ಕನ್ನಡ ಚಿತ್ರರಂಗದ ಮೈಲಿಗಲ್ಲು ಎಂದು ಹೇಳಬಹುದಾದ ಪೌರಾಣಿಕ ಸಿನಿಮಾದ ಕುರುಕ್ಷೇತ್ರ ಕನ್ನಡ ಮಾತ್ರವಲ್ಲದೆ ತೆಲುಗು ಹಾಗೂ ಹೊರ ದೇಶದಲ್ಲೂ ಅಬ್ಬರಿಸಲು ಶುರುಮಾಡಿದೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರವಾದ ಕುರುಕ್ಷೇತ್ರದಲ್ಲಿ ಕಲಾವಿದರ ದಂಡೇ ಇದೆ, ಕರ್ಣನಾಗಿ ಅರ್ಜುನ್ ಸರ್ಜಾ ಅವರ ಅಭಿನಯ ಎಲ್ಲರ ಮನ ಮುಟ್ಟುವಂತಿದೆ.
ಕಳೆದ ಶುಕ್ರವಾರ ಅಂದರೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಕುರುಕ್ಷೇತ್ರ, ಬಿಡುಗಡೆಯಾದ ಕೇವಲ ನಾಲ್ಕು ದಿನದಲ್ಲಿ ಬಾಕ್ಸಾಫೀಸಿನಲ್ಲಿ ಚಿಂದಿ ಉಡಾಯಿಸಿದೆ, ದರ್ಶನ್ ದುರ್ಯೋಧನ ಆಗಿರುವುದರಿಂದಲೋ ಅಥವಾ ವಾಣಿಜ್ಯಾತ್ಮಕ ಅಂಶಗಳನ್ನು ಈ ಸಿನಿಮಾ ಒಳಗೊಂಡಿರುವದಿಂದಲೂ, ಇಲ್ಲ ಮಹಾಭಾರತದ ಯುದ್ಧ ಆಧಾರಿತ ಸಿನಿಮಾ ಆಗಿರುವುಕ್ಕೋ ಗೊತ್ತಿಲ್ಲ ಆದರೆ ಜನರು ಇದನ್ನು ಬಹಳಷ್ಟು ಇಷ್ಟಪಡಲು ಶುರು ಮಾಡಿದ್ದಾರೆ.
ಇದರಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ್ ಎಂಬುದನ್ನು ಮತ್ತೆ ಎಲ್ಲರಿಗೂ ಸಾಬೀತು ಮಾಡಿದ್ದಾರೆ, ಮುನಿರತ್ನ ಅವರು ಈ ಚಿತ್ರದ ನಿರ್ಮಾಪಕರಾಗಿದ್ದು, ಚಿತ್ರರಂಗದ ಹಿರಿಯ ಕಲಾವಿದರಾದ ಅಂಬರೀಶ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್ ಇದ್ದಾರೆ ಜೊತೆಯಲ್ಲಿ ರವಿಶಂಕರ್, ಸೋನು ಸೂದ್, ಡ್ಯಾನಿ, ನಿಖಿಲ್ ಕುಮಾರ್, ಶ್ರೀನಿವಾಸಮೂರ್ತಿ, ಮೇಘನಾ ರಾಜ್ ಹೀಗೆ ಕಲಾವಿದರ ದಂಡೇ ಇದೆ.
ಇನ್ನು ಮೂಲಗಳಿಂದ ತಿಳಿದುಬಂದ ವಿಚಾರವೆಂದರೆ ಕುರುಕ್ಷೇತ್ರ ಬಿಡುಗಡೆಯಾದ ದಿನವೇ ಅಂದರೆ ಶುಕ್ರವಾರ ಅಂದಾಜು 8.20 ಕೋಟಿ ರೂಪಾಯಿ ಕಲಕ್ಷನ್ ಮಾಡಿದೆಯಂತೆ, ಎರಡನೆಯ ದಿನ ಕೂಡ ಹಬ್ಬದ ಕಡಿಮೆಯಾಗದೆ ಶನಿವಾರ 7.30 ಕೋಟಿ ಕಲೆಕ್ಷನ್ ಮಾಡಿದೆ ಮತ್ತು ಮೂರನೇ ದಿನ 8.70 ಕೋಟಿ ಕಲೆಕ್ಷನ್ ಮಾಡಿ ಸುಮ್ಮನಾಗದ ಕುರುಕ್ಷೇತ್ರ ಸೋಮವಾರ ಬಕ್ರೀದ್ ಹಬ್ಬದ ದಿನದಂದು ಸುಮಾರು 5.30 ಕಲೆಕ್ಷನ್ ಮಾಡಿದೆ, ಉತ್ತರಿಸಿರಿ ಸಿ ಮೊದಲ ನಾಲ್ಕು ದಿನದ ಕಲೆಕ್ಷನ್ ಬರೋಬ್ಬರಿ 29.50 ಕೋಟಿ ರೂಪಾಯಿಯನ್ನು ಬಾಚಿಕೊಂಡಿದೆ.
ಕುರುಕ್ಷೇತ್ರ ಕನ್ನಡ ಮಾತ್ರವಲ್ಲದೆ ತೆಲುಗು ಆವೃತ್ತಿಯಲ್ಲಿ ಯು 80,00,000 ವಿದೇಶದಲ್ಲಿ 1,50,00,000 ಸೇರಿದಂತೆ ಒಟ್ಟಾರೆ 34.80 ಕೋಟಿ ರೂಪಾಯಿಯನ್ನು ಕಲೆಕ್ಷನ್ ಮಾಡಿದೆ, ಇನ್ನು ಈ ಶುಕ್ರವಾರದ ನಂತರ ಅಂದರೆ ಆಗಸ್ಟ್ 15ರ ನಂತರ ಕಾಲಿವುಡ್ ಹಾಗೂ ಮಾಲಿವುಡ್ ನಲ್ಲೂ ಚಿತ್ರ ಬಿಡುಗಡೆಯಾಗಲಿದ್ದು, 100 ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬಂತಾಗಿದೆ.