ಇಷ್ಟಾರ್ಥ ಸಿದ್ಧಿಗಾಗಿ ಮನೆಯಲ್ಲಿಯೇ ಗುರುರಾಘವೇಂದ್ರರ ಆರಾಧನೆಯನ್ನು ಬಹಳ ಸರಳ ಹಾಗೂ ಸುಲಭವಾಗಿ ಮಾಡಿ!

0
2216

ದಾರಿ ಕಾಣದವರ ದಾರಿದೀಪವಾಗಿ ಬರುವ ಗುರುರಾಯರ ಪ್ರಾರ್ಥನೆ ಮಾಡುವವರ ಸಂಖ್ಯೆ ಅಧಿಕ, ರಾಯರನ್ನು ನಂಬಿ ಸೇವೆ ಮಾಡಿದರೆ ಅವರು ಎಂದಿಗೂ ಕೈ ಬಿಡುವುದಿಲ್ಲ, ನಮ್ಮಲ್ಲಿ ಮೊದಲು ದೇವರ ಬಗ್ಗೆ ನಂಬಿಕೆ ಇರಬೇಕು ನಂತರ ನಮ್ಮ ಭಕ್ತಿ ಪರಿಶುದ್ಧವಾಗಿರಬೇಕು, ಏಕ ಭಾವದ ನಿಶ್ಚಲತೆ ಮತ್ತು ಧೃಡತೆ ಇರಬೇಕು, ಆಗಲೇ ಗುರುರಾಯರು ಯಾವುದಾದರೂ ಒಂದು ರೀತಿಯಲ್ಲಿ ಅಥವಾ ರೂಪದಲ್ಲಿ ನಮಗೆ ಪರಿಹಾರವನ್ನು ಕಂಡಿತ ತೋರಿಸುತ್ತಾರೆ.

ರಾಯರ ಆರಾಧನೆ ಬಹಳ ಸುಲಭ ಇವರ ಧ್ಯಾನ ನಮಗೆ ಅಗಾಧವಾದ ನೆಮ್ಮದಿ ತರುತ್ತದೆ, ಶಾಂತಿಯುತ ಬದುಕು ನಡೆಸುವ ನೆಮ್ಮದಿ ಇರುತ್ತದೆ, ದಿನದ ಆರಂಭ ರಾಯರ ನೆನೆದು ಶುರುಮಾಡಿದರೆ ಪಾಪ ನಶಿಸಿಹೋಗುತ್ತದೆ, ಮಂತ್ರಾಲಯಕ್ಕೆ ಹೋಗಲಾಗದ ಭಕ್ತರು ತಮ್ಮ ಮನೆಯ ಹತ್ತಿರದ ಮಠಗಳಿಗೆ ಅಥವಾ ತಮ್ಮ ಮನೆಯಲ್ಲಿಯೇ ರಾಯರ ಆರಾಧನೆಯ ಮಾಡುವ ವಿಧಾನ ಇಂದು ನಾವು ನಿಮಗೆ ತಿಳಿಸುತ್ತೇವೆ.

ಸಾಧ್ಯವಾದರೆ ಮನೆಯ ವಿಶಾಲವಾದ ಕೊಠಡಿಯಲ್ಲಿ, ಅಂದರೆ ಪ್ರದಕ್ಷಿಣೆ ಬರಲು ಅನುಕೂಲವಾಗುವಂತೆ ಸ್ಥಳವನ್ನು ಶುದ್ಧಮಾಡಿ ರಂಗೋಲಿ ಹಾಕಿ, ಅದರ ಮೇಲೆ ಒಂದು ಮಣೆ ಇಡಬೇಕು, ನೀವು ದೇವರ ಮನೆಯಲ್ಲಿ ಬಳಸುವ ಮಣೆ ಇಟ್ಟರೆ ತುಂಬಾ ಒಳ್ಳೆಯದು, ದೇವರ ಮನೆಯಲ್ಲಿ ಪ್ರದಕ್ಷಣೆ ಮಾಡುವಷ್ಟು ಸ್ಥಳವಿದ್ದರೆ ಈ ಪೂಜೆಯನ್ನು ಅಲ್ಲಿ ಮಾಡಬಹುದು, ಆ ಮಣೆಯ ಮೇಲೆ ಸೂತ್ರ-ಭಾಷ್ಯ-ತತ್ವಪ್ರಕಾಶಿಕಾ-ಚಂದ್ರಿಕಾ ಸಮೇತವಾದ ರಾಘವೇಂದ್ರ ಸ್ವಾಮಿಗಳ ಪ್ರಕಾಶಿಕ ಗ್ರಂಥ, ಪರಿಮಳ ಅಥವಾ ರಾಘವೇಂದ್ರಸ್ವಾಮಿಗಳ ಗ್ರಂಥ ಇಡಬೇಕು, ಅದರ ಹಿಂಭಾಗದಲ್ಲಿ ಪರಮ ಮಂಗಳವಾದ ಮೂಲವೃಂದಾವನದ ಚಿತ್ರವನ್ನಿಡಬೇಕು ಮಣೆ ಮುಂದೆ ದೀಪವನ್ನು ಹಚ್ಚಿಡಬೇಕು.

