ಸ್ಟ್ರಾಬರಿ ಹಣ್ಣು ತಿನ್ನಲು ರುಚಿ, ಆದರೆ ಜೀವಕ್ಕೆ ಮಾರಕ, ಯಾಕೆ ಗೊತ್ತಾ..?

0
1792

ಸ್ಟ್ರಾಬರಿ ಹಣ್ಣಿನಲ್ಲಿ ವಿಷವಿದೆ ಎಂದು ನಾವು ನಿಮಗೆ ಹೇಳುತ್ತಿಲ್ಲ, ಸ್ಟ್ರಾಬರಿ ಹಲವು ಅರೋಗ್ಯ ಲಾಭಗಳನ್ನು ಹೊಂದಿದೆ, ಆದರೆ ಸ್ಟ್ರಾಬರಿ ಹಣ್ಣು ಆಧುನಿಕ ರಾಸಾಯನಿಕಗಳನ್ನು ಸಿಂಪಡಿ ಬೆಳೆಯುತ್ತಾರೆ, ಇದರಲ್ಲಿ ಏನಿದೆ ಹೊಸತು ಎಂದು ನೀವು ಕೇಳಬಹುದು, ಸಧ್ಯ ಪ್ರತಿ ಹಣ್ಣು ಹಾಗು ತರಕಾರಿಗಳನ್ನು ಸಹ ಹೀಗೆಯೇ ಬೆಳೆಯುವುದು, ಸ್ಟ್ರಾಬರಿಯಲ್ಲಿ ಏನು ವೆತ್ಯಾಸ ಎಂದು ನಿಮ್ಮ ಮನದಲ್ಲಿ ಪ್ರೆಶ್ನೆ ಹುಟ್ಟಿದರೆ ಮುಂದೆ ಓದಿ.

ಸ್ಟ್ರಾಬೆರಿ ಹೆಸರು ಕೇಳಿದರೆ ಸಾಕು ಬಾಯಲ್ಲಿ ನೀರು ಬರುತ್ತದೆ, ಅಷ್ಟು ರುಚಿಯಾಗಿರುತ್ತದೆ ಈ ಹಣ್ಣು, ಹೆಚ್ಚಾಗಿ ಮಕ್ಕಳು ಸ್ಟ್ರಾಬೆರಿ ಫ್ಲೇವರ್ ಇಷ್ಟ ಪಡುತ್ತಾರೆ, ಐಸ್ ಕ್ರೀಮ್, ಚಾಕೋಲೇಟ್, ಇನ್ನು ಹಲವು ಬಗೆಯ ಸಿಹಿ ತಿಂಡಿಗಳು ಸಹ ಇದೆ ಫ್ಲೇವರ್ ಅಲ್ಲಿ ಸಿಗುತ್ತವೆ, ಚಾಕೊಲೇಟ್ ಫ್ಲೇವರ್ ಗಿಂತ ಸ್ಟ್ರಾಬೆರಿಫ್ಲೇವರ್ ಮಕ್ಕಳಿಗೆ ಹೆಚ್ಚು ಇಷ್ಟ ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ, ಇದನ್ನ ತಿಂದರೆ ಪ್ರಾಣಕ್ಕೆ ಮಾರಕ. ಯಾಕಂದ್ರೆ ಈ ಹಣ್ಣಿನಲ್ಲಿ ಕ್ರಿಮಿನಾಶಕಗಳು ಹಾಗೇ ಉಳಿದುಕೊಂಡುಬಿಡುತ್ತವೆ ಅನ್ನೋದು ಸಂಶೋಧನೆಯಲ್ಲಿ ಸಾಬೀತಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನೆಯ ಪ್ರಕಾರ ಕ್ರಿಮಿನಾಶಕಗಳು ಮಾನವರಿಗೆ ಅತ್ಯಂತ ವಿಷಕಾರಿ, ಅವು ನಮ್ಮ ಸಂತಾನೋತ್ಪತ್ತಿ, ಇಮ್ಯೂನ್ ಸಿಸ್ಟಂ ಹಾಗೂ ನರ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುತ್ತವೆ, ಕ್ಯಾನ್ಸರ್ ಗೂ ಕಾರಣವಾಗುತ್ತವೆ.
48 ಬಗೆಯ ಹಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವುಗಳ ಪೈಕಿ ಸ್ಟ್ರಾಬೆರಿಯಲ್ಲಿ ಕ್ರಿಮಿನಾಶಕದ ಪ್ರಮಾಣ ಅತ್ಯಧಿಕವಾಗಿದೆ. ಸ್ವೀಟ್ ಕಾರ್ನ್ ಮತ್ತು ಅವೊಕಾಡೋಗಳಲ್ಲಿ ಕೀಟನಾಶಕಗಳ ಪ್ರಮಾಣ ಅತ್ಯಂತ ಕಡಿಮೆ ಇತ್ತು.

ಸ್ಟ್ರಾಬೆರಿಯಲ್ಲಿ ಸುಮಾರು 20 ಬಗೆಯ ಕ್ರಿಮಿನಾಶಕಗಳು ಪತ್ತೆಯಾಗಿವೆ. ಪಾಲಕ್ ಸೊಪ್ಪು, ಸ್ಟ್ರಾಬೆರಿ ನಂತರದ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಪ್ರತಿವರ್ಷಕ್ಕೆ ಒಬ್ಬ ವ್ಯಕ್ತಿ ಕಡಿಮೆ ಅಂದ್ರೂ 8 ಪೌಂಡ್ ನಷ್ಟು ಸ್ಟ್ರಾಬೆರಿ ತಿನ್ನುತ್ತಾರೆ. ಅವನ್ನು ತೊಳೆದು ಸ್ವಚ್ಛಗೊಳಿಸಿದ್ರೂ ಕೀಟನಾಶಕಗಳ ಅಪಾಯ ಇದ್ದೇಇರುತ್ತದೆ ಎಂಬುದು ಸಂಶೋದನೆಯಲ್ಲಿ ತಿಳಿದು ಬಂದಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here