ನಾವು ಹೇಳುವ ಈ ಸುಲಭ ಟೆಕ್ನಿಕ್ ಪಾಲಿಸಿದರೆ ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲಾ! ಒಮ್ಮೆ ಪ್ರಯತ್ನ ಪಟ್ಟು ನೋಡಿ.

0
1772

ಈಗ ಮೊಬೈಲ್ ಇಲ್ಲದ ಜನರೇ ಇಲ್ಲ. ಪ್ರತಿಯೊಬ್ಬರ ಕೈಯಲ್ಲಿ ಎರಡೆರಡು ಸ್ಮಾರ್ಟ್ ಫೋನ್ ಇವೆ. ಅದರಲ್ಲಿ ಈಗ ಚೈನಾ ಬ್ರಾಂಡ್’ಗಳು ಬಂದ ಮೇಲೆ ತುಂಬಾ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಸಿಗುತ್ತಿವೆ. ಮನೆ ಬಿಟ್ಟು ಹೋಗದೆ ಆನ್ಲೈನ್ ನಲ್ಲಿ ನಾವು ಬುಕ್ ಮಾಡಿ ಪರ್ಚೇಜ್ ಮಾಡಬಹುದು. ಜಿಯೋ ಬಂದ ಮೇಲೆ ಡಾಟಾಗಳು ಕಡಲೆಪುರಿಯಂತೆ ಕಡಿಮೆ ಬೆಲೆಗೆ ಸಿಗುತ್ತಿವೆ. ಹಾಗಾಗಿ ಯೂಟ್ಯೂಬ್, ಅಮೇಜಾನ್ ಪ್ರೈಮ್ ವೀಡಿಯೋ, ನೆಟ್ ಫ್ಲಿಕ್ಸ್ ಗಳನ್ನು ಜನರು ಜಾಸ್ತಿ ನೋಡುತ್ತಿರುತ್ತಾರೆ. ಎಷ್ಟು ತಂತ್ರಜ್ಞಾನ ಬಂದರೂ ಮೊಬೈಲ್ ಬ್ಯಾಟರಿ ಮಾತ್ರ ಬೇಗ ಖಾಲಿಯಾಗುತ್ತೆ. ಅದಕ್ಕೆ ನಾವು ಕೆಲವೊಂದು ತಂತ್ರಗಳನ್ನು ಬಳಸಿದರೆ ಬ್ಯಾಟರಿ ಉಳಿಸಬಹುದು.

ನಿಮಗೆ ಬೇಕಾದಾಗ ಮಾತ್ರ ಬ್ಲೂಟೂತ್, ವೈಫೈ ಬಳಸಿ : ಕೆಲವರು ಅವರು ಬಳಸಲಿ ಬಿಡಲಿ, ಅವರ ಸ್ಮಾರ್ಟ್ ಫೋನ್’ಗಳಲ್ಲಿ ಬ್ಲೂಟೂತ್ ಮತ್ತು ವೈಫೈ ಗಳನ್ನು ಆನ್ ಮಾಡಿಯೇ ಇರುತ್ತಾರೆ. ಇದರಿಂದ ಅತಿ ಹೆಚ್ಚು ಬೇಗನೇ ಬ್ಯಾಟರಿ ಖಾಲಿಯಾಗುತ್ತದೆ. ನಮಗೆ ಬೇಕಾದಾಗ ಅಂದರೆ ನಾವು ಹಾಡು ಕೇಳಲು ಅನಿಸಿದಾಗ ಮಾತ್ರ ಇನ್ನೊಂದು ಬ್ಲೂಟೂತ್ ಸ್ಪೀಕರ್’ಗೆ ಕನೆಕ್ಟ್ ಮಾಡಿ. ಇಲ್ಲದಿದ್ದರೆ ಕೂಡಲೇ ಬ್ಲೂಟೂತ್ ಆಫ್ ಮಾಡಿ.