ಮನೆಯಲ್ಲೇ ಬೆಳೆದ ಹೂಗಳನ್ನು ಒಂದು ಪಾತ್ರೆಯಲ್ಲಿಟ್ಟುಕೊಂಡು ರಾಘವೇಂದ್ರ ಸ್ವಾಮಿ ನಮಃ ಎಂದು ಹೇಳುತ್ತಾ ಹೂಗಳನ್ನು ಏರಿಸಬೇಕು, ಬಳಿಕ ಎದ್ದು ನಿಂತು ವೇದವ್ಯಾಸ, ಮದ್ವಾಚಾರ್ಯರು, ಮಟ್ಟೀಕಾಕೃತ್ಪಾದರು, ಮಚ್ಚಂದ್ರಕಾಚಾರ್ಯ, ರಾಘವೇಂದ್ರ ಸ್ವಾಮಿಗಳನ್ನು ನೆನೆದು ಮನದಣಿಯೆ, ಮೈದಣಿಯೆ ಶ್ರೀ ಗುರುಭ್ಯೋ ನಮಃ ಎನ್ನುತ್ತಾ ಶ್ರೀ ರಾಘವೇಂದ್ರಾಯ ನಮಃ ಎನ್ನುತ್ತಾ ಮಾಂ ಪಾಹಿ ಮಾಂ ಪಾಹಿ ಎನ್ನುತ್ತಾ ಪ್ರದಕ್ಷಿಣೆ ಬಂದು ಭಕ್ತಿ ಪೂರ್ವಕವಾಗಿ ನಮಸ್ಕಾರ ಮಾಡಬೇಕು.

ಗುರುರಾಯರನ್ನು ಭಕ್ತಿಯಿಂದ ನೆನೆಯಬೇಕು. ಸಾಧ್ಯವಾದರೆ ಕೆಲವರಿಗೆ ಅನ್ನಸಂತಾರ್ಪಣೆ ಏರ್ಪಡಿಸಬೇಕು, ಬೃಂದಾವನ ಪ್ರದಕ್ಷಿಣ ನಮಸ್ಕಾರಾಭಿಸ್ತುತಿ ಅಂದರೆ ಬೃಂದಾವ ನೋಡಿದರೆ, ರಾಯರಿಗೆ ಅಭಿಷೇಕ ಮಾಡುವುದನ್ನ ನೋಡಿದರೆ, ರಾಯರಿಗೆ ಅಭಿಷೇಕ ಮಾಡಿದಂತಹ ಅಭಿಷೇಕವನ್ನು ಪಾನ ಮಾಡಿದರೆ ಇವೆಲ್ಲವುದರಿಂದ ದೋಷ ಪರಿಹಾರವಾಗುತ್ತದೆ, ಈ ರೀತಿಯಾಗಿ ಕಲಿಯುಗದ ಕಾಮಧೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಈ ಪರಮ ಪುಣ್ಯ ಆರಾಧನೆಯ ಎರಡೆನೇ ಶುಭ ದಿನದಲ್ಲಿ ಭಕ್ತಿಯಿಂದ ರಾಯರ ಸ್ಮರಣೆಯನ್ನು ಮಾಡಿ ಧನ್ಯರಾಗೋಣ.

LEAVE A REPLY

Please enter your comment!
Please enter your name here