ಪುಣ್ಯಕ್ಷೇತ್ರದ ಒಂದು ಹಿಡಿ ಮಣ್ಣು ನಿಮ್ಮ ಈ ಜನ್ಮದ ಸಕಲ ಕಷ್ಟ ನೀಗಿಸುತ್ತದೆ ಹೇಗೆ ನೋಡಿ

0
2073

ಪವಿತ್ರ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಅಲ್ಲಿಂದ ಏನಾದರೂ ಒಂದು ವಸ್ತುವನ್ನು ಮನೆಗೆ ತರುವ ಅಭ್ಯಾಸ ಹಲವರಲ್ಲಿ ಇದ್ದೇ ಇರುತ್ತದೆ, ಇನ್ನು ಕೆಲವರು ಕಡ್ಡಾಯವಾಗಿ ಪುಣ್ಯ ಕ್ಷೇತ್ರದಿಂದ ಅರ್ಚನೆಯ ಕುಂಕುಮ ಮತ್ತು ಪ್ರಸಾದವನ್ನು ಮರೆಯದೆ ಮನೆಗೆ ತಂದು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ಎಲ್ಲರಿಗೂ ಹಂಚಿ ತಾವು ತಿನ್ನುತ್ತಾರೆ, ಈ ರೀತಿಯ ಆಚರಣೆಗಳು ಬಹಳ ಸಮಯದಿಂದಲೂ ನಡೆದುಕೊಂಡು ಬಂದಿದೆ, ಅದೇ ರೀತಿಯಲ್ಲಿ ನೀವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವಸ್ಥಾನದ ಸುತ್ತಲಿನ ನೆಲದಲ್ಲಿ ಒಂದು ಹಿಡಿ ಮಣ್ಣನ್ನು ಮನೆಗೆ ತಂದು ಹೀಗೆ ಮಾಡುವುದರಿಂದ ಏನಾಗುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ಹೇಳುತ್ತಿದ್ದೇವೆ ಸಂಪೂರ್ಣವಾಗಿ ಓದಿ.

ಪುಣ್ಯಕ್ಷೇತ್ರಗಳು ಅಥವಾ ನಿಮ್ಮ ಮನೆಯ ಹತ್ತಿರ ಇರುವ ಶಕ್ತಿಶಾಲಿ ದೇವಾಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದ ಹತ್ತಿರ ನೆಲದ ಮಣ್ಣನ್ನು ತಂದು ಇಂದು ನಾವು ನಿಮಗೆ ಹೇಳುವ ರೀತಿಯಲ್ಲಿ ಮಾಡಿದರೆ ಸಕಲ ದಾರಿದ್ರ್ಯ ನಿವಾರಣೆಯಾಗುವುದು ಎನ್ನಲಾಗುತ್ತದೆ, ಅಷ್ಟೇ ಅಲ್ಲದೆ ಇನ್ನೂ ಅನೇಕ ಲಾಭಗಳು ಈ ರೀತಿಯ ದೇವಸ್ಥಾನದ ಮಣ್ಣುಗಳನ್ನು ತರುವುದರಿಂದ ಇದೆ, ಪ್ರತಿಯೊಂದು ವಸ್ತುವೂ, ಪ್ರಾಣಿ ಪಕ್ಷಿಗಳು, ಜೀವಜಂತುಗಳು ಕೊನೆಯಲ್ಲಿ ಸೇರ ಬೇಕಾಗಿರುವುದು ಮಣ್ಣನ್ನೇ, ಹಿರಿಯರು ಹೇಳುವ ಹಾಗೆ ಜನನ ಮತ್ತು ಮ’ರಣ ಎರಡು ಮಣ್ಣಿಂದಲೇ, ಇದೇ ಮಣ್ಣಿನಿಂದಲೇ ಭೂಮಿ ಮೇಲೆ ಚಮತ್ಕಾರಗಳು ನಡೆಯುವುದು ಹಾಗೂ ನಡೆಯುತ್ತಿರುವುದು, ಇದೇ ಮಣ್ಣನ್ನು ಬಳಸಿಕೊಂಡು ನಿಮ್ಮ ಸಕಲ ಕಷ್ಟಗಳನ್ನು ನೀಗಿಸಿಕೊಳ್ಳಬಹುದು.

ದುಡಿದ ಹಣವನ್ನು ಸಂಗ್ರಹಿಸಲು ಸಾಧ್ಯವಾಗದೆ ಬಂದ ಹಣವೆಲ್ಲ ಖರ್ಚಾಗುತ್ತಿದೆ, ಮನೆಯಲ್ಲಿ ಮಕ್ಕಳು ಸರಿಯಾಗಿ ಓದುತ್ತಿಲ್ಲ ಎಂದರೆ, ಸತಿಪತಿಗಳ ನಡುವೆ ಜಗಳ ಇದ್ದರೆ ಇಂದು ನಾವು ನಿಮಗೆ ತಿಳಿಸುವ ಹಾಗೆ ಮಾಡಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ. ಪುಣ್ಯ ಕ್ಷೇತ್ರಗಳಿಂದ ತಂದ ಮಣ್ಣನ್ನು ಪವಿತ್ರ ಜಲ ಅಥವಾ ಸಾಧ್ಯವಾದರೆ ಗಂಗಾಜಲವನ್ನು ಬಳಸಿ ಮಣ್ಣನ್ನು ಉಂಡೆ ಮಾಡಿ, ಹಾಗೂ ಆ ಮಣ್ಣಿನ ಉಂಡೆಯನ್ನು ಮನೆಯ ನೈಋತ್ಯ ದಿಕ್ಕಿನಲ್ಲಿ ಇಟ್ಟು, ಪೂಜೆ ಮಾಡಬೇಕು, ಈ ರೀತಿ ಮಾಡುವುದರಿಂದ ನಿಮ್ಮ ಮನೆಯ ಸಕಲ ಕಷ್ಟಗಳು ನಿವಾರಣೆಯಾಗುತ್ತದೆ.

ಪುಣ್ಯಕ್ಷೇತ್ರದಲ್ಲಿ ಸಕಾರತ್ಮಕ ಶಕ್ತಿಗಳು ಇರುವಂತೆ ಪುಣ್ಯಕ್ಷೇತ್ರದ ಮಣ್ಣಿನಲ್ಲೂ ಸಹ ಪೋಸಿತಿವೆ ಎನರ್ಜಿ ತುಂಬಿರುತ್ತದೆ, ಅದಕ್ಕಾಗಿಯೇ ಅಲ್ಲಿನ ಮಣ್ಣನ್ನು ತಂದು ಜಲದಿಂದ ಉಂಡೆಮಾಡಿ ನೈಋತ್ಯ ದಿಕ್ಕಿನಲ್ಲಿ ಇಟ್ಟು ದಿನನಿತ್ಯ ಪೂಜೆ ಮಾಡಿ ಭಗವಂತನ ಅನುಗ್ರಹ ಪಡೆದುಕೊಳ್ಳಿ.

LEAVE A REPLY

Please enter your comment!
Please enter your name here