದೇವಸ್ಥಾನವನ್ನು ಅಮವಾಸ್ಯೆ ಅಥವಾ ಭದ್ರಾ ತಿಂಗಳಲ್ಲಿ ಸ್ಥಾಪಿಸಿದ್ದಾರೆ ಎಂದು ನಂಬಲಾಗಿದೆ, ಮತ್ತು ಪ್ರತಿ ವರ್ಷವೂ ಈ ದೇವಸ್ಥಾನದಲ್ಲಿ ಭದಾರ್ವಿ ಎಂಬ ಹೆಸರಿನ ಪ್ರಸಿದ್ಧ ಜಾತ್ರೆ ನಡೆಯುತ್ತದೆ.

ಈ ದೇವಸ್ಥಾನದ ಬಗ್ಗೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ, ಈ ದೇವಸ್ಥಾನವು ಸಮುದ್ರದ ಮಧ್ಯದಲ್ಲಿ ನೆಲೆಗೊಂಡಿದೆ ಮತ್ತು ದೇವಸ್ಥಾನಕ್ಕೆ ಪ್ರವೇಶಿಸಲು ಸಮುದ್ರದ ನೀರು ಹಿಂದಕ್ಕೆ ಹೋಗವುದನ್ನು ಕಾಯಬೇಕು, ಸಮುದ್ರದ ನೀರು ಕೆಲವೇ ಗಂಟೆಗಳ ಕಾಲ ಮಾತ್ರ ಹಿಮ್ಮೆಟ್ಟುತ್ತದೆ ಮತ್ತು 7 ಗಂಟೆ ನಂತರ, ದೇವಸ್ಥಾನ ಮತ್ತೆ ಅಲೆಗಳ ಕೆಳಗೆ ಮುಚ್ಚಿಹೋಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here