ಹುಲಿಕಲ್ ನಾಗರಾಜ್ ಅವರ ಬಗ್ಗೆ ನಿಮಗೆ ತಿಳಿದಿರಬಹುದು, ದೇಶದಲ್ಲಿ ನಡೆಯುವ ಹಲವು ರೀತಿಯ ಮೌಢ್ಯ ಆಚರಣೆಗಳನ್ನು, ಮೂಢನಂಬಿಕೆಗಳನ್ನು ಆದಷ್ಟು ತೊಲಗಿಸಬೇಕು ಜನರಿಗೆ ಸತ್ಯದ ಅರಿವಾಗಬೇಕು, ಎಂಬುವ ನಿಟ್ಟಿನಲ್ಲಿ ಏಲ್ಲಿ ಭೂತಪ್ರೇತಗಳ ಕಾಟವಿದೆ ಎಂದರು ಅಲ್ಲಿಗೆ ತಕ್ಷಣವೇ ಬಂದುಬಿಡುತ್ತಾರೆ ಹಾಗೂ ಅಲ್ಲಿನ ಜನಕ್ಕೆ ಯಾವುದೇ ಭೂತ ಮತ್ತು ಪ್ರೇತಗಳು ಇಲ್ಲವೆಂದು ಸಾಬೀತು ಮಾಡಿದ ನಂತರವೇ ಅಲ್ಲಿಂದ ಹೊರಡುತ್ತಾರೆ.
ಕನ್ನಡದ ಪ್ರಖ್ಯಾತ ಖಾಸಗಿ ಸುದ್ದಿ ವಾಹಿನಿಯಾದ ಟಿವಿ5 ಕನ್ನಡ ಮಾಧ್ಯಮದಲ್ಲಿ ಹುಲಿಕಲ್ ನಾಗರಾಜ್ ಅವರು ನಿಗೂಢ ಸತ್ಯ ಎಂಬುವ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ, ಈ ಕಾರ್ಯಕ್ರಮದಲ್ಲಿ ಹಲವು ರೀತಿಯ ನಿಗೂಢವಾದ ಸತ್ಯಗಳ ಹಿಂದೆ ಇರುವ ಅಸ್ತಗಳ ಪರಿಚಯ ಮಾಡಿಕೊಡುತ್ತಾರೆ, ಅದೇ ರೀತಿಯಲ್ಲಿ ಜಾದು ಮಾಡುವವರು ತಮ್ಮ ಕೈಯಲ್ಲಿ ಬಟ್ಟೆಯನ್ನು ಹಿಡಿದುಕೊಂಡು ಅದನ್ನು ಮುಷ್ಟಿಯಲ್ಲಿ ಮಾಯ ಮಾಡುವುದನ್ನು ನಾವು ನೋಡಿರುತ್ತೇವೆ.
ಹಾಗೂ ಈ ಜಾದುವನ್ನು ನೋಡಿ ಅಚ್ಚರಿ ಪಟ್ಟಿರುತ್ತವೆ ನಿಜ ಆದರೆ ನಿಜವಾಗಿಯೂ ಬಟ್ಟೆ ಮಾಯವಾಗುತ್ತ, ಕೆಲವರು ಹೇಳುತ್ತಾರೆ ಶೂನ್ಯದಿಂದ ವಸ್ತುಗಳನ್ನು ಸೃಷ್ಟಿ ಮಾಡುತ್ತೇವೆ ಎಂದು, ಅದು ಸಾಧ್ಯನಾ, ಈ ವಿಚಾರದ ಬಗ್ಗೆ ಹುಲಿಕಲ್ ನಾಗರಾಜ್ ಅವರು ಎಷ್ಟು ಸುಲಭವಾಗಿ ನಿಮಗೆ ವಿವರಿಸುತ್ತಾರೆ ಎಂಬುದನ್ನು ಈ ಕೆಳಗಿರುವ ವಿಡಿಯೋದಲ್ಲಿ ನೋಡಿ.
ಭೂಮಿಯ ಮೇಲೆ ಯಾವುದೇ ರೀತಿಯ ಜಾದು ಗಳನ್ನು ಮಾಡಲು ಸಾಧ್ಯವಿಲ್ಲ, ಇಲ್ಲದ ವಸ್ತುಗಳನ್ನು ಸೃಷ್ಟಿ ಮಾಡಲು ಅಥವಾ ಇರುವ ವಸ್ತುಗಳನ್ನು ಮಾಯ ಮಾಡುವ ಶಕ್ತಿ ಯಾರಿಗೂ ಇಲ್ಲ, ಸಮಾಜ ಮೂಢನಂಬಿಕೆಗಳಿಗೆ ಕಿವಿ ಕೊಡುವ ಬದಲು ವಿಜ್ಞಾನದ ಕಡೆಗೆ ಗಮನ ಕೊಟ್ಟು ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.