ಜಗತ್ತಿನಲ್ಲಿ ಬಹುತೇಕ ಪುರಾತನ ದೇವಾಲಯಗಳನ್ನು ಒಮ್ಮೆ ಗಮನಿಸಿದರೆ ಅದರಲ್ಲಿ ಹಲವು ಶಿವನ ದೇವಾಲಯವೇ ಇರುತ್ತದೆ, ಶಿವನಿಗೆ ಹಲವು ಹೆಸರುಗಳು ಆದರೆ ಶಿವ ಅನ್ನುವ ಹೆಸರಿನಲ್ಲಿ ಬಹಳಷ್ಟು ಅರ್ಥವಿದೆ. ಶಿವ ಶಬ್ದಕ್ಕೆ ಸಂಸ್ಕೃತದಲ್ಲಿ ಮಂಗಳ ಎನ್ನುವ ಅರ್ಥವನ್ನು ಹೇಳುವರಾದರೂ, ಈ ಶಬ್ದಕ್ಕೆ ಸಂಸ್ಕೃತದಲ್ಲಿ ಸರಿಯಾದ ವ್ಯುತ್ಪತ್ತಿಯು ಇನ್ನೂ ನಿಶ್ಚಯವಾಗಿಲ್ಲ. ಶಿವ ಶಬ್ದವು ಮೂಲದಲ್ಲಿ ಸಂಸ್ಕೃತ ಭಾಷೆಯ ಶಬ್ದವೇ ಅಲ್ಲ. ಆದುದರಿಂದಲೇ ಈ ಶಬ್ದಕ್ಕೆ ನಿರುಕ್ತ ದೊರೆಯು ವುದಿಲ್ಲ ಎಂದು ದ್ರಾವಿಡ ಭಾಷಾತಜ್ಞರು ಹೇಳುತ್ತಾರೆ. ಶಿವ ಎಂದರೆ ಮಾಯಾ, ನಿರಹಂಕಾರ, ಬಂಧರಹಿತ ಎನ್ನಲಾಗಿದೆ.
ಮೂಲ ದ್ರಾವಿಡ ಭಾಷೆಯಲ್ಲಿ ಶೆನ್, ಶಿನ್ ಎಂಬ ಬೀಜ ಶಬ್ದಗಳು ಇವೆ ಹಾಗು ಈ ಶಬ್ದಗಳಿಗೆ ಕೆಂಪು ಎನ್ನುವ ಅರ್ಥ ಇದೆ. ಆದ್ದರಿಂದ ಶಿವ ಶಬ್ದವು ಶೆನ್, ಶಿನ್ ಶಬ್ದದಿಂದಲೇ ಹುಟ್ಟಿದೆ ಎಂದು ಅಭಿಪ್ರಾಯ ಪಡುತ್ತಾರೆ. ಶಿನ್ (ದಂತೆ ಇರುವ) ಅವನೇ ಶಿವನು ಎಂದು ಹೇಳಿ, ಶಿವನನ್ನು ಕೆಂಪಗೆ ಇರುವ ದೇವತೆ ಎನ್ನುತ್ತಾರೆ, ಋಗ್ವೇದ ಭಾಷ್ಯದಲ್ಲಿ ಸಾಯಣರು ರುದ್ರ ಶಬ್ದಕ್ಕೆ ಆರು ಬಗೆಯಿಂದ ಆರ್ಥ ಮಾಡಬಹುದೆಂದು ತೋರಿಸಿದ್ದಾರಾದರೂ, ರುದ್ರ ಶಬ್ದಕ್ಕೆ ಕೆಂಪು ಎಂದು ಆರ್ಥಮಾಡಿಲ್ಲ.
ಹಿಂದೂ ಧರ್ಮದಲ್ಲಿ ಪ್ರತಿ ಭಾರತೀಯನು ತಾನು ಹೆಮ್ಮೆಪಡುವಂತಹ ಅನೇಕ ಅದ್ಭುತಗಳಿವೆ. ನಾವು ಇಂದು ನಿಮಗೆ ಹೇಳುವ ಪವಾಡಗಳನ್ನು ನೀವು ಕೇಳಿದರೆ ನಿಜವಾಗಿಯೂ ದೇವರನ್ನು ನಂಬಬೇಕು, ಇದು ಅರಬ್ಬರು ಮತ್ತು ವಡೋದರಾ ಮತ್ತು ಬರೋಡಾ ನಡುವಿನ ಶಿವ ದೇವಸ್ಥಾನ, ಈ ಅದ್ಭುತ ದೇವಸ್ಥಾನದ ಬಗ್ಗೆ ನಿರ್ದಿಷ್ಟವಾದ ವಿಷಯವೆಂದರೆ ಈ ದೇವಾಲಯಗಳು ಯಾವಾಗಲು ನಿಮಗೆ ಕಾಣುವಿದಿಲ್ಲ ಕೇವಲ ಇಲ್ಲಿಯ ಸಮುದ್ರದ ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ನಿಮಗೆ ಶಿವನ ದರ್ಶನ ಭಾಗ್ಯ ಸಿಗುವುದು.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.