ಲೈವ್ ವಾಲ್ ಪೇಪರ್ ಬಳಸಬೇಡಿ : ಕೆಲವರಿಗೆ ಒಂದು ಶೋಕಿ ಇರುತ್ತದೆ ಅವರ ಮೊಬೈಲ್ ತುಂಬಾ ಪದೇ ಪದೇ ಬದಲಾಗುವ ಬಣ್ಣದ ಚಿತ್ರಗಳು, ಹರಿದಾಡುವ ಮೀನುಗಳು, ಹುಡುಗಿಯರ ಚಿತ್ರಗಳು, ಬದಲಾಗುವ ದೇವರ ಫೋಟೋಗಳನ್ನು ವಾಲ್ ಪೇಪರ್ ಆಗಿ ಬಳಸುತ್ತಾರೆ. ಇದರಿಂದ ಬಹು ಬೇಗನೇ ಬ್ಯಾಟರಿ ಖಾಲಿಯಾಗುತ್ತದೆ. ಆದಷ್ಟು ಕಪ್ಪು ಬಣ್ಣದ ವಾಲ್ ಪೇಪರ್ ಬಳಸಿ.

ನೆಟ್ವರ್ಕ್ ಇಲ್ಲದ ಕಡೆ ಆಫ್ ಮಾಡಿ : ದೂರದ ಊರಿಗೆ ಹೋಗುವಾಗ ಘಾಟಿನ ಪ್ರದೇಶದಲ್ಲಿ ನೆಟ್ವರ್ಕ್ ಜಾಸ್ತಿ ಎಳೆಯುತ್ತದೆ. ನಿಮಗೆ ಕಾಲ್ ಬರುವ ಅಥವಾ ಮಾಡುವ ಅವಶ್ಯಕತೆ ಇಲ್ಲದಿದ್ದಾಗ ಘಾಟಿ ಪ್ರದೇಶದಲ್ಲಿ ಹೋಗುವಾಗ ನೆಟ್ವರ್ಕ್ ಆಫ್ ಮಾಡಿಬಿಡಿ.

ಬೇಡದ ಆ್ಯಪ್’ಗಳನ್ನು ಡಿಲೀಟ್ ಮಾಡಿಬಿಡಿ : ನಿಮಗೆ ಯಾವುದು ಬೇಕೋ ಆ ಆ್ಯಪ್’ಗಳನ್ನು ಮಾತ್ರ ಬಳಸಿ. ನೀವು 100 ಪರ್ಸೆಂಟ್ ಚಾರ್ಜ್ ಮಾಡಿ ಫೋನ್ ಬಳಸದಿದ್ದರೂ 80 ಪರ್ಸೆಂಟ್ ಚಾರ್ಜ್ ಆಗಿರುತ್ತದೆ. ಕಾರಣ ಬ್ಯಾಗ್ರೌಂಡ್’ನಲ್ಲಿ ಆ್ಯಪ್ ರನ್ ಆಗುತ್ತಿರುತ್ತದೆ. ಅದ ಕಾರಣ ಅದನ್ನು ಸೆಟ್ಟಿಂಗ್’ಗೆ ಹೋಗಿ ಪೋರ್ಸ್ ಆಫ್ ಮಾಡಿಬಿಡಿ.

ಮೊಬೈಲ್’ನ ಬ್ರೈಟ್ನೆಸ್ ಕಡಿಮೆ ಇಡಿ : ಕೆಲವರು ಮೊಬೈಲ್’ನ ಬ್ರೈಟ್ ನೆಸ್ ಹೆಚ್ಚು ಇಡುತ್ತಾರೆ. ಇದರಿಂದ ಕಣ್ಣಿಗೂ ತೊಂದರೆ, ಬ್ಯಾಟರಿಯು ಬೇಗ ಖಾಲಿಯಾಗುತ್ತದೆ. ಅದರಿಂದ ಆದಷ್ಟು ಕಡಿಮೆ ಬ್ರೈಟ್ ನೆಸ್ ಇಡಿ.

ಒಟ್ಟಾರೆ ಸ್ಮಾರ್ಟ್ ಫೋನ್ ಬ್ಯಾಟರಿ ಉಳಿಕೆಗೆ ಈ ಮೇಲ್ಕಂಡವುಗಳನ್ನು ಬಳಸಿ ನೋಡಿ. ಇಲ್ಲದಿದ್ದರೆ ಸಾವಿರಾರು ರೂಪಾಯಿ ಕೊಟ್ಟು ಪವರ್ ಬ್ಯಾಂಕ್ ಬಳಸಿದರೆ ನಮಗೇ ಲಾಸ್ ಅಲ್ಲವೇ.

LEAVE A REPLY

Please enter your comment!
Please enter your name